ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಸಂಶೋಧನಾ ಕುರಿತ ಮಾಹಿತಿ ಕಾರ್ಯಾಗಾರ


Ad Widget

Ad Widget

Ad Widget

Ad Widget
Ad Widget

Ad Widget

.ಸವಣೂರು :ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಯುಜಿಸಿ ಪರಾಮರ್ಶ ಸ್ಕೀಮ್ ( ಐಕ್ಯುಸಿ) ಸಹಯೋಗದೊಂದಿಗೆ ಸಂಶೋಧನಾ ವಿಧಿವಿಧಾನಗಳು ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಸಿ ಘಟಕದ ಸಂಯೋಜಕರಾದ ಡಾ. ಶ್ರೀಧರ್ ಭಟ್ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಶೋಧನಾ ವಿಷಯವನ್ನು ಕೈಗೆತ್ತಿಕೊಳ್ಳುವಲ್ಲಿ ವಿಷಯದ ಆಯ್ಕೆ, ಮಾರ್ಗದರ್ಶಕರ ನಿಯೋಜನೆ, ಕ್ಷೇತ್ರ ಕಾರ್ಯದ ಬಗ್ಗೆ ತಿಳಿಸಿದರು. ಮತ್ತು ಮುಂದೆ ಸಂಶೊಧನೆಯನ್ನು ಕೈಗೊಳ್ಳುವ ಸಾಧ್ಯತೆಗಳ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ ಮತ್ತು ಐಕ್ಯುಸಿ ಸಂಯೋಜಕರಾದ ಎಂ ಶೇಷಗಿರಿ, ಅಕ್ಷತಾ ಎಂ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಎಲ್ಲಾ ಉಪನ್ಯಾಸಕ ವರ್ಗದವರು,ಅಂತಿಮ ವಾಣಿಜ್ಯ ಮತ್ತು ಕಲಾ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಣಿಜ್ಯಶಾಸ್ತ್ರದ ಉಪನ್ಯಾಸಕ ಅನೂಪ್ ಸ್ವಾಗತಿಸಿ ವಂದಿಸಿದರು.

error: Content is protected !!
Scroll to Top
%d bloggers like this: