Home Interesting Shivamogga Attack : ಬಜರಂಗದಳ ಸಂಚಾಲಕ ಸುನೀಲ್‌ ವಿರುದ್ಧ ಸಮೀರ್‌ ತಂಗಿಯಿಂದ ದೂರು ದಾಖಲು |...

Shivamogga Attack : ಬಜರಂಗದಳ ಸಂಚಾಲಕ ಸುನೀಲ್‌ ವಿರುದ್ಧ ಸಮೀರ್‌ ತಂಗಿಯಿಂದ ದೂರು ದಾಖಲು | ದೂರಿನಲ್ಲೇನಿದೆ ?

Hindu neighbor gifts plot of land

Hindu neighbour gifts land to Muslim journalist

ಸಾಗರ ಪಟ್ಟಣದಲ್ಲಿ ಬಜರಂಗದಳ ಸಹ ಸಂಚಾಲಕ ಸುನಿಲ್ ಹತ್ಯೆಗೆ ಯತ್ನಿಸಿದ (Shivamogga attack) ಪ್ರಕರಣದ ಕುರಿತಾದ ರೋಚಕ ಮಾಹಿತಿ ಹೊರಬಿದ್ದಿದೆ. ಹೌದು!! ಸುನಿಲ್ ಸಮೀರ್‌ನ ತಂಗಿಯನ್ನು ರೇಗಿಸುತ್ತಿದ್ದ ಹಿನ್ನೆಲೆಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಸಾಗರದ ಬಜರಂಗದಳ ಸಂಚಾಲಕ ಸುನಿಲ್ (Shivamogga attack) ತನ್ನನ್ನು ಚುಡಾಯಿಸುತ್ತಿದ್ದ ಎಂದು ಸದ್ಯ ಸಮೀರ್‌ನ ಸೋದರಿ ಸಭಾ ಕೌಸರ್ ದೂರು ನೀಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದಲ್ಲಿ ಬಜರಂಗದಳ ಸಹ ಸಂಚಾಲಕ ಸುನಿಲ್ ಹತ್ಯಾ ಯತ್ನ ಪ್ರಕರಣದ ಜಾಡು ಅರಸುತ್ತಾ ಹೊರಟ ಪೋಲೀಸರಿಗೆ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. (Shivamogga attack) ಹಿಂದು ಮತ್ತು ಮುಸ್ಲಿಂ ಸಂಘರ್ಷವೆ ಈ ಕೊಲೆ ಯತ್ನಕ್ಕೆ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಇದು ವೈಯಕ್ತಿಕ ಜಗಳದಿಂದ ನಡೆದಿರುವ ಹಲ್ಲೆ ಯತ್ನವಾಗಿದ್ದು,ಸುನಿಲ್ ತನ್ನ ಸೋದರಿಯನ್ನು ಚುಡಾಯಿಸಿದ ಕಾರಣಕ್ಕೆ ಕೋಪಗೊಂಡ ಸಮೀರ್ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದ ಕುರಿತು ದೊಡ್ಡ ಪ್ರಹಸನ ನಡೆದಿದ್ದು, ಸುನಿಲ್ ಹತ್ಯ ಯತ್ನಕ್ಕೆ ಎಸ್‌ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ, ಸಂಜೆಯ ವೇಳೆಗೆ ಸಭಾ ಕೌಸರ್ ಅವರು ಸುನಿಲ್ ವಿರುದ್ಧ ದೂರು ನೀಡಲು ಟೌನ್ ಪೊಲೀಸ್ ಠಾಣೆಗೆ ಆಗಮಿಸಿದ್ದು, ಆದರೆ, ಸಾಗರ ಪೊಲೀಸರು ಈ ವೇಳೆ ದೂರು ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರ ಜೊತೆಗೆ ಕೆಲ ಮುಖಂಡರು ಠಾಣೆಯ ಮುಂದೆ ಜಮಾಯಿಸಿದ ಘಟನೆ ನಡೆದಿದ್ದು, ಈ ವೇಳೆ ಠಾಣೆಗೆ ಆಗಮಿಸಿ ಮಾತುಕತೆ ನಡೆಸಿದ ಸಾಗರ ಡಿವೈಎಸ್ಪಿ ರೋಹನ್ ಜಗದೀಶ್ ಅವರು ಅಂತಿಮವಾಗಿ ದೂರು ಸ್ವೀಕರಿಸಿ, ಸ್ವೀಕೃತಿ ಪತ್ರ ನೀಡಿದ್ದಾರೆ ಎನ್ನಲಾಗಿದೆ.

ಸಾಗರದ ಬಜರಂಗದಳದ ಸಹ ಸಂಚಾಲಕ ಸುನೀಲ್ ಹತ್ಯೆ ಯತ್ನ ಪ್ರಕರಣದಲ್ಲಿ (Shivamogga attack) ಮತ್ತೊಂದು ಟ್ವಿಸ್ಟ್ ಲಭ್ಯವಾಗಿದ್ದು, ಹತ್ಯೆಗೆ ಒಳಗಾದ ಸುನಿಲ್ ವಿರುದ್ಧ ಸಮೀರ್ ತಂಗಿ ಸಭಾ ಕೌಸರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುನಿಲ್ ತನ್ನನ್ನು ಚುಡಾಯಿಸುತ್ತಿದ್ದು, ಫೋನ್ ನಂಬರ್ ಕೊಡುವಂತೆ ಒತ್ತಾಯಿಸುತ್ತಿದ್ದ ಎಂದು ಸಭಾ ಕೌಸರ್ ನೀಡಿದ ದೂರಿನಲ್ಲಿ ಹೇಳಿದ್ದಾರೆ ಎನ್ನಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

“ತಾನು ಕಾಲೇಜು ಅಂತಿಮ ವರ್ಷದ ಬಿಎಸ್ಪಿ ಮಾಡುತ್ತಿದ್ದು, ಪ್ರತಿದಿನ ಕಾಲೇಜಿಗೆ ಹೋಗುವಾಗ ಜೊತೆಗೆ ಬರುವ ವೇಳೆ ಸುನೀಲ್ ಚುಡಾಯಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೋನ್ ನಂಬರ್ ಕೊಡುವಂತೆ ಚುಡಾಯಿಸುತ್ತಿದ್ದ” ಎಂದು ದೂರಿನಲ್ಲಿ ಸಭಾ ಕೌಸರ್ ತಿಳಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ತನ್ನ ಆರೋಪಗಳಿಗೆ ಸಭಾ ಕೌಸರ್ ಸೂಕ್ತ ಸಾಕ್ಷಾಧಾರ ಒದಗಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.