Talaq: ಸಹೋದರನಿಗೆ ಕಿಡ್ನಿ ದಾನ ಮಾಡಿದ ಅಕ್ಕ; 40 ಲಕ್ಷ ಬೇಡಿಕೆ ಇಟ್ಟ ಪತಿ, ಒಪ್ಪದ ಹೆಂಡತಿಗೆ ವಾಟ್ಸಪ್ನಲ್ಲೇ ತ್ರಿವಳಿ ತಲಾಖ್!!!
uttarpradesh news women got tripple talaq from husband for donating kidney to her brother

Lacknow News: ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪತಿಯೊಬ್ಬ ಹಣಕ್ಕಾಗಿ ಪೀಡನೆ ಮಾಡಿದ್ದಲ್ಲದೇ, ಆಕೆಗೆ ವಾಟ್ಸಪ್ ಮೂಲಕ ತ್ರಿವಳಿ ತಲಾಖೆ ಹೇಳಿ ವಿಚ್ಛೇದನ ನೀಡಿರುವ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಮಹಿಳೆ ಧನೇಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತರುನ್ನುಮ್ ಎಂಬಾಕೆ ರಶೀದ್ ಎಂಬವರನ್ನು ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್ ಇನ್ನೊಂದು ಮದುವೆಯಾಗಿದ್ದ. ರಶೀದ್ ಸೌದಿಯಲ್ಲಿ ಉದ್ಯೋಗ ಮಾಡುತ್ತಿದ್ದು, ತರುನ್ನುಮ್ ಸಹೋದರ ಶಾಕೀರ್ ಎಂಬಾತ ಕಿಡ್ನಿ ವೈಫಕ್ಕೊಳಗಾಗಿದ್ದ. ಕಿಡ್ನಿ ಸಿಗದ ಕಾರಣ ವೈದ್ಯರು ಆತನ ಜೀವಕ್ಕೇ ಅಪಾಯ ಎಂದು ಹೇಳಿದ್ದರು.
ಹಾಗಾಗಿ ಸಹೋದರನ ಪ್ರಾಣ ಉಳಿಸಲು ತರುನ್ನುಮ್ ಮುಂದೆ ಬಂದಿದ್ದಳು. ಆ ಬಳಿಕ ಮುಂಬೈನ ಆಸ್ಪತ್ರೆಯಲ್ಲಿ ಕಿಡ್ನಿ ಜೋಡಣೆ ಮಾಡಲಾಗಿತ್ತು.
ಕಿಡ್ನಿ ಜೋಡನೆ ಆದ ನಂತರ ತರುನ್ನುಮ್ ಪತಿಯ ಮನೆಗೆ ತೆರಳಿದ್ದು, ಪತಿ ಕಿಡ್ನಿ ಕೊಟ್ಟಿದ್ದಕ್ಕೆ ಪ್ರತಿಯಾಗಿ ನಲುವತ್ತು ಲಕ್ಷ ಕೇಳಿ ಪಡೆಯುವಂತೆ ಹೇಳಿದ. ಇದಕ್ಕೊಪ್ಪದ ಪತ್ನಿ ತರುನ್ನುಮ್ಗೆ ರಶೀದ್ ವಾಟ್ಸಪ್ನಲ್ಲಿ ತ್ರಿವಳಿ ತಲಾಖ್ ನೀಡಿದ್ದಾನೆ. ಆದರೆ ತರುನ್ನುಮ್ ವಿಚ್ಛೇದನ ನೀಡಿದ ನಂತರವೂ ಪತಿಯ ಮನೆಯಲ್ಲಿ ಇದ್ದಳು. ಆದರೆ ಕಿರುಕುಳ ಪ್ರಾರಂಭವಾಗತೊಡಗಿನಿಂದ ಪತಿಯ ಮನೆ ಬಿಟ್ಟು ತಾಯಿ ಮನೆಗೆ ಸೇರಿದ್ದಾರೆ. ಇದೀಗ ದೂರು ದಾಖಲು ಮಾಡಿದ್ದಾರೆ.