ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ

0 12

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದ ನಂದಗೋಕುಲ ಪ್ರಗತಿಬಂಧು ತಂಡದ ಸದಸ್ಯರಾದ ಗೋವರ್ಧನ ಆಚಾರ್ಯ ಅವರ ಮನೆಯಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೋ ಸೋಲಾರ್ ಸಹಾಯದೊಂದಿಗೆ ಗೆ ಸೋಲಾರ್ ಚಾಲಿತ ಕುಲುಮೆ ಯಂತ್ರದ ಉದ್ಘಾಟನೆ ಕಾರ್ಯಕ್ರಮವನ್ನು ಫೆ.14ರಂದು ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿಯವರು ನೆರವೇರಿಸಿದರು .

ಈ ಸಂದರ್ಭ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕಿನ ಯೋಜನೆ ಅಧಿಕಾರಿಗಳಾದ ಸಂತೋಷ್ ಕುಮಾರ್ ರೈ , ವಲಯ ಮೇಲ್ವಿಚಾರಕರಾದ ಮುರಳಿಧರ ,ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ರಾಧಾಕೃಷ್ಣ, ಜಗನ್ನಾಥ ,ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ,ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು

Leave A Reply