ಬರೆಪ್ಪಾಡಿ | ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ| ಜೀರ್ಣೋದ್ಧಾರ ಸಂಕಲ್ಪ ವಿಧಿ

ಕಡಬ : ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಇರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20 ನೇವರ್ಷದ ಮಹಾಶಿವರಾತ್ರಿ ಉತ್ಸವ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಸಂಕಲ್ಪ ವಿಧಿ ಕಾರ್ಯಕ್ರಮ ಫೆ 21 ರಂದು ನಡೆಯಿತು.


Ad Widget

Ad Widget
ಪಂಚಲಿಂಗೇಶ್ವರ ದೇವರಿಗೆ ಪೂಜೆ

ಸಂಜೆ ಶ್ರೀ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ, ಕೆಳಗಿನಕೇರಿ ಕೊಪ್ಪ ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.


Ad Widget
ಭಜನಾ ಕಾರ್ಯಕ್ರಮ

ಶ್ರೀ ದೇವರಿಗೆ 108 ಸೀಯಾಳ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು.

ಕೇಪುಳೇಶ್ವರ ದೇವರು

ಬಳಿಕ ಗುರುಪ್ರಿಯಾ ನಾಯಕ್ ಹಾಗೂ ತಂಡದವರಿಂದ ಭಕ್ತಿ ಸಂಗೀತ ಲಹರಿ ನಡೆಯಿತು.

Ad Widget

Ad Widget

Ad Widget
ಭಕ್ತಿ ಭಾವ ಗಾಯನ

ಬಳಿಕ ನಡೆದಧಾರ್ಮಿಕ ಸಭಾ ಕಾರ್ಯಕ್ರಮವನ್ನು ಈಶ್ವರಮಂಗಲ ಶ್ರೀ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಉದ್ಘಾಟಿಸಿದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ರಾಘವೇಂದ್ರ ಭಟ್ ಅಧ್ಯಕ್ಷತೆವಹಿಸಿದ್ದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದಿಕ್ಸೂಚಿ ಭಾಷಣ ಮಾಡಿದರು.

ಉಡುಪಿ ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಸಂಪನ್ಮೂಲ ವ್ಯಕ್ತಿ ಸುಂದರ ಗೌಡ ಏನೆಕಲ್ಲು ಧಾರ್ಮಿಕ ಉಪನ್ಯಾಸ ನೀಡಿದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೊಯಕ್ಕುಡೆ ಶಿರಾಡಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಗೌಡ ಕೊಯಕ್ಕುಡೆ , ಕೊಡಿಮಾರು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ಶುಭ ಹಾರೈಸಿದರು. ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್ ಬರೆಪ್ಪಾಡಿ ಸ್ವಾಗತಿಸಿ, ಯಶೋಧರ ಕೆಡೆಂಜಿ ವಂದಿಸಿದರು.ರಾಕೇಶ್ ಆಚಾರ್ಯ ಬನಾರಿ ಕಾರ್ಯಕ್ರಮ ನಿರೂಪಿಸಿದರು.

ರಾತ್ರಿ ಮಹಾಪೂಜೆಯ ಬಳಿಕ ದೇವರ ನಡೆಯಲ್ಲಿ ಜೀರ್ಣೋದ್ಧಾರಸಂಕಲ್ಪ ವಿಧಿ ನಡೆಸಲಾಯಿತು. ಬಳಿಕ ಪ್ರಸಾದ ವಿತರಣೆ ,ಫಲಾಹಾರ ನಡೆಯಿತು.

error: Content is protected !!
Scroll to Top
%d bloggers like this: