Home latest Instagram star: 30 ಸೆಕೆಂಡ್ ವಿಡಿಯೋಗೆ 2ಲಕ್ಷ ಕೇಳ್ತಾಳಂತೆ ಗುರೂ ಈ ಇನ್‌ಸ್ಟಾ ಸ್ಟಾರ್ !!...

Instagram star: 30 ಸೆಕೆಂಡ್ ವಿಡಿಯೋಗೆ 2ಲಕ್ಷ ಕೇಳ್ತಾಳಂತೆ ಗುರೂ ಈ ಇನ್‌ಸ್ಟಾ ಸ್ಟಾರ್ !! ಸೋನೂ ಗೌಡನೇ ಬೆಸ್ಟ್ ಅಂತಿದ್ದಾರೆ ಜನ !!

Instagram star

Hindu neighbor gifts plot of land

Hindu neighbour gifts land to Muslim journalist

Instagram star: ಈಗಂತೂ ಇನ್ಸ್ಟಾಗ್ರಾಮ್ ನಲ್ಲಿ ಈ ಟಿಕ್ ಟಾಕ್ ಸ್ಟಾರ್ ಗಳ ಹಾವಳಿ ಜಾಸ್ತಿ ಆಗಿದೆ ಮಾರ್ರೆ. ಅವರ ರೀಲ್ಸ್, ಎಡಿಟೆಡ್ ಆದ ಚಂದ ಚಂದದ ಪೋಟೋ ಕಂಡು ನಮ್ಮ ಹುಡುಗುರು ಸೇರಿ ಎಲ್ಲಾರೂ ಫಿದಾ ಆಗಿ ಫಾಲೋ ಕೊಟ್ಟು ಕೊಟ್ಟು ಸಾವಿರಗಟ್ಟಲೆ, ಮಿಲಿಯನ್ ಗಟ್ಟಲೆ ಫಾಲೋವರ್ಸ್ ಆಗೋತರ ಮಾಡಿ ಅವರನ್ನು ಒಂಥರಾ ಐಕನ್ ರೀತಿ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಮಾರಾಟಗಾರರು, ಪಾರ್ಟ್ ಟೈಮ್ ಜಾಬ್ ನವರು, ಹೊಸ ಪ್ರಾಡಕ್ಟಿನವರು ಅವರ ಮೂಲಕ ಅಡ್ವರ್ಟೈಸ್ ಮೆಂಟ್ ಕೊಡಿಸೋದೇನು, ಪ್ರೋಮೋ ಮಾಡಿಸೋದೇನು ಅಲ್ವಾ… ? ಇನ್ಸ್ಟಾ ಸ್ಟೋರಿ ಓಪನ್ ಮಾಡಿದ್ರೆನೇ ಸಾಕು ಬರೀ ಇದೆ ಇರುತ್ತಲ್ವಾ ಗುರೂ ಅಂತಾರೆ ಕೆಲವರು. ಇದೇನು ಆಶ್ಚರ್ಯ ಅಲ್ಲ ಬಿಡಿ. ಆದ್ರೆ ಇಲ್ಲೊಬ್ಬಳು ಇನ್ಸ್ಟಾ ಸ್ಟಾರ್ ಬರೀ 30 ಸೆಕೆಂಡ್ ವಿಡಿಯೋಗೆ 2 ಲಕ್ಷ ಕೇಳ್ತಾಳಂತೆ ಗುರೂ…!!!

