Day: February 12, 2020

ಬರೆಪ್ಪಾಡಿ : ಶಿಥಿಲಾವಸ್ಥೆಯಲ್ಲಿ ಅವಳಿ ಶಿವ ಸಾನಿಧ್ಯ ; ಜೀರ್ಣೋದ್ದಾರಕ್ಕೆ ಭಕ್ತರ ಚಿಂತನೆ

ಬೆಳಂದೂರು : ಪುರಾಣ ಪ್ರಸಿದ್ದ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು ,ಜೀರ್ಣೋದ್ದಾರಕ್ಕೆ ಕಾಯುತ್ತಿದೆ. ಸುಮಾರು 800 ವರ್ಷಗಳ ಇತಿಹಾಸವಿದ್ದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿರುವ ದೇವಸ್ಥಾನವಾಗಿದ್ದು,ಈ ಕುರಿತು ದೇವಸ್ಥಾನದಲ್ಲಿ ಹಳೆಕನ್ನಡದಲ್ಲಿ ಬರೆದಿರುವ ಶಿಲಾಶಾಸನಗಳಿದ್ದು ,ದೇವಸ್ಥಾನ ನಿರ್ಮಾಣವಾಗಿರುವ ಕುರುಹುಗಳನ್ನು ತಜ್ಞರಿಂದ ಓದಿಸಲಾಗಿದ್ದು ಅವುಗಳಲ್ಲಿ ಈ ಮಾಹಿತಿ ಅಡಕವಾಗಿದೆ. ಇನ್ನೊಂದು ಮೂಲದ ಪ್ರಕಾರ ಶ್ರೀ ಕೃಷ್ಣನ ಪರಮಭಕ್ತರಾದ ಪಾಂಡವರು ವನವಾಸದ ವೇಳೆಯಲ್ಲಿ ಈ ಊರಿಗೆ ಬಂದಾಗ ತಮ್ಮ ನಿತ್ಯಾರಾಧನೆಗೆ ಈ …

ಬರೆಪ್ಪಾಡಿ : ಶಿಥಿಲಾವಸ್ಥೆಯಲ್ಲಿ ಅವಳಿ ಶಿವ ಸಾನಿಧ್ಯ ; ಜೀರ್ಣೋದ್ದಾರಕ್ಕೆ ಭಕ್ತರ ಚಿಂತನೆ Read More »

ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್

ಕೆಲವು ಹುಡುಗಿಯರಿಗೆ ವಯಸ್ಸಾಗುವುದಿಲ್ಲ. ಅವರಿಗೆ ಒಟ್ಟು ಮೂರು ತಲೆಮಾರು ಫಿದಾ ಆಗಿದೆ. ಅಂತಹ ಫಿಗರ್ ಮತ್ತು ವಿಗರ್ ಮೇಂಟೈನ್ ಮಾಡಿ ಸಾರ್ವಕಾಲಿಕ ಸುಂದರಿಯರಲ್ಲಿ ಹಿಂದಿಯ ರೇಖಾ, ಐಶ್ವರ್ಯ ರೈ, ಶ್ರೀದೇವಿ, ಮಲೈಕಾ ಅರೋರಾ ಮುಂತಾದವರಿದ್ದಾರೆ. ತೆಲುಗಿನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಒಡತಿ ‘ ಶಿವ ಗಾಮಿ ‘ ರಮ್ಯಾ ಕೃಷ್ಣ ತೆಲುಗಿನ ಎನ್ಟಿಆರ್ ಫ್ಯಾಮಿಲಿಯ ಮೂರು ತಲೆಮಾರು ನಂತರ ಜತೆ ನಟಿಸಿ ಹೆಗ್ಗಳಿಕೆಯುಳ್ಳವಳು. ನಮ್ಮ ಕನ್ನಡದಲ್ಲಿ ನಟಿ ಚಂದ್ರಿಕಾ, ವಯಸ್ಸಾಗಲರಿಯಾದ ನಟಿ-ನಿರೂಪಕಿ ಅಪರ್ಣ ಮತ್ತು ನಟಿ ಸುಮನ್ ರಂಗನಾಥ್ …

ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್ Read More »

ಬರೆಪ್ಪಾಡಿ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಶಿವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ

ಬರೆಪ್ಪಾಡಿ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಶಿವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು. ಕಾಣಿಯೂರು : ಕುದ್ಮಾರು ಗ್ರಾಮದ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20ನೇ ವರ್ಷದ ಶಿವರಾತ್ರಿ ಉತ್ಸವ ಹಾಗೂ ಶ್ರೀ ಕ್ಷೇತ್ರದ ಜೀರ್ಣೋದ್ದಾರದ ಸಂಕಲ್ಪ ವಿ„ ಕಾರ್ಯಕ್ರಮವು ಫೆ.21ರಂದು ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ಫೆ.12ರಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್ ಬರೆಪ್ಪಾಡಿ , ರಾಜಗೋಪಾಲ ಭಟ್,ಪುಷ್ಪಲತಾ ಕುದ್ಮಾರು, ,ನವೀನ್ ಕೊಯಕ್ಕುಡೆ, ಮಿಥುನ್ ಕುದ್ಮಾರು,ಪ್ರವೀಣ್ ಕೆರೆನಾರು,ಭಾಸ್ಕರ ದೇವರಗುಡ್ಡೆ, ಧನಂಜಯ …

ಬರೆಪ್ಪಾಡಿ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಶಿವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ Read More »

ಶಾಂತಿಗೋಡು | ಕೆರೆಗೆ ಬಿದ್ದು ಸಾವು | ಕೆರೆಗೆ ಪಂಪ್ ಇಳಿಸುವ ವೇಳೆ ಅವಘಡ ನಡೆದ ಶಂಕೆ

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಕಾಯರಪ್ಪು ತೋಟದ ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಫೆ. 12 ರಂದು ಬೆಳಕಿಗೆ ಬಂದಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಕೆರೆಗೆ ಪಂಪ್‌ನ ಪೈಪ್ ಇಳಿಸುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಶಾಂತಿಗೋಡು ಗ್ರಾಮದ ದಿ.ಬಾಬು ನಾಯ್ಕ ಎಂಬವರ ಪುತ್ರ ಅವಿವಾಹಿತ ವಿಶ್ವನಾಥ ನಾಯ್ಕ(39 ವ)ರವರು ಕೆರೆಗೆ ಬಿದ್ದು ಮೃತಪಟ್ಟವರು. ಅವರು ತೋಟದದಲ್ಲಿರುವ ಸುರಂಗದಂತ್ತಿರುವ ಕೆರೆ ಬಳಿ ಇದ್ದ ಪಂಪ್‌ನಿಂದ ಕೆರೆಗೆ ಪೈಪ್ ಇಳಿಸುವ …

ಶಾಂತಿಗೋಡು | ಕೆರೆಗೆ ಬಿದ್ದು ಸಾವು | ಕೆರೆಗೆ ಪಂಪ್ ಇಳಿಸುವ ವೇಳೆ ಅವಘಡ ನಡೆದ ಶಂಕೆ Read More »

ಬಂಗಾರಡ್ಕದ ಬಂಗಾರ್ | ಸಿಂಧೂರ ಸರಸ್ವತಿ

ಪುತ್ತೂರು : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 2018-19ನೇ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಹಾಗೂ 6 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ್ ಭಟ್ ಬಂಗಾರಡ್ಕ ಅವರ ಪುತ್ರಿ. ಇವರು ಪ್ರಥಮ ರ್‍ಯಾಂಕ್‌ನೊಂದಿಗೆ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ಪ್ರಥಮ ರ್‍ಯಾಂಕ್ ವಿಜೇತರಿಗೆ ಕೊಡಲಾಗುವ ಜೈನ್ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಡಾ. ಆರ್.ಎನ್. ಶೆಟ್ಟಿ …

ಬಂಗಾರಡ್ಕದ ಬಂಗಾರ್ | ಸಿಂಧೂರ ಸರಸ್ವತಿ Read More »

ರೀಲ್ ನಟಿಯಿಂದ ನಡು ರಸ್ತೆಯಲ್ಲಿ ರಿಯಲ್ ಫೈಟ್ !

ಮಂಗಳೂರು: ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ನಟಿ ಹಾಗೂ ಎದುರಿನಿಂದ ಬಂದ ಕಾರಿನವರ ನಡುವೆ ರಸ್ತೆಯಲ್ಲಿ ಸಿನೆಮಾ ಮಾದರಿ ಹೊಡೆದಾಟ ನಡೆದಿದ್ದು, ಹೊಡೆದಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ನಾಯಕ ನಟನೊಂದಿಗೆ ಹೋಗುತ್ತಿದ್ದ ನಟಿ ಶೋಭಿತಾ ಎಂಬಾಕೆಗೆ ಹಾಗೂ ಇನ್ನೊಂದು ಕಾರಿನವರೊಂದಿಗೆ ಸೈಡ್‌ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದಿದೆ. ವಾಗ್ವಾದ ಅಲ್ಲಿಗೆ ನಿಲ್ಲದೆ ಪರಸ್ಪರ ಹೊಯ್ ಕೈಯವರೆಗೆ ತಲುಪಿತು ಎನ್ನಲಾಗಿದೆ. …

ರೀಲ್ ನಟಿಯಿಂದ ನಡು ರಸ್ತೆಯಲ್ಲಿ ರಿಯಲ್ ಫೈಟ್ ! Read More »

ಕಾಣಿಯೂರು | ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ

ಕಾಣಿಯೂರು ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ- ಸ್ಥಳಾಂತರಕ್ಕೆ ಆಗ್ರಹ ಕಾಣಿಯೂರು : ಕಾಣಿಯೂರು ರಾಜ್ಯ ಹೆದ್ದಾರಿಯ ಕಾಣಿಯೂರಿನ ಮುಖ್ಯಪೇಟೆ ಬದಿಯಲ್ಲಿಯೇ ಇರುವ ಹಳೆಯ ವಿದ್ಯುತ್ ಪರಿವರ್ತಕವೊಂದು ಅಪಾಯವನ್ನು ಆಹ್ವಾನಿಸುತ್ತಿದೆ. ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಎದುರುಗಡೆಯೇ ಈ ವಿದ್ಯುತ್ ಪರಿವರ್ತಕ ಇದೆ. ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ದೇವಸ್ಥಾನದ ಎದುರುಗಡೆ ಸಮತಟ್ಟು ಮಾಡಲಾಗಿದ್ದು, ಈ ವಿದ್ಯುತ್ ಪರಿವರ್ತಕ ಇರುವ ಜಾಗದಲ್ಲಿ ಸಮಸ್ಯೆಯಾಗಿದೆ. ಇಲ್ಲಿ ಕೈಗೆ ತಾಗುವ ಸ್ಥಿತಿಯಲ್ಲಿರುವ ವಿದ್ಯುತ್ ಪರಿವರ್ತಕ ಭಯದ ವಾತಾವರಣ ನಿರ್ಮಿಸಿದೆ. ಜನಬಿಡದ ಪ್ರದೇಶವಾಗಿರುವ ಇಲ್ಲಿನ …

ಕಾಣಿಯೂರು | ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ Read More »

ಪುಣ್ಚಪ್ಪಾಡಿ ಜೋಡುಕಾವಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪುಣ್ಚಪ್ಪಾಡಿ ಜೋಡುಕಾವಲು ಕಾಂಕ್ರೀಟ್ ರಸ್ತೆ ಉದ್ಘಾಟನೆ ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಜೋಡುಕಾವಲು ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮನಡೆಯಿತು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಈಶ್ವರ್, ತಾಲೂಕು ಪಂಚಾಯತ್ ಸದಸ್ಯೆ ಕು. ರಾಜೇಶ್ವರಿ ಕೆ, ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಗ್ರಾ.ಪಂ.ಮಾಜಿ ಸದಸ್ಯ ನಾಗರಾಜ ನಿಡ್ವಣ್ಣಾಯ,ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಪ್ರಮುಖರಾದ ಲೋಕೇಶ್ ಕನ್ಯಾಮಂಗಲ,ಬಾಬು …

ಪುಣ್ಚಪ್ಪಾಡಿ ಜೋಡುಕಾವಲು ಕಾಂಕ್ರೀಟ್ ರಸ್ತೆ ಉದ್ಘಾಟನೆ Read More »

ಕೌಕ್ರಾಡಿ ಪಟ್ಲಡ್ಕದ ಕೊರಗಜ್ಜ ಬ್ರಹ್ಮ ಮೊಗೇರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ – ನೇಮೋತ್ಸವ | ಫೆ.13 ರಿಂದ ಫೆ. 15

ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕದ ಕೊರಗಜ್ಜ ಬ್ರಹ್ಮ ಮೊಗೇರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಫೆ.13 ರಿಂದ ಫೆ. 15 ರ ತನಕನೆರವೇರಲಿದೆ. ಎಂದು ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ಅತ್ಯಂತ ಪುರಾತನ ಕಾಲದಿಂದಲೂ ಭಕ್ತಾದಿಗಳಿಂದ ಆರಾಧಿಸಲ್ಪಟ್ಟ ದೈವಗಳು ಅಪಾರಕಾರ್ಣಿಕವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಸಂತಾನ ಪ್ರಾಪ್ತಿ, ಕಲ್ಯಾಣ ಭಾಗ್ಯವನ್ನು ಪ್ರಾರ್ಥಿಸಿ, ಉದ್ಯೋಗ ಪ್ರಾಪ್ತಿಗಾಗಿ, ರೋಗ ನಿವಾರಣೆಗಾಗಿ, ಗೋ ಸಂಪತ್ತು ವೃದ್ಧಿಗಾಗಿ …

ಕೌಕ್ರಾಡಿ ಪಟ್ಲಡ್ಕದ ಕೊರಗಜ್ಜ ಬ್ರಹ್ಮ ಮೊಗೇರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ – ನೇಮೋತ್ಸವ | ಫೆ.13 ರಿಂದ ಫೆ. 15 Read More »

ಆದಿ ಸುಬ್ರಹ್ಮಣ್ಯದಂತೆ ಹುತ್ತಕ್ಕೆ ಪೂಜೆ ಸಲ್ಲಿಸುವ ಇನ್ನೊಂದು ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ ?

ಪುತ್ತೂರು : ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವುದು ಎಲ್ಲರಿಗೂ ತಿಳಿದ ಸಂಗತಿ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ದೇವಳವೊಂದಿದೆ. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆದಿ ಕುಕ್ಕೆಯ ಮಾದರಿಯಲ್ಲಿ ಆರಾಧನೆ ನಡೆಯುತ್ತದೆ. ಹಾಗಾಗಿ ಭಕ್ತರ ಪಾಲಿಗೆ ಇದು ಎರಡನೆಯ ಸುಬ್ರಹ್ಮಣ್ಯ. ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ಬಾಯಂಬಾಡಿ ಪಾಲ್ತಾಡಿ ತನಕ ಹಬ್ಬಿರುವ ಪರ್ವತ ಪಂಕ್ತಿಯ ಮಧ್ಯ ಭಾಗ ನಳೀಲು. ನಾಲ್-ಇಲ್ ಸೇರಿ ನಳೀಲು ಆಗಿದೆ. ತುಳುವಿನಲ್ಲಿ ನಾಲ್ ಎಂದರೆ ನಾಲ್ಕು, ಇಲ್ಲ್ ಎಂದರೆ …

ಆದಿ ಸುಬ್ರಹ್ಮಣ್ಯದಂತೆ ಹುತ್ತಕ್ಕೆ ಪೂಜೆ ಸಲ್ಲಿಸುವ ಇನ್ನೊಂದು ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ ? Read More »

error: Content is protected !!
Scroll to Top