Home Interesting ತನ್ನದೇ ಮಗನ ಮಗುವಿಗೆ ಜನ್ಮ‌ಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ...

ತನ್ನದೇ ಮಗನ ಮಗುವಿಗೆ ಜನ್ಮ‌ಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

Hindu neighbor gifts plot of land

Hindu neighbour gifts land to Muslim journalist

ದಿನಂಪ್ರತಿ ಅತ್ತೆ ಸೊಸೆ ಜಗಳ, ಇಲ್ಲವೇ ಕೈ ಮಿಲಾಯಿಸುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಅನ್ಯೋನ್ಯತೆ ಎಂಬ ಪದವನ್ನು ಇಂದಿನ ದಿನಗಳಲ್ಲಿ ನೋಡುವುದು ಮರೀಚಿಕೆ ಎಂದರೂ ತಪ್ಪಾಗಲಾರದು.

ಇಂದಿನ ದಿನಗಳಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯವರೆ ಅಧಿಕವಾಗಿದ್ದು, ಹೆತ್ತ ತಂದೆ ತಾಯಿಯರನ್ನು ಆಶ್ರಮಕ್ಕೆ ಸೇರಿಸಿ ಹಣದ ಹಿಂದೆ ಓಡುವ ಪರಿಪಾಠ ಮುಂದುವರೆಯುತ್ತಿರಿವುದು ವಿಪರ್ಯಾಸ. ಆದರೆ, ಇದಕ್ಕೆ ತದ್ವಿರುದ್ಧವಾದ ಅತ್ಯಂತ ಅಪರೂಪದ ಘಟನೆಯೊಂದು ಮುನ್ನಲೆಗೆ ಬಂದಿದೆ.


ಮಕ್ಕಳಾಗದೇ ಇದ್ದಾಗ ಹೆಚ್ಚಿನವರು ದತ್ತು ಪಡೆಯುವ ಇಲ್ಲವೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಅನೇಕ ಸುದ್ದಿಗಳನ್ನು ನಾವು ಕೇಳಿದ್ದೇವೆ.
ಆದರೆ ಇಲ್ಲೊಬ್ಬ ಮಹಿಳೆ ಬಾಡಿಗೆ ತಾಯ್ತನದ ಮೂಲಕ ತನ್ನ ಮಗ ಮತ್ತು ಸೊಸೆಯ ಮಗುವಿಗೆ ಜನ್ಮ ನೀಡಿದ್ದಾರೆ.

ಗರ್ಭಕೋಶ ತೆಗೆದುಹಾಕಿದ್ದರಿಂದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಪತಿ ಆತಂಕಗೊಂಡಿದ್ದಾರೆ. ಇವರ 56 ವರ್ಷದ ತಾಯಿ ನ್ಯಾನ್ಸಿ ಹಾಕ್ ಅವರಿಗೆ ಮಗ ಜೆಫ್ ಹಾಕ್ ಮತ್ತು ಆತನ ಪತ್ನಿ ಕ್ಯಾಂಬ್ರಿಯಾ ಬಾಡಿಗೆ ತಾಯಿಯಾಗುತ್ತೀರಾ ಎಂದು ಕೇಳಿಕೊಂಡಿದ್ದಾರೆ.

ಈ ಮನವಿಯನ್ನು ಮೊದಲಿಗೆ ತಿರಸ್ಕರಿಸಿದ ತಾಯಿ ಕೊನೆಗೆ ಒಪ್ಪಿಕೊಂಡು ತನ್ನ ಕುಟುಂಬಕ್ಕಾಗಿ ತಾನು ಮಾಡುತ್ತಿರುವ ಕರ್ತವ್ಯ ಎಂದು ಭಾವಿಸಿ, ಇದೀಗ ನ್ಯಾನ್ಸಿ ಹಾಕ್ ಮಗ ಮತ್ತು ಸೊಸೆಯ ಐದನೇ ಮಗುವಿಗೆ ಜನ್ಮ ನೀಡಿದ್ದಾರೆ.

ಇಂತಹ ಮನಸ್ಥಿತಿ ಇಂದಿನ ಕಾಲದಲ್ಲಿ ನೋಡುವುದು ಬಹಳ ಅಪರೂಪ ಎನ್ನಬಹುದು. ತನ್ನ ಮಗ ಮತ್ತು ಸೊಸೆಯ ಸಲುವಾಗಿ ತಾಯಿ ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮವಿತ್ತಿದ್ದು ನಿಜಕ್