ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ

ಪುತ್ತೂರು : ನವವಿವಾಹಿತ ಜೋಡಿಯೊಂದು ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿ ಮದುವೆ ಮಂಟಪದಲ್ಲೇ ನೆಂಟರಿಷ್ಟರ ಜತೆಯಲ್ಲಿ CAA-NRC ಪರ ಫಲಕ ಹಿಡಿದು ಗಮನ ಸೆಳೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಬೆಳ್ತಂಗಡಿಯ ಹಲೇಜಿ ನಿವಾಸಿ ಸುಧೀರ್ ಕೆ. ಎನ್ ಅವರ ವಿವಾಹವು ಮುಳಿಯದಲ್ಲಿ ಉದ್ಯೋಗಿಯಾಗಿರುವ ಮಮಿತಾರೊಂದಿಗೆ ಇತ್ತೀಚಿಗೆ ಪುತ್ತೂರಿನಲ್ಲಿ ನಡೆದಿತ್ತು. ಈ ಜೋಡಿ, ತಾವು CAA-NRC ಪರ ಎಂದು ಮಾತ್ರವಲ್ಲ, ಮದುವೆಗೆ ಬಂದ ಅಥಿತಿಗಳೆಲ್ಲರಿಗೂ CAA-NRC ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು.


Ad Widget

ಈಗ ಅವರ ಈ ಕಾರ್ಯ ಅವರಿಗೆ ಭರ್ಜರಿ ಪ್ರಚಾರವನ್ನು ತಂದಿಟ್ಟಿದೆ. ಎಲ್ಲೆಲ್ಲೂ ಅವರ ಈ ಕಾರ್ಯಕ್ಕೆ ಮೆಚ್ಚುಗೆ!

ಮಧುಮಗ ಸುಧೀರ್ ಅವರು ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಕರಾಗಿದ್ದು, ಅವರು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ರೀತಿಯಾಗಿ ಮದುವೆಯ ಸಂದರ್ಭದಲ್ಲಿ ಪೌರತ್ವ ಕಾಯ್ದೆಯ ಪರ ಅರಿವು ಮೂಡಿಸುವ ಕಾರ್ಯ ಮಾಡೋಣ ಅಂದಾಗ ಈಗ ಕೈಹಿಡಿದ ಮಮಿತಾರು ತುಂಬಾ ಉತ್ಸಾಹದಿಂದ ಪ್ರೋತ್ಸಾಹಿಸಿದರು. ಜತೆಗೆ ವರನ-ವಧುವಿನ ಒಟ್ಟು ಕುಟುಂಬ ಅದಕ್ಕೆ ಸ್ಪಂದಿಸಿತ್ತು.

ಮದುವೆ ಎಂಬ ಮೆಮೊರೇಬಲ್ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿಕೊಂಡಿದ್ದಾರೆ ಈ ಜೋಡಿ.

0 thoughts on “ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ”

  1. Pingback: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು ! - ಹೊಸ ಕನ್ನಡ

error: Content is protected !!
Scroll to Top
%d bloggers like this: