ದೇವರಿಂದ ತಪ್ಪಿಸಿಕೊಳ್ಳಲು ಮರ ಏರಿ ಕುಳಿತ ಬಲಿ ಕೊಡಲು ತಂದ ಕೋಳಿ | ಹುಂಜ ಇಳಿಸಲು ಭಕ್ತರ ಹರಸಾಹಸ, ಹೈಡ್ರಾಮಾ ಸೃಷ್ಟಿ
ಹಿಂದಿನ ಕಾಲದ ಅನೇಕ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿದ್ದು, ಅದರಲ್ಲಿ ದೇವರಿಗೆ ಕೋಳಿ, ಕುರಿಯನ್ನು ಬಲಿಕೊಟ್ಟು ಹರಕೆ ತೀರಿಸುವ ಪದ್ಧತಿಯೂ ಒಂದು. ಆದರೆ ಇಲ್ಲೊಂದು ಕಡೆ ಹರಕೆ ತೀರಿಸಲು ತಂದಿದ್ದ ಕೋಳಿ ದೇವರಿಗೆ ಚಾಲೆಂಜ್ ಹಾಕಿದ್ದು ವಿಶೇಷವೇ. ದೇವಿ ಬಲಿಗಾಗಿ ತಂದಿದ್ದ ಕೋಳಿ ತಪ್ಪಿಸಿಕೊಂಡು ಸಮೀಪದ ಮರ ಏರಿ ದೇವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೋಳಿ ಹಿಡಿಯುವ ಪ್ರಯತ್ನದಲ್ಲಿ ಹೈ ಡ್ರಾಮಾ ನೇ ನಡೆದು ಹೋಗಿದೆ. ಗಾಂಧಿನಗರ ಬಡಾವಣೆಯಲ್ಲಿ ಶ್ರೀಕಾಳಮ್ಮ ದೇವರ ಹಬ್ಬ ಆಚರಿಸಲಾಗುತ್ತಿತ್ತು. ಮಹಿಳೆಯರೆಲ್ಲರೂ …