Home latest Shocking News : ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗೂನ ಬಲಿ ಕೊಡಲು...

Shocking News : ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗೂನ ಬಲಿ ಕೊಡಲು ಹೊರಟ ಮಹಿಳೆ | ಮಗು ಏನಾಯ್ತು?

Hindu neighbor gifts plot of land

Hindu neighbour gifts land to Muslim journalist

ಜನರಲ್ಲಿ ನಂಬಿಕೆಗಳಿಗಿಂತ ಹೆಚ್ಚಾಗಿ ಮೂಡನಂಬಿಕೆಗಳು ಹೆಚ್ಚುತ್ತಿದ್ದು, ಅದರಲ್ಲೂ ನರಬಲಿಯ ಪ್ರಕರಣಗಳು ವರದಿಯಾಗುತ್ತಿವೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಸಂಗತಿ ಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಸತ್ತಿರುವ ತನ್ನ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ನವಜಾತ ಮಗುವನ್ನು ಅಪಹರಿಸಿ ಬಲಿ ನೀಡಲು ಮುಂದಾಗಿದ್ದ ಅಚ್ಚರಿಯ ಹಾಗೂ ಆಘಾತಕಾರಿ ಪ್ರಕರಣ ವರದಿಯಾಗಿದೆ.

ಆಗ್ನೇಯ ದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ಆರೋಪಿತ ಮಹಿಳೆ, ನವಜಾತ ಶಿಶುವನ್ನು ಬಲಿ ಮಾಡುವ ಮೂಲಕ ತನ್ನ ಸತ್ತ ತಂದೆಯನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ ಮಗು ಬಲಿ ನೀಡಲು ಮುಂದಾಗಿದ್ದಾಳೆ ಎನ್ನಲಾಗಿದೆ.

ಆದರೆ ಪೊಲೀಸರು ನರಬಲಿ ತಡೆಯುವ ಮೂಲಕ ಎರಡು ತಿಂಗಳ ಹಸುಗೂಸನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ಕೊಂದು ಅವರ ದೇಹದ ಭಾಗಗಳನ್ನು ಕತ್ತರಿಸಿದ ಕೇರಳದ ‘ನರಬಲಿ’ ಆಘಾತಕಾರಿ ಪ್ರಕರಣದ ಬಳಿಕ ತಿಂಗಳುಗಳ ನಂತರ ಈ ಘಟನೆ ನಡೆದಿದೆ.

ಅಪಹರಣಕ್ಕೊಳಗಾಗಿದ್ದ ಮಗುವನ್ನು 24 ಗಂಟೆಗಳ ಒಳಗೆ ಪೊಲೀಸರು ರಕ್ಷಿಸಿದ್ದಾರೆ. ಹಾಗಾಗಿ, ಮಹಿಳೆಯ ನರಬಲಿಯ ಯೋಜನೆಯ ಸಫಲವಾಗುವ ಮೊದಲೇ ಪೋಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಆರೋಪಿಯು ಮಗುವನ್ನು ಬಲಿಕೊಡಲು ಮುಂದಾಗಿದ್ದನ್ನು ಒಪ್ಪಿಕೊಂಡಿದ್ದಾಳೆ.