ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್

ಕೆಲವು ಹುಡುಗಿಯರಿಗೆ ವಯಸ್ಸಾಗುವುದಿಲ್ಲ. ಅವರಿಗೆ ಒಟ್ಟು ಮೂರು ತಲೆಮಾರು ಫಿದಾ ಆಗಿದೆ. ಅಂತಹ ಫಿಗರ್ ಮತ್ತು ವಿಗರ್ ಮೇಂಟೈನ್ ಮಾಡಿ ಸಾರ್ವಕಾಲಿಕ ಸುಂದರಿಯರಲ್ಲಿ ಹಿಂದಿಯ ರೇಖಾ, ಐಶ್ವರ್ಯ ರೈ, ಶ್ರೀದೇವಿ, ಮಲೈಕಾ ಅರೋರಾ ಮುಂತಾದವರಿದ್ದಾರೆ.

ತೆಲುಗಿನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಒಡತಿ ‘ ಶಿವ ಗಾಮಿ ‘ ರಮ್ಯಾ ಕೃಷ್ಣ ತೆಲುಗಿನ ಎನ್ಟಿಆರ್ ಫ್ಯಾಮಿಲಿಯ ಮೂರು ತಲೆಮಾರು ನಂತರ ಜತೆ ನಟಿಸಿ ಹೆಗ್ಗಳಿಕೆಯುಳ್ಳವಳು. ನಮ್ಮ ಕನ್ನಡದಲ್ಲಿ ನಟಿ ಚಂದ್ರಿಕಾ, ವಯಸ್ಸಾಗಲರಿಯಾದ ನಟಿ-ನಿರೂಪಕಿ ಅಪರ್ಣ ಮತ್ತು ನಟಿ ಸುಮನ್ ರಂಗನಾಥ್ ಈ ಕೆಟಗರಿಯವರು !

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಇಂತಹ ಸುಮನ್ ರಂಗನಾಥ್ ತಮಿಳುನಾಡಿಗೆ ಸಾಗುವ ‘ ಕವಲುದಾರಿ ‘ಯಲ್ಲಿ ನಿಂತಿದ್ದಾರೆ. ಹಿಂದೆ ಹೇಮಂತ್ ರಾವ್ ಅವರು ನಿರ್ದೇಶಿಸಿದ್ದ ಕನ್ನಡದ ಕವಲುದಾರಿಯಲ್ಲಿ ಅವರು ನಟಿಸಿದ್ದರು. ಸುಮನ್ ಮಾಡಿದ ಪಾತ್ರವನ್ನು ತಮಿಳಿನಲ್ಲಿ ಪೂಜಾಕುಮಾರ್ ಅವರು ನಿರ್ವಹಿಸುವುದೆಂದು ಫಿಕ್ಸ್ ಆಗಿತ್ತು. ಆದರೆ ಈಗ ತಮಿಳಿನಲ್ಲೂ ಸುಮನ್ ರಂಗನಾಥ್ ಅವರೇ ನಟಿಸಲಿದ್ದಾರೆ.

ಕನ್ನಡಲ್ಲಿ ರಿಷಿ ನಾಯಕನಾಗಿದ್ದ ಈ ಚಿತ್ರಕ್ಕೆ ತಮಿಳಿನಲ್ಲಿ ಹಿರಿಯ ನಟ, ಬಾಹುಬಲಿಯ ‘ ಕಟ್ಟಪ್ಪ’ ಪಾತ್ರದಾರಿ ಸತ್ಯರಾಜ್ ಮಗ ಸಿಬಿ ರಾಜ್ !

ಕವಲುದಾರಿ ಬಾಲಿವುಡ್ ನಲ್ಲಿ ಕೂಡ ರಿಮೇಕ್ ಆಗಲಿದ್ದು ಹೇಮಂತ್ ರಾವ್ ಅವರೇ ಅದನ್ನು ನಿರ್ದೇಶಿಸಲಿದ್ದಾರೆ.

Leave a Reply

error: Content is protected !!
Scroll to Top
%d bloggers like this: