ಚಿನ್ನತೊಳೆದುಕೊಡುವುದಾಗಿ ವಂಚನೆ | ಬೆಳಾಲು ಗ್ರಾಮದ ಬರೆಮೇಲು | ಮಹಿಳೆಯರೇ ಎಚ್ಚರ !

ಬೆಳಾಲು : ಬೆಳಾಲು ಗ್ರಾಮದ ಕೋಲ್ಪಾಡಿಯ ಬಳಿ ಬರೆಮೇಲು ಎಂಬಲ್ಲಿ ವ್ಯಕ್ತಿಯೊಬ್ಬ ಚಿನ್ನ ತೊಳೆದುಕೊಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚನೆಗೆ ಪ್ರಯತ್ನಿಸಿದ್ದಾನೆ.

ಮನೆಯಲ್ಲಿ ಹೆಂಗಸರಿರುವ ಸಮಯದಲ್ಲಿ, ” ಅಮ್ಮ, ನಿಮ್ಮ ಚಿನ್ನವನ್ನು ತೊಳೆದು ಫಳ ಫಳ ಹೊಳೆಯುವಂತೆ ಮಾಡಿ ಕೊಡುತ್ತೇನೆ ” ಎಂದು ಆ ವ್ಯಕ್ತಿ ಹೇಳಿದಾಗ, ಅಮಾಯಕ ಗೃಹಿಣಿಯರು ತಮ್ಮ ಕರಿಮಣಿ ಮತ್ತು ಇತರ ಸರವನ್ನು ಆತನಿಗೆ ಕೊಟ್ಟಿರುತ್ತಾರೆ.

ಆದರೆ ಆತ ತೊಳೆಯುತ್ತಿದ್ದಂತೆ, ಮನೆಗೆ ಮನೆಯ ಮಗನಾದ ರಾಜೇಶ ಬರೆಮೇಲು ಇವರು ಆಗಮಿಸಿದರು. ತೊಳೆದ ಚಿನ್ನದ ಬಣ್ಣದಲ್ಲಿತೊಳೆದ ಚಿನ್ನದ ಬಣ್ಣದಲ್ಲಿ ವ್ಯತ್ಯಾಸವಿದ್ದುದನ್ನು ಕಂಡು ಅನುಮಾನಗೊಂಡು, ತಕ್ಷಣ ಅಕ್ಕಪಕ್ಕದವರ ಸಹಾಯದಿಂದ ಚಿನ್ನ ತೊಳೆದ ವ್ಯಕ್ತಿಯನ್ನು ಹಿಡಿದುಕೊಂಡರು. ಅಲ್ಲದೆ, ತೊಳೆದ ಚಿನ್ನವನ್ನು ತೂಕ ಮಾಡಿದಾಗ, ಅದರಲ್ಲಿಅರ್ಧಪವನ್ನಿನಷ್ಟು ಕಡಿಮೆ ತೂಕ ಕಂಡು ಬಂತು.

ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಗ್ರಾಮಸ್ಥರು ಚೆನ್ನಾಗಿ, ಮುಖ ಮೂರ್ತಿ ಬನ್ಸಿನಂತೆ ಉಬ್ಬುವಂತೆ ತದುಕಿದ್ದಾರೆ ಮತ್ತು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ವ್ಯಕ್ತಿಯನ್ನು ಸುಮಾರು 30 ವರ್ಷ ವಯಸ್ಸಿನವನಾಗಿದ್ದು ಆತನನ್ನು ಧೀರಜ್ ಮಂಡಲ್ ಎಂದು ಗುರುತಿಸಲಾಗಿದೆ. ಆತನ ಸಹವರ್ತಿ ಜನರೂ ಉಳಿದ ಕಡೆಗಳಲ್ಲಿಇದೇ ರೀತಿ ಕಾರ್ಯಾಚರಿಸುವ ಸಾಧ್ಯತೆ ಇದ್ದು ಜನರು ಎಚ್ಚರದಿಂದಿರುವ ಅನಿವಾರ್ಯತೆಯಿದೆ. ದಿನನಿತ್ಯ ಎಷ್ಟೋ ಇಂತಹಾ ಪ್ರಕರಣಗಳು ನಡೆಯುತ್ತಿದ್ದರೂ ಜನರ ಈ ಅಮಾಯಕತೆಗೆ ಏನೆನ್ನಬೇಕು ?

ಈಗ ಅಪರಾಧಿ ಧರ್ಮಸ್ಥಳ ಪೋಲೀಸರ ಸರಳ ಹಿಂದಿನ ಬಂಧಿ.

Leave A Reply

Your email address will not be published.