ಪುತ್ತೂರು : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 2018-19ನೇ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಹಾಗೂ 6 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಈಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ್ ಭಟ್ ಬಂಗಾರಡ್ಕ ಅವರ ಪುತ್ರಿ.
ಇವರು ಪ್ರಥಮ ರ್‍ಯಾಂಕ್‌ನೊಂದಿಗೆ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ಪ್ರಥಮ ರ್‍ಯಾಂಕ್ ವಿಜೇತರಿಗೆ ಕೊಡಲಾಗುವ ಜೈನ್ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಡಾ. ಆರ್.ಎನ್. ಶೆಟ್ಟಿ ಚಿನ್ನದ ಪದಕ, ಎಸ್‌ಜೆಸಿಇ ಬೆಳ್ಳಿಹಬ್ಬದ ಚಿನ್ನದ ಪದಕ, ಜ್ಯೋತಿ ಚಿನ್ನದ ಪದಕ, ಆರ್.ಎನ್. ಶೆಟ್ಟಿ ಚಿನ್ನದ ಪದಕ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಚಿನ್ನದ ಪದಕ ಹೀಗೆ ಒಂದಲ್ಲ ಎರಡಲ್ಲ ಒಟ್ಟು 6 ಚಿನ್ನದ ಪದಕ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.