ಅರಂತೋಡು| ಈಜಲು ಹೋದ ಮಾಡಾವಿನ ಯುವಕ ಮೃತ್ಯು

0 11

ಸುಳ್ಯ : ಸಂಬಂಧಿಕರ ಮನೆಗೆ ಬಂದಿದ್ದ ಯುವಕನೋರ್ವ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಕೊಡೆಂಕಿರಿ ಎಂಬಲ್ಲಿ ಫೆ.21 ರಂದು ನಡೆದಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನ ಸಣಂಗಳ ನಿವಾಸ ರಂಜಿತ್ ಪೂಜಾರಿ(24.ವ) ಎಂಬ ಯುವಕ ಕೊಡೆಂಕಿರಿಗೆ ಸಂಬಂಧಿಕರ ಮನೆಗೆ ಹೋಗಿದ್ದ.

ಅಲ್ಲಿ ಮನೆಯ ಸಮೀಪದ ನದಿಗೆ ಈಜಲು ಹೋದಾಗ ನೀರಿನಲ್ಲಿ ಮೃತಪಟ್ಟ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply