ವಿವಿಧ ಕಲೆಗಳಲ್ಲಿ ಪಳಗಿದ ಪ್ರತಿಭೆ । ಯಕ್ಷಗಾನ, ನಾಟ್ಯ, ಭಾಗವತಿಕೆಯಲ್ಲಿ ಮಿಂಚುತ್ತಿರುವ ಕಡಬದ ಶ್ರೇಯಾ

ಕರಾವಳಿಯಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಈ ಭಾಗದ ಜನ ಕಲೆಗೆ ತಮ್ಮದೇ ಆದ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕರಾವಳಿ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ಯಕ್ಷಗಾನದ ವೈಭವದ ಕುಣಿತ, ಭಾಗವತಿಗೆ ಇಂತಹ ಕಲೆಯನ್ನು ಮೈಗೂಡಿಸಿಕೊಂಡು ಯಕ್ಷಗಾನ ಗಂಡು ಕಲೆಯಲ್ಲಿ ಹೆಣ್ಣು ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದನ್ನು ತೊರಿಸಿಕೊಟ್ಟಿರುವರು ಶ್ರೇಯಾ ಎ.

ಹೆತ್ತವರ ಪೊತ್ಸಾಹ

ಇವರು ಕಡಬ ತಾಲೂಕಿನ ಆಲಂಕಾರು ಪೆರಾಬೆ ಯೋಗೀಶ ಆಚಾರ್ಯ ಮತ್ತು ಶ್ಯಾಮಲ ದಂಪತಿಯ ಪುತ್ರಿ. ಪ್ರಸ್ತುತ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಾ ಬಾಲ್ಯದಿಂದಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು. ಇವರ ಈ ಪ್ರತಿಭೊತ್ಸಹವನ್ನು ಮನಗಂಡ ಮನೆಯವರು ಅವರ ಉತ್ಸಾಹಕ್ಕೆ ಪೊತ್ಸಾಹ ಮಾಡಿದರು. ಶ್ರೇಯಾರವರ ಮನೆಯಲ್ಲಿ ಕಲಾಸಕ್ತರೇ ಹೊಂದಿದ್ದು, ಕಲಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಅಷ್ಟೊಂದು ಕಷ್ಟವಾಗಲಿಲ್ಲ. ಅವರು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿದ್ದ ಆಲಂಕಾರಿನ ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ತಂದೆ ಯೋಗ ತರಬೇತಿಯನ್ನು ನೀಡುತ್ತಿದ್ದರು.

ಹಾಗೇ ಯಕ್ಷಗಾನದ ಬಗ್ಗೆ ಅಭಿಮಾನ ಹೊಂದಿದ ಶ್ರೇಯಾರ ತಂದೆ, ತನ್ನ ಊರಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳಿಗೆ 11 ತಿಂಗಳ ಶ್ರೇಯಾನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಬಾರಿಸುತ್ತಿದ್ದ ಚಂಡೆ, ಭಾಗವತರ ಭಾಗವತಿಗೆ ಎಲ್ಲವೂ ಶ್ರೇಯಾರಿಗೆ ಯಕ್ಷಗಾನದ ಮೇಲೆ ಆಸಕ್ತಿ ಬೆಳೆಯುವಂತೆ ಮಾಡಿತು.
ಶ್ರೇಯಾರವರ ತಾಯಿ ಶ್ಯಾಮಲ ಬಹುಮುಖ ಪ್ರತಿಭೆಯಾಗಿದ್ದು, ಅಣ್ಣ ಶಿವಪ್ರಸಾದ್ ಚಿತ್ರಕಲೆಯಲ್ಲಿ, ತಮ್ಮ ಯಶಸ್ವೀ ಯಕ್ಷಗಾನ, ನಾಟಕ ಮುಂತಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರೇಯಾರವರ ಕಲಾಸಕ್ತಿಗೆ ಜೊತೆಯಲ್ಲಿ ಸಾಥ್ ನೀಡುತ್ತಾ ಬಂದಿದ್ದಾರೆ.

ಕಲೆಗಳ ಮೇಲಿನ ಆಸಕ್ತಿ

ಆಲಂಕಾರಿನ ಶಿಶುಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಪ್ರಮಿಳಾ ಲೋಕೆಶ್‍ರವರಲ್ಲಿ, 3ನೇ ತರಗತಿಯಿಂದ ರಾಘವೇಂದ್ರ ಪ್ರಸಾದ್‍ರವರಲ್ಲಿ ಭರತನಾಟ್ಯ ತರಬೇತಿಯನ್ನು ಪಡೆದು ಪ್ರಥಮ ಶ್ರೇಣಿಯಲ್ಲೇ ಜೂನಿಯರ್ ಪರೀಕ್ಷೆಯನ್ನು ತೆರ್ಗಡೆಯಾಗಿದ್ದಾರೆ. 2ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಯಕ್ಷಗಾನ ನಾಟ್ಯವನ್ನು ಲಕ್ಷ್ಮಣ ಆಚಾರ್ಯ ಎಡಮಂಗಲ ಹಾಗೂ ಪ್ರೌಢ ವಿದ್ಯಾಭ್ಯಾಸ ಮಾಡುತ್ತಿರುವಾಗದಿಂದ ಚಂದ್ರ ಶೇಖರ ಸುಳ್ಯಪದವು, ಬಾಲಕೃಷ್ಣ ಪೂಜಾರಿ ಉಡ್ಡಂಗಲ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. 3ನೇ ತರಗತಿ ಇರುವಾಗ ವಿದ್ವಾನ್ ಕಾಂಚನ ಈಶ್ವರ್ ಭಟ್ ಅವರಿಂದ ಸಂಗೀತ ಅಭ್ಯಾಸ ಮಾಡಿರುತ್ತಾರೆ. ಭಾಗವತಿಕೆಯನ್ನು ಇತ್ತಿಚಿನ 2 ವರುಷಗಳಿಂದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಂದ ಕಲಿಯುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಭಜನೆ, ಚಿತ್ರಕಲೆಯಲ್ಲಿ ಶ್ರೇಯಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತ್ರಿ- ಸನ್ಮಾನಗಳು

ಪುತ್ತೂರು ತಾಲೂಕಿನ ಕುಂತೂರು ಘಟಕದ ನಾಟ್ಯಾರಾಧನಾ ನೃತ್ಯಾಲಯ ಶ್ರೇಯಾರವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಲಾದ, ಕಲಾಶ್ರೀ ಪ್ರಶಸ್ತ್ರಿಯನ್ನು ಪಡೆದುಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಆಯೋಜಿಸಲಾದ ಪ್ರತಿಭಾ ಕಾರಂಜಿಗಳಲ್ಲಿ ಯಕ್ಷಗಾನ, ಸಂಗೀತ, ನೃತ್ಯ ಪ್ರದರ್ಶಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕಲೆಯನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬ ಹಂಬಲ ಹೊಂದಿರುವ ಇವರು ಭವಿಷ್ಯದಲ್ಲಿ ಪತ್ರಿಕೋದ್ಯಮಿಯಾಗಬೇಕೆಂಬ ಗುರಿ ಹೊಂದಿದ್ದಾರೆ.

ಕಾರ್ಯವನ್ನು ಇಷ್ಟಪಟ್ಟು ಮಾಡೋದು ಮುಖ್ಯ

ಯಾವುದೇ ಒಂದು ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಕಷ್ಟದ ಮಾತೇ ಇಲ್ಲ. ತನ್ನ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ತಂದೆ-ತಾಯಿ ನನ್ನ ಎದುರು ಅದನ್ನು ವ್ಯಕ್ತ ಪಡಿಸದೇ,ನನಗೆ ಸದಾ ಬೆನ್ನೆಲುಬಾಗಿದ್ದಾರೆ. ತಂದೆ- ತಾಯಿಗೆ ಹೆಮ್ಮೆ ಪಡುವಂತ ಕೆಲಸ ಮಾಡಬೇಕು. ಹೆತ್ತವರ, ಗುರುಗಳ ಪೊತ್ಸಾಹ ನನ್ನ ಈ ಪುಟ್ಟ ಯಶಸ್ಸಿಗೆ ಕಾರಣ. ಪ್ರತಿ ವಿದ್ಯಾರ್ಥಿಯಲ್ಲೂ ಅವರದ್ದೇ ಆದ ಪ್ರತಿಭೆ ಇರುತ್ತದೆ.ಅವರನ್ನೂ ಮುಖ್ಯ ವಾಹಿನಿಗೆ ತರಲು ತಂದೆ- ತಾಯಿಯ ಮಾರ್ಗದರ್ಶನ ಅಗತ್ಯ” ಇದು ಇದು ಶ್ರೇಯಾಳ ಮಾತು.

ಸಾಧನೆ ಸುಲಭದ ತುತ್ತಲ್ಲ

ನನ್ನ ಮಗಳಾ ಕಲಾಸಕ್ತಿ ಬಗ್ಗೆ ನಮ್ಮಲ್ಲಿ ತುಂಬಾ ಸಂತೋಷವಿದೆ. ಅದರೆ ಸಾಧನೆ ಎಂಬುದು ಸುಲಭವಾಗಿ ದೊರೆಯದು. ಪರಿಶ್ರಮ ಅಗತ್ಯ. ಹಾಗೇ ಶ್ರೇಯಾಳ ಸಾಧನೆ ಇಲ್ಲಿಗೆ ಮುಗಿದಿಲ್ಲ. ಕಲಿಯಲೂ ಎನ್ನೂ ಇದೆ. ಅವಳ ಯಶಸ್ಸಿಗೆ ನಮ್ಮ ಸದಾ ಬೆಂಬಲವಿದೆ.– ಶ್ಯಾಮಲ, ಶ್ರೇಯಾರವರ ತಾಯಿ.

ಚಿತ್ರ ಲೇಖನ

ಬೃಂದಾ ಪಿ. ಮುಕ್ಕೂರು

ದ್ವೀತಿಯ ಪತ್ರಿಕೊದ್ಯಮ,
ವಿವೇಕಾನಂದ ಕಾಲೇಜು, ಪುತ್ತೂರು.

Leave A Reply

Your email address will not be published.