Home latest Maruti cars: ಕಡಿಮೆ ಬೆಲೆಯಲ್ಲಿ ಬೆಸ್ಟ್ ಫೀಚರ್ ನೀಡೋ ಕಾರುಗಳಿವು!!

Maruti cars: ಕಡಿಮೆ ಬೆಲೆಯಲ್ಲಿ ಬೆಸ್ಟ್ ಫೀಚರ್ ನೀಡೋ ಕಾರುಗಳಿವು!!

Hindu neighbor gifts plot of land

Hindu neighbour gifts land to Muslim journalist

ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸುತ್ತವೆ. ಆದರೆ ಕೆಲ ಬ್ರಾಂಡ್ ಗಳ  ಕಾರುಗಳು ಜನರ ಮನದಲ್ಲಿ ವಿಶೇಷ  ಸ್ಥಾನ ಪಡೆದುಕೊಂಡು ಬಿಟ್ಟಿವೆ. ಹ್ಯಾಚ್‌ಬ್ಯಾಕ್‌ಗಳು ನೆಚ್ಚಿನ ಕಾರನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತವೆ. ಅದೇ ರೀತಿ, ಎಸ್‌ಯುವಿಗಳ ಮೂಲಕ ಕಠಿಣ ರಸ್ತೆಗಳಲ್ಲಿ ಓಡಾಟ ನಡೆಸಲು  ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಹೊಸ ವೈಶಿಷ್ಟ್ಯದ ಮೂಲಕ  ಜನರ ಅಭಿರುಚಿಗೆ ತಕ್ಕಂತೆ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಜನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಐಷಾರಾಮಿ ಅನುಭವ ನೀಡುವ  ಕಾರುಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಸೆಡನ್ ಕೂಡ ಒಂದಾಗಿದ್ದು, ಸೆಡನ್ ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುವ ಕಾರುಗಳು ಎಂಬ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.ಈ ಕಾರು ಸಿಎನ್‌ಜಿಯೊಂದಿಗೆ 31 ಕಿಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಡಿಜೈರ್ ಕಾರು ಮಾದರಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯೆಂತೆ ಮುಂಭಾಗದಲ್ಲಿ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಣೆಯೊಂದಿಗೆ ಉತ್ತಮ ಕಂಪ್ಯಾಕ್ಟ್ ಸೆಡಾನ್ ಮಾದರಿಯಾಗಿ ಮರುವಿನ್ಯಾಸಗೊಂಡಿದೆ. ಇದಲ್ಲದೆ ನಿರಂತರವಾಗಿ ಪೋರ್ಟ್ಫೋಲಿಯೊವನ್ನು ಅಪ್ಡೇಟ್ ಮಾಡಲಾಗುತ್ತದೆ. ಮಾರುತಿ ಡಿಜೈರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿದ್ದು  89bhp ಮತ್ತು 113Nm ಟಾರ್ಕ್ ಅನ್ನು  ಜನರೆಟ್ ಮಾಡುತ್ತದೆ.

  ಐದು-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಎಂಜಿನ್ ಅನ್ನು ಜೋಡಿಸಲಾಗಿದೆ. ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸಿದರೆ, ಇದು ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಕೀಲೆಸ್ ಎಂಟ್ರಿ, ರಿಯರ್ ಎಸಿ ವೆಂಟ್‌ಗಳು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಮಾರುತಿ ಸುಜುಕಿ ಡಿಜೈರ್ ಹ್ಯುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳ ಜೊತೆಗೆ ಪೈಪೋಟಿ ನಡೆಸುತ್ತಿವೆ.

ಮಾರುತಿ ಸುಜುಕಿ ಡಿಜೈರ್ LXi, VXi, ZXi ಮತ್ತು ZXi+ ಹೀಗೆ ನಾಲ್ಕು ರೂಪಾಂತರಗಳಲ್ಲಿ ಮಾರಾಟವಾಗುತ್ತಿದ್ದು. ಇದರ ಬೆಲೆ 6.43 ಲಕ್ಷ ರೂ.ಗಳಿಂದ 9.31 ಲಕ್ಷ ರೂ.ವರೆಗೆ ಇದೆ. ಹಾಗಿದ್ದರೆ ಪ್ರತಿ ರೂಪಾಂತರದ ಬೆಲೆ ಎಷ್ಟು??? ಉತ್ತರ ಇಲ್ಲಿದೆ ನೋಡಿ.

LXi ಪೆಟ್ರೋಲ್  ಮ್ಯಾನ್ಯುವಲ್  ಬೆಲೆ  ₹6.43 ಲಕ್ಷ ಆಗಿದೆ.
VXi ಪೆಟ್ರೋಲ್ ಮ್ಯಾನ್ಯುವಲ್  ಬೆಲೆ- ₹7.36 ಲಕ್ಷ ಆಗಿದೆ.
VXi ಪೆಟ್ರೋಲ್ ಆಟೋಮ್ಯಾಟಿಕ್ (AMT) ಬೆಲೆ – ₹7.91 ಲಕ್ಷ ಆಗಿದೆ.
ZXi ಪೆಟ್ರೋಲ್ ಮ್ಯಾನ್ಯುವಲ್ ಬೆಲೆ- ₹8.04 ಲಕ್ಷ ಆಗಿದೆ.
VXi CNG ಮ್ಯಾನ್ಯುವಲ್ ಬೆಲೆ – ₹8.31 ಲಕ್ಷ ಆಗಿದೆ.
ZXi ಪೆಟ್ರೋಲ್ ಆಟೋಮ್ಯಾಟಿಕ್ (AMT) ಬೆಲೆ – ₹8.59 ಲಕ್ಷ ಆಗಿದೆ.
ZXi ಪೆಟ್ರೋಲ್ ಮ್ಯಾನ್ಯುವಲ್ ಬೆಲೆ  – ₹8.76 ಲಕ್ಷ ಆಗಿದೆ.
ZXi CNG ಮ್ಯಾನ್ಯುವಲ್ ಬೆಲೆ  – ₹8.99 ಲಕ್ಷ ಆಗಿದೆ.
ZXi ಪ್ಲಸ್ ಪೆಟ್ರೋಲ್ ಆಟೋಮ್ಯಾಟಿಕ್ (AMT) ಬೆಲೆ-  ₹9.31 ಲಕ್ಷ ಆಗಿದೆ.