Day: February 14, 2020

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಫೆ-15ರಿಂದ 29ರ ವರೆಗೆ ನಡೆಯಲಿದೆ . ಫೆ.13ರಂದು ಉತ್ಸವಗಳು ಆರಂಭಗೊಂಡಿದೆ. ಫೆ.14ರಂದು ರಾತ್ರಿ ಶ್ರೀ ನೇಲ್ಯಾರು ನೇಮ, ಉಳ್ಳಾಲ್ತಿ ನೇಮ ನಡೆಯಿತು. ಫೆ 15ರಂದು ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಲಿದೆ. ಫೆ. 16ರಂದು ರಾತ್ರಿ ಮಹಾರಥೋತ್ಸವ, ಶಿರಾಡಿ ದೈವ, ಉದ್ದಂಪಾಡಿ ದೈವ ನಡೆಯಲಿದೆ. ಪ್ರಸಾದ …

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ Read More »

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು ಸುಳ್ಯ : ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಮಹಿಳೆಯೋರ್ವರು ಸೋಫಾ ಸೆಟ್ ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಡವಾಗಿ ವರದಿಯಾಗಿದೆ. ಕಂದ್ರಪ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಂಗಮ್ಮ (75)ಎಂಬವರು ಫೆ.8 ರಂದು ಸೋಫಾ ಸೆಟ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ಕೂಡಲೇ ಸುಳ್ಯದ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. …

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದ ನಂದಗೋಕುಲ ಪ್ರಗತಿಬಂಧು ತಂಡದ ಸದಸ್ಯರಾದ ಗೋವರ್ಧನ ಆಚಾರ್ಯ ಅವರ ಮನೆಯಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೋ ಸೋಲಾರ್ ಸಹಾಯದೊಂದಿಗೆ ಗೆ ಸೋಲಾರ್ ಚಾಲಿತ ಕುಲುಮೆ ಯಂತ್ರದ ಉದ್ಘಾಟನೆ ಕಾರ್ಯಕ್ರಮವನ್ನು ಫೆ.14ರಂದು ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿಯವರು ನೆರವೇರಿಸಿದರು . ಈ ಸಂದರ್ಭ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕಿನ ಯೋಜನೆ ಅಧಿಕಾರಿಗಳಾದ ಸಂತೋಷ್ ಕುಮಾರ್ ರೈ …

ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ Read More »

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು !

ವಿವಾಹ ನಿಶ್ಚಿತವಾಗಿದ್ದ ಯುವತಿಯೋರ್ವಳು ಒಲ್ಲದ ಮದುವೆಗೆ ಬೇಸತ್ತು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಹಾರಂಗಿ ಹಿನ್ನೀರಿಗೆ ಹಾರಿ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಚಿನ್ ಹಾಗೂ ಸಿಂಧು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಾದರೂ ಸಿಂಧುವಿನ ಮನೆಯವರು ಆಕೆಗೆ ಬೇರೆ ಯುವಕನೊಂದಿಗೆ ಭಾನುವಾರ ವಿವಾಹ ನಿಶ್ಚಿತಗೊಳಿಸಿದ್ದರು. ಆತ ಗೌಡರ ಹುಡುಗನಾಗಿದ್ದು ಆಕೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಆತನಿಗೆ ಇನ್ನೂ 21 ವರ್ಷ ತುಂಬಿಲ್ಲ. ಜಾತಿಯ ಕಾರಣದಿಂದ ಮನೆಯಲ್ಲಿ ಅವರ ಮದುವೆಗೆ ತೀವ್ರ ವಿರೋಧವಿತ್ತು. ನಾಳೆ …

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು ! Read More »

ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಸಂಶೋಧನಾ ಕುರಿತ ಮಾಹಿತಿ ಕಾರ್ಯಾಗಾರ

.ಸವಣೂರು :ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಯುಜಿಸಿ ಪರಾಮರ್ಶ ಸ್ಕೀಮ್ ( ಐಕ್ಯುಸಿ) ಸಹಯೋಗದೊಂದಿಗೆ ಸಂಶೋಧನಾ ವಿಧಿವಿಧಾನಗಳು ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಸಿ ಘಟಕದ ಸಂಯೋಜಕರಾದ ಡಾ. ಶ್ರೀಧರ್ ಭಟ್ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಶೋಧನಾ ವಿಷಯವನ್ನು ಕೈಗೆತ್ತಿಕೊಳ್ಳುವಲ್ಲಿ ವಿಷಯದ ಆಯ್ಕೆ, ಮಾರ್ಗದರ್ಶಕರ ನಿಯೋಜನೆ, ಕ್ಷೇತ್ರ ಕಾರ್ಯದ ಬಗ್ಗೆ ತಿಳಿಸಿದರು. ಮತ್ತು …

ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಸಂಶೋಧನಾ ಕುರಿತ ಮಾಹಿತಿ ಕಾರ್ಯಾಗಾರ Read More »

ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ | ಪುಲ್ವಾಮದಲ್ಲಿ ಮಡಿದ ಯೋಧರಿಗೆ ಗೌರವ ಸಮರ್ಪಣೆ

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಪುತ್ತೂರು ಇವರು ಇಂದು ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷರಾಗಿರುವ ಜನಾರ್ಧನ್ ಬೆಟ್ಟ ಅವರು ನುಡಿ ನಮನ ಅರ್ಪಿಸಿದರು. ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್, ಪುತ್ತೂರು ಪ್ರಖಂಡದ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್ ಅವರು ಉಪಸ್ಥಿತರಿದ್ದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ …

ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ | ಪುಲ್ವಾಮದಲ್ಲಿ ಮಡಿದ ಯೋಧರಿಗೆ ಗೌರವ ಸಮರ್ಪಣೆ Read More »

ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ

ಪುತ್ತೂರು : ನವವಿವಾಹಿತ ಜೋಡಿಯೊಂದು ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿ ಮದುವೆ ಮಂಟಪದಲ್ಲೇ ನೆಂಟರಿಷ್ಟರ ಜತೆಯಲ್ಲಿ CAA-NRC ಪರ ಫಲಕ ಹಿಡಿದು ಗಮನ ಸೆಳೆದಿದೆ. ಬೆಳ್ತಂಗಡಿಯ ಹಲೇಜಿ ನಿವಾಸಿ ಸುಧೀರ್ ಕೆ. ಎನ್ ಅವರ ವಿವಾಹವು ಮುಳಿಯದಲ್ಲಿ ಉದ್ಯೋಗಿಯಾಗಿರುವ ಮಮಿತಾರೊಂದಿಗೆ ಇತ್ತೀಚಿಗೆ ಪುತ್ತೂರಿನಲ್ಲಿ ನಡೆದಿತ್ತು. ಈ ಜೋಡಿ, ತಾವು CAA-NRC ಪರ ಎಂದು ಮಾತ್ರವಲ್ಲ, ಮದುವೆಗೆ ಬಂದ ಅಥಿತಿಗಳೆಲ್ಲರಿಗೂ CAA-NRC ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಈಗ ಅವರ ಈ ಕಾರ್ಯ ಅವರಿಗೆ ಭರ್ಜರಿ ಪ್ರಚಾರವನ್ನು …

ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ Read More »

ಕಾಣಿಯೂರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಕಾಣಿಯೂರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮದ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿ ಶ್ರೀ ಕಾಣಿಯೂರು ಮಠದ ಜಾತ್ರೋತ್ಸವವು ಫೆ 21ರಿಂದ ಫೆ 25ರವರೆಗೆ ನಡೆಯಲಿದ್ದು, ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಫೆ 14ರಂದು ಕಾಣಿಯೂರು ಶ್ರೀ ಮಠದಲ್ಲಿ ನಡೆಯಿತು. ಕಾಣಿಯೂರು ಶ್ರೀ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್, ಪುರೋಹಿತರಾದ ಬಾಲಕೃಷ್ಣ ಅಸ್ರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು !

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ ! ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು. ಪುತ್ತೂರು : ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕಡಬ ತಾಲೂಕು ಕುದ್ಮಾರು ಗ್ರಾಮದ ನಿವಾಸಿ ಅಬ್ದುಲ್ಲಾ ಎಂಬಾತನನ್ನು ಬೆಳ್ಳಾರೆ ಠಾಣಾ ಪೊಲೀಸರು, ಇಂದು ಫೆ.14ರಂದು ಬಂಧಿಸಿದ್ದಾರೆ. ಈತ 6 ಮಕ್ಕಳ ತಂದೆಯಾಗಿದ್ದು ,ಈತನು ತನ್ನ ಮಗಳ ಪ್ರಾಯದ ಬಾಲಕಿ‌ ಮೇಲೆ ಇಂತ ಹೇಯ ಕೃತ್ಯ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. 5 ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ …

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು ! Read More »

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ನಡುಮನೆ ಎಂಬಲ್ಲಿ ಚಿಣ್ಣರ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಯಿತು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಅವರು ಗುದ್ದಲಿಪೂಜೆ ನೆರವೇರಿಸಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಈಶ್ವರ್, ತಾಲೂಕು ಪಂಚಾಯತ್ ಸದಸ್ಯೆ ಕು. ರಾಜೇಶ್ವರಿ ಕೆ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಸತೀಶ್ ಬಲ್ಯಾಯ,ನಾಗೇಶ್ ಓಡಂತರ್ಯ, ಪಿಡಿಓ ನಾರಾಯಣ ಬಟ್ಟೋಡಿ,ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ …

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ Read More »

error: Content is protected !!
Scroll to Top