SSLC ಎಕ್ಸಾಮ್ ಟೈಮಲ್ಲಿ ಮಾಂಗಲ್ಯ ಕಟ್ಟಿಸಿಕೊಳ್ಳುವ ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿ !! |ಬಾಲ್ಯ ವಿವಾಹದ ಗುಟ್ಟು ರಟ್ಟಾಗುವ ಭಯಕ್ಕೆ ತಾಳಿ ಬಿಚ್ಚಿಸಿ ಮರುದಿನ ಪರೀಕ್ಷೆಗೆ ಕಳುಹಿಸಿದ ಹೆತ್ತವರು
ದೇಶದಲ್ಲಿ ಬಾಲ್ಯ ವಿವಾಹ ನಿಷೇಧವಿದೆ. ಆದರೂ ಕೆಲವು ಕಡೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದು ಅಪರಾಧ ಎಂದು ತಿಳಿದಿದ್ದರೂ ಸಹ ಪೋಷಕರು ಪರೀಕ್ಷೆಯ ನಡುವೆಯೇ 10ನೇ ತರಗತಿ ಓದುತ್ತಿದ್ದ ಬಾಲಕಿಗೆ ವಿವಾಹ ಮಾಡಿಸಿದ್ದಲ್ಲದೆ, ಈ ವಿಷಯ ಬಯಲಾದರೆ ತಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದು ಬಾಲಕಿಯ ತಾಳಿ ಬಿಚ್ಚಿಸಿ ಮರುದಿನ ಪರೀಕ್ಷೆಗೆ ಕಳುಹಿಸಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 27 ರಂದು ಬಾಲಕಿಗೆ ಪೋಷಕರು …