ಇನ್ಸ್ಟಾಗ್ರಾಮ್(Instagram star) ಸ್ಟೋರಿ ಓಪನ್ ಮಾಡಿದಾಗ ಇಲ್ಲಾ ರೀಲ್ಸ್ ನೋಡುವಾಗ ಈ ಸ್ವಯಂ ಘೋಷಿತ ಸ್ಟಾರ್ ಹುಡುಗಿಯರು ಹಾಗೆ ಮಾಡಿ, ಹೀಗೆ ಮಾಡಿ ಎನ್ನುತ್ತಾ ಯಾವುದಾದರೂ ಪ್ರೋಡಕ್ಟ್ ಬಗ್ಗೆಯೋ ಅಥವಾ ಇನ್ನಾವುದೇ ವಿಚಾರದ ಬಗ್ಗೆಯೋ ಪಬ್ಲಿಸಿಟಿ ಕೊಡೋದನ್ನಾ ನೋಡ್ತೇವೆ. ಇವರೆಲ್ಲರೂ ಏನಿದ್ರಿ 2ರಿಂದ 3 ಸಾವಿರ ದುಡ್ಡು ಪಡೆದಿರಬಹುದು ಇಲ್ಲಾ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾಗ ಹೆಚ್ಚೆಂದರೆ 5 ರಿಂದ 10 ಸಾವಿರ ಪಡೆದಿರುತ್ತಾರೆ ಎಂಬುದು ನಮ್ಮ ಊಹೆ. ಆದರೆ ಇಲ್ಲೊಬ್ಬಳು ಮಾರಾಯ್ತಿ ಬರೀ 30 ಸೆಕೆಂಡ್ ಅಡ್ವರ್ಟೈಸ್ ಮೆಂಟ್ ವಿಡಿಯೋಗೆ ಬರೋಬ್ಬರಿ 2 ಲಕ್ಷ ಡಿಮ್ಯಾಂಡ್ ಮಾಡಿದ್ದಾಳೆ. ಇದನ್ನು ಕಂಡು ಹೌಹಾರಿದ ಜನ ನಮ್ಮ ಸೋನೂ ಗೌಡಳೇ ಬೆಸ್ಟ್ ಅಂತಿದ್ದಾರೆ ಜನ !!

ಹೌದು, ಇನ್ಸ್‌ಟಾಗ್ರಾಮ್‌ನಲ್ಲಿ ಯಾವ ವಿಶ್ವ ಸುಂದರಿಗೂ, ಮಾಡೆಲ್ ಗೂ, ಸಿನಿಮಾ ನಟಿಗೂ ಕಡಿಮೆಯಿಲ್ಲದಂತೆ ಬರೋಬ್ಬರಿ 4.1 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿರುವ ಇನ್ಸ್‌ಫ್ಲುಯೆನ್ಸರ್‌ ಅಮಲಾ ಶಾಜಿ(Amala shaji) ಬರೀ 30 ಸೆಕೆಂಡ್‌ ವಿಡಿಯೋಗಾಗಿ ಅವರು 2 ಲಕ್ಷ ಸಂಭಾವನೆ ಕೇಳಿದ್ದಾರೆ. ಈ ಮೂಲಕ ಸ್ವಯಂ ಘೋಷಿತ ಈ ಸ್ಟಾರ್ ವಿವಾದಕ್ಕೆ ತುತ್ತಾಗಿದ್ದಾರೆ.

ಇದನ್ನು ಓದಿ: Talaq: ಸಹೋದರನಿಗೆ ಕಿಡ್ನಿ ದಾನ ಮಾಡಿದ ಅಕ್ಕ; 40 ಲಕ್ಷ ಬೇಡಿಕೆ ಇಟ್ಟ ಪತಿ, ಒಪ್ಪದ ಹೆಂಡತಿಗೆ ವಾಟ್ಸಪ್‌ನಲ್ಲೇ ತ್ರಿವಳಿ ತಲಾಖ್‌!!!

ಅಂದಹಾಗೆ ಅಮಲಾ ಮಲಯಾಳಿಯಾಗಿದ್ದರೂ ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಈಕೆ ಪ್ರತಿ ವೀಡಿಯೊ ಪೋಸ್ಟ್ ಮಾಡುವ ವಿಡಿಯೋ ಲಕ್ಷಾಂತರ ವೀವ್ಸ್‌ ಪಡೆಯುತ್ತದೆ. ಸದ್ಯ ಈಕೆಯ ವಿರುದ್ಧ ತಮಿಳು ನಿರ್ದೇಶಕ ಹಾಗೂ ಗೀತೆ ರಚನೆಕಾರ ನಟ ಪ್ರಿಯಾನ್‌(Priyan) ಆಕ್ರೋಶ ವ್ಯಕ್ತಪಡಿಸಿದ್ದು, ಅವರು ನಿರ್ದೇಶಿಸುತ್ತಿರುವ ಮತ್ತು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಚಿತ್ರ ಅರಾನಾಥ್‌ನ ಪ್ರಚಾರಕ್ಕಾಗಿ 30 ಸೆಕೆಂಡ್ ವೀಡಿಯೋ ಮಾಡಲು ಈಕೆ 2 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಲ್ಲದೆ ಅದರೊಂದಿಗೆ ವಿಮಾನದ ಟಿಕೆಟ್ ಕೂಡ ಬುಕ್‌ ಮಾಡಿಕೊಡವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.