Home Breaking Entertainment News Kannada ಕಾಂತಾರ ಸಿನಿಮಾ ವೀಕ್ಷಿಸಲಿದ್ದಾರಾ ಪ್ರಧಾನಿ ನರೇಂದ್ರ ಮೋದಿ? ಚಿತ್ರತಂಡ ಹೇಳಿದ್ದೇನು?

ಕಾಂತಾರ ಸಿನಿಮಾ ವೀಕ್ಷಿಸಲಿದ್ದಾರಾ ಪ್ರಧಾನಿ ನರೇಂದ್ರ ಮೋದಿ? ಚಿತ್ರತಂಡ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

ಬಾಕ್ಸಾಫೀಸ್‌ನಲ್ಲಿ ‘ಕಾಂತಾರ’ ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಇತಿಹಾಸ ಸೃಷ್ಟಿಸಿದೆ.

ಹಿಂದಿ, ತೆಲುಗು, ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದ್ದು, ಹೊರ ರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದ ಬೆನ್ನಲ್ಲೆ ರೋಚಕ ವಿಚಾರವೊಂದು ಹೊರ ಬಂದಿದೆ.

ಈ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೀಕ್ಷಣೆ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿ ಬಿರುಸಾಗಿ ಹರಿದಾಡುತ್ತಿದೆ. ಕರ್ನಾಟಕದಲ್ಲಿ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಬಾಲಿವುಡ್ , ಟಾಲಿ ವುಡ್ ಹಾಗೂ ಪರ ಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಫುಲ್ ಫಿದಾ ಆಗಿಬಿಟ್ಟಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳು ಮೈ ಮೇಲೆ ಆವಾಹನೆಯಾದಂತೆ ರಿಷಬ್ ಶೆಟ್ಟಿ ನಟಿಸಿದ್ದರೆ, ಅವರ ಅಮೋಘ ಅಭಿನಯಕ್ಕೆ ಕೆಲವರು ದೇವರನ್ನೇ ಕಂಡಂತೆ ಕೈ ಮುಗಿಯುತ್ತಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದ ರಿಷಬ್ ಶೆಟ್ಟಿ ಎಲ್ಲರಿಗೂ ಮೋಡಿ ಮಾಡಿದ್ದಾರೆ.

ಈ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಹರಿದಾಡುತ್ತಿದ್ದು ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರಿಗೆ ಬಂದು ‘ಕಾಂತಾರ’ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದು, ಚಿತ್ರತಂಡವೂ ಜೊತೆಗೆ ಇರಲಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ.

ಈ ಕುರಿತ ಮೆಮ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ, ಜನರು ವೈರಲ್ ಆಗುತ್ತಿರುವ ವಿಚಾರ ನಿಜವೆಂದು ನಂಬಿಕೊಂಡಿದ್ದಾರೆ.

ಈ ವರ್ಷ ತೆರೆಕಂಡು ದೊಡ್ಡ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಮೋದಿ ನೋಡಿದ್ದರಿಂದ ವದಂತಿಗಳು ರವಾನೆಯಾಗುತ್ತಿದೆಯೋ ಇನ್ನೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ . ಆದರೆ ಈ ನಡುವೆ ಜನರಲ್ಲಿ ಸೃಷ್ಟಿಯಾಗಿರುವ ಊಹಾಪೋಹಗಳಿಗೆ ಕಾಂತಾರ ಸಿನಿಮಾ ತಂಡ ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ನಿಜವಲ್ಲ! ಇದೆಲ್ಲ ಫೇಕ್ ನ್ಯೂಸ್‌, ಆ ರೀತಿ ಯಾವುದೇ ಅಧಿಕೃತ ಬೆಳವಣಿಗೆ ನಡೆದಿಲ್ಲ. ನಿರ್ಮಾಪಕರು ಕೂಡ ಆ ಥರದ್ದು ಏನೂ ಇಲ್ಲ ಎಂದು ಹೇಳಿದ್ದಾರೆ. ಪ್ರಯತ್ನ ನಡೆಯುತ್ತಿದ್ದು, ಆದರೆ ಯಾವುದೇ ಬೆಳವಣಿಗೆ ನಡೆದಿಲ್ಲ.

ಆ ರೀತಿ ಏನಾದರೂ ಇದ್ದರೆ ಸಿನಿಮಾ ಟೀಮ್‌ನಿಂದಲೇ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದೇವೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದಾಗ ಆ ಸಂದರ್ಭದಲ್ಲಿ ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡುವುದಾಗಿ ಭರವಸೆಯನ್ನು ನೀಡಿದ್ದರು.

ಹೀಗಾಗಿ ಮೋದಿ ನವೆಂಬರ್‌ನಲ್ಲಿ ಮತ್ತೆ ಕರ್ನಾಟಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ವೀಕ್ಷಿಸಬಹುದು ಎಂದು ಅಂದಾಜಿಸಲಾಗಿದೆ.