ಕಾಣಿಯೂರು | ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ

ಕಾಣಿಯೂರು ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ- ಸ್ಥಳಾಂತರಕ್ಕೆ ಆಗ್ರಹ

ಕಾಣಿಯೂರು : ಕಾಣಿಯೂರು ರಾಜ್ಯ ಹೆದ್ದಾರಿಯ ಕಾಣಿಯೂರಿನ ಮುಖ್ಯಪೇಟೆ ಬದಿಯಲ್ಲಿಯೇ ಇರುವ ಹಳೆಯ ವಿದ್ಯುತ್ ಪರಿವರ್ತಕವೊಂದು ಅಪಾಯವನ್ನು ಆಹ್ವಾನಿಸುತ್ತಿದೆ. ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಎದುರುಗಡೆಯೇ ಈ ವಿದ್ಯುತ್ ಪರಿವರ್ತಕ ಇದೆ. ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ದೇವಸ್ಥಾನದ ಎದುರುಗಡೆ ಸಮತಟ್ಟು ಮಾಡಲಾಗಿದ್ದು, ಈ ವಿದ್ಯುತ್ ಪರಿವರ್ತಕ ಇರುವ ಜಾಗದಲ್ಲಿ ಸಮಸ್ಯೆಯಾಗಿದೆ. ಇಲ್ಲಿ ಕೈಗೆ ತಾಗುವ ಸ್ಥಿತಿಯಲ್ಲಿರುವ ವಿದ್ಯುತ್ ಪರಿವರ್ತಕ ಭಯದ ವಾತಾವರಣ ನಿರ್ಮಿಸಿದೆ.

ಜನಬಿಡದ ಪ್ರದೇಶವಾಗಿರುವ ಇಲ್ಲಿನ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು. ಕೂಡಲೇ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕಿದೆ ಎಂದು ನಾಗರೀಕರು ಆಗ್ರಹಿಸಿದ್ದಾರೆ.

ಕಾಣಿಯೂರು ಪೇಟೆಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ಶ್ರೀ ಅಮ್ಮನವರ ದೇವಸ್ಥಾನದ ಎದುರುಕಡೆ ಇರುವ ಹಳೆಯ ವಿದ್ಯುತ್ ಪರಿವರ್ತಕವೊಂದು ಶಿಥಿಲಗೊಂಡಿದ್ದು, ತಂತಿಗಳು ನೇತಾಡುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಈ ಕುರಿತು ಸಂಬಂಧಪಟ್ಟ ಮೆಸ್ಕಾಂ ಇಲಾಖೆಯವರು ತಕ್ಷಣ ಸೂಕ್ತ ಜಾಗಕ್ಕೆ ಸ್ಥಳಾಂತರಗೊಳಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ – ರಾಮಣ್ಣ ಗೌಡ ಮುಗರಂಜ ಸದಸ್ಯರು, ಗ್ರಾ.ಪಂ, ಕಾಣಿಯೂರು.

Leave A Reply

Your email address will not be published.