Home Interesting ಹೆಣ್ಣಿನ ಮಾಯೆಯಲ್ಲಿ ಬಿದ್ದು ಮೋಸ ಹೋದ ಗೂಗಲ್ ಟೆಕ್ಕಿ | ಮತ್ತಿನ ಔಷಧಿ ನಂತರ ಮದುವೆ,...

ಹೆಣ್ಣಿನ ಮಾಯೆಯಲ್ಲಿ ಬಿದ್ದು ಮೋಸ ಹೋದ ಗೂಗಲ್ ಟೆಕ್ಕಿ | ಮತ್ತಿನ ಔಷಧಿ ನಂತರ ಮದುವೆ, ಆಮೇಲೆ ಬ್ಲಾಕ್ ಮೇಲ್!!!

Hindu neighbor gifts plot of land

Hindu neighbour gifts land to Muslim journalist

ದಿನಕ್ಕೊಂದು ಹೊಸ ಪ್ರೇಮ ಪುರಾಣಗಳು ಹೊಸ ರಾದ್ದಾಂತ ಸೃಷ್ಟಿಸಿ ಅವಾಂತರಗಳು ನಡೆಯುವುದು ಸಾಮಾನ್ಯ. ಪ್ರೀತಿ ಎಂಬ ಮಾಯೆಯಲ್ಲಿ ಬಿದ್ದ ಮೇಲೆ ಮೇಲೇಳಲು ಆಗದೇ ಬಲೆಯಲ್ಲಿ ಸಿಲುಕಿದ ಮೀನಿನಂತೆ ಒದ್ದಾಡುವ ಅನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.

ಮೋಸ ಮಾಡಲೆಂದು ನೀನು ಬಂದೆಯಾ…. ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ….ಎಂಬ ಮಾತಿನಂತೆ ಪ್ರೀತಿ ಕುರುಡು ಎಂದು ನಂಬಿ ಪ್ರೇಯಸಿಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿ ಮದುವೆಯಾಗುವ ಅನೇಕ ಪ್ರಕರಣಗಳ ನಡುವೆ , ಪ್ರೀತಿಸಿದ ಹುಡುಗಿಯನ್ನೇ ವರಿಸಿದರು ಕೂಡ ಶನಿಯ ವಕ್ರದೃಷ್ಟಿ ಬೀರಿದಾಗ ಸಮಸ್ಯೆಗಳೂ ತಾಂಡವವಾಡುವಂತೆ ತೊಂದರೆಗೆ ಸಿಲುಕಿದ ಘಟನೆ ನಡೆದಿದೆ.

ಬೆಂಗಳೂರು ಮೂಲದ ಟೆಕಿ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಗೂಗಲ್ ಟೆಕ್ಕಿ ಪ್ರೀತಿಸಿದ ಹುಡುಗಿಯ ಮನೆಯವರ ಕಡೆಯಿಂದ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ.

ಗೂಗಲ್ ಇಂಡಿಯಾದ ಹಿರಿಯ ಮ್ಯಾನೇಜರ್ ಮಧ್ಯಪ್ರದೇಶ ಭೋಪಾಲ್ ಮೂಲದ ಗಣೇಶ್ ಶಂಕರ್ ಎನ್ನುವರು, ಶಿಲ್ಲಾಂಗ್ನ ಐಐಎಂನಲ್ಲಿ ಎಂಬಿಎ ಓದುವಾಗ ಭೂಪಾಲ್ನ ಸುಜಾತಾ ಎನ್ನುವ ಯುವತಿಯೊಂದಿಗೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದ್ದು, 5 ವರ್ಷಗಳ ಕಾಲ ಪ್ರೀತಿಸಿದ್ದರು.

ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲು ಭೋಪಾಲ್ಗೆ ಹೋಗಿದ್ದ ಗಣೇಶ್ಗೆ ಹೊಸ ಶಾಕ್ ಎದುರಾಗಿದೆ. ಹುಡುಗಿ ಮನೆಯವರು ಒಂದೆರಡು ದಿನ ಗಣೇಶನನ್ನು ಚೆನ್ನಾಗಿ ನೋಡಿಕೊಂಡಿದ್ದು, ಆ ನಂತರ ಹುಡುಗಿ ಮನೆಯವರು ಆತನಿಗೆ ಮತ್ತು ಬರುವ ಔಷಧಿ ನೀಡಿ, ಕತ್ತಲು ಕೋಣೆಯಲ್ಲಿ ಗಣೇಶನನ್ನು ಕೂಡಿ ಹಾಕಿದ್ದಾರೆ.

ಇದಷ್ಟೇ ಸಾಲದು ಎಂಬಂತೆ ಗಣೇಶ್ ಅವರನ್ನು ಬೆದರಿಸಿ ಯುವತಿ ಜೊತೆ ಮದುವೆ ಮಾಡಿಸಿ ಫೋಟೊಗಳನ್ನು ತೆಗೆಸಿಕೊಂಡು ಯುವತಿ ಮನೆಯವರು, ‘ನೀನು 40 ಲಕ್ಷ ಕೊಟ್ಟರೇ ಸರಿ, ಇಲ್ಲದಿದ್ದರೇ ನಿನ್ನ ವಿರುದ್ಧ ಪೊಲೀಸ್ ದೂರು ಕೊಟ್ಟು ಜೈಲಿಗೆ ಕಳಿಸಲಾಗುವುದು’ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.

ಇದೀಗ ಈ ಪ್ರಕರಣದ ವಿರುದ್ಧ ಗಣೇಶ್ ಭೂಪಾಲ್ನ ಕಮಲಾ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದು, ಹಾಗಾಗಿ, ಪೊಲೀಸರು ಯುವತಿ ಸುಜಾತಾ, ತಂದೆ ಕಮಲೇಶ್ ಸಿಂಗ್, ಸಹೋದರಾದ ಶೈವೇಶ್ ಸಿಂಗ್, ವಿಜೇಂದ್ರ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 294, 323, 342, 384, 506 ಮತ್ತು 34ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭೋಪಾಲ್ ಕಮಲಾ ನಗರ ಪೊಲೀಸ್ ಠಾಣೆ ಅಧಿಕಾರಿ ಅನಿಲ್ ಕುಮಾರ್ ವಾಜಪೇಯಿ ಅವರು, ‘ಗೂಗಲ್ ಟೆಕ್ಕಿ ಗಣೇಶ್ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

ಈ ನಡುವೆ ಯುವಕ ಗಣೇಶ್ ಕೂಡ ಬೇರೆ ಯುವತಿಯನ್ನು ಈ ಮುಂಚೆ ಮದುವೆಯಾಗಿದ್ದಾನೆಂದು ಹಾಗಾಗಿ, ಗಣೇಶನಿಂದ ಸುಜಾತಳಿಗೆ ಮೋಸವಾಗಿರುವುದಾಗಿ ಹೇಳಿಕೊಂಡು ಯುವತಿಯ ಕಡೆಯವರು ಕೂಡ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.