ವಿಟ್ಲದ ಪುಣಚ ಗ್ರಾಮದಲ್ಲಿ ‘ ಪ್ರೀತ್ಸೇ ಪ್ರೀತ್ಸೇ ‘ ಎಂದು ಅಪ್ರಾಪ್ತೆಯ ಪೀಡನೆ : ಆರೋಪಿ ಮನೋಹರನ ಮೇಲೆ ಪೋಕ್ಸೋ ಜಡಿದಿದೆ !

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ನಿವಾಸಿಯಾಗಿರುವ 7ನೇ ತರಗತಿಯ ವಿಧ್ಯಾರ್ಥಿನಿಯನ್ನು, ಪುಣಚ ಗ್ರಾಮದ ಮನೋಹರ ಎಂಬಾತನು ಸುಮಾರು ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದನು.

ದಿನಾಂಕ : 02.02.2020 ರಂದು ಸಂತ್ರಸ್ಥ ಬಾಲಕಿಯು ಪರಿಯಾಲ್ತಡ್ಕ ಪೇಟೆಗೆ ಹೋಗಿ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಾಸ್ ಬರುವಾಗ ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಆಕೆ ಒಬ್ಬಳೇ ನಿಂತಿದ್ದಳು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆ ಸಮಯದಲ್ಲಿ ಆರೋಪಿಯಾದ ಮನೋಹರನು ಮೋಟಾರ್ ಸೈಕಲ್ ನಲ್ಲಿ ಬಂದು ಬಾಲಕಿಗೆ ಕಿರುಕುಳವನ್ನು ನೀಡಿದ್ದನು.

ಬಾಲಕಿಯು ಆ ಕೂಡಲೇ ವಿಷಯವನ್ನು ಮನೆಯವರಿಗೆ ತಿಳಿಸಿದ್ದಳು. ಅಂತೆಯೇ ದಿನಾಂಕ 21.02.2020 ರಂದು ಬಾಲಕಿಯ ಪಾಲಕರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಪ್ರಕರಣದ ತೀವ್ರತೆಯನ್ನು ಗಮನಿಸಿ ಕೊಂಡ ಪೊಲೀಸರು ಆರೋಪಿಯ ವಿರುದ್ಧ ಕಲಂ: 354 (ಡಿ) ಐಪಿಸಿ & ಕಲಂ 8, 12 ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ. ಮತ್ತು ಆ ಕೂಡಲೇ ಆರೋಪಿಯನ್ನು ಬಂಧಿಸಲಾಗಿರುತ್ತದೆ.

ಈಗ ತನಿಖೆ ಪ್ರಗತಿಯಲ್ಲಿದೆ.

error: Content is protected !!
Scroll to Top
%d bloggers like this: