ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ
ಫೆಬ್ರವರಿ 1 ಕ್ಕೆಂದು ನಿಗದಿಯಾಗಿದ್ದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಮತ್ತು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ.
ತಿಹಾರ್ ಜೈಲಿನ ಅಧಿಕಾರಿಗಳು ಗಲ್ಲುಶಿಕ್ಷೆಯನ್ನು ಬಂದುದಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಿದರೂ, ಅಡಿಷನಲ್ ಸೆಷನ್ಸ್ ಜಡ್ಜ್ ಆದ ಧರ್ಮೇಂದ್ರ ರಾಣ ಅವರು ತಿಹಾರ್ ಜೈಲಿನ ಅಧಿಕಾರಿಗಳ ವಾದವನ್ನು ಒಪ್ಪಲಿಲ್ಲ.
ಕಾರಣ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರನ ರಾಷ್ಟ್ರಪತಿಯ ಕ್ಷಮಾ ಪತ್ರವು ಇನ್ನೂ ಬಾಕಿ ಉಳಿದಿದ್ದು, ಅದು ಇತ್ಯರ್ಥವಾಗುವವರೆಗೂ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಆರೋಪಿಗಳ ಪರ ವಕೀಲರಾದ ಎಪಿ ಸಿಂಗ್ ಅವರು ವಾದಿಸಿದ್ದರು.
ಬಡ ಜೀವ ಉಳಿಸಿಕೊಳ್ಳಲು ಇನ್ನೊಂದು ಪ್ರಯತ್ನ ಸಾಗಿದೆ. ಆ ದಿನ ಸತ್ತು ಹೋದ ಅಮಾಯಕ ನಿರ್ಭಯಾ ಳ ಜೀವಕ್ಕೂ ಇಷ್ಟೇ ಬೆಲೆ ಇತ್ತು ಎಂದು ಎಲ್ಲಾ ಅಪರಾಧಿಗಳಿಗೆ ಮತ್ತು ಉಳಿದವರಿಗೂ ಪಾಠ ವಾಗಲಿ.