Home Interesting ಲೈಂಗಿಕ ಕಿರುಕುಳ ಆರೋಪ; ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ವಜಾ

ಲೈಂಗಿಕ ಕಿರುಕುಳ ಆರೋಪ; ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ವಜಾ

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ.

ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲ್ವಿಚಾರಣೆಯ, ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ಡಾ. ಎಸ್.ವೈ. ಖುರೇಶಿ ಖಚಿತಪಡಿಸಿದ್ದಾರೆ.

“ಅಂಡರ್ 17 ಮಹಿಳಾ ತಂಡದ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ನಡತೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆಯಲ್ಲಿದೆ” ಎಂದು ಖುರೇಶಿ ಟ್ವೀಟ್ ಮಾಡಿದ್ದಾರೆ. ಎಐಎಫ್‌ಎಫ್ ಜೂನ್ 30 ರಂದು ನೀಡಿದ ಹೇಳಿಕೆಯಲ್ಲಿ ಅಪರಾಧಿಯ ಹೆಸರನ್ನು ಉಲ್ಲೇಖಿಸದೆ ಅಥವಾ ಅಪರಾಧವನ್ನು ನಿರ್ದಿಷ್ಟಪಡಿಸದೆ ಘಟನೆಯ ಸುಳಿವು ನೀಡಿತ್ತು.

“ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ ಅಂಡರ್ 17 ಮಹಿಳಾ ತಂಡದಲ್ಲಿ ದುರ್ನಡತೆಯ ಘಟನೆ ವರದಿಯಾಗಿದ್ದು, ಎಐಎಫ್‌ಎಫ್ ಅಶಿಸ್ತಿನ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತದೆ. ತಂಡದೊಂದಿಗಿನ ಎಲ್ಲಾ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ಹೆಚ್ಚಿನ ತನಿಖೆಗಾಗಿ ಭೌತಿಕವಾಗಿ ಹಾಜರಾಗಲು ಸಂಬಂಧಪಟ್ಟ ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ” ಎಂದು ಎಐಎಫ್‌ಎಫ್ ಹೇಳಿಕೊಂಡಿತ್ತು.

ಅಖಿಲ ಭಾರತ ಫುಟ್ಬಾಲ್​ ಫೆಡರೇಶನ್ ವ್ಯವಹಾರಗಳನ್ನು ನಿರ್ವಹಿಸುವ ಆಡಳಿತಾಧಿಕಾರಿಗಳ ಸಮಿತಿಯು ಅನುಚಿತ ವರ್ತನೆ ಘಟನೆಯ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆಮಾಹಿತಿ ನೀಡಿದೆ. ಭಾರತದ ಅಂಡರ್-17 ಮಹಿಳಾ ತಂಡದ ಫುಟ್ಬಾಲ್ ಆಟಗಾರ್ತಿಯೊಬ್ಬರಿಗೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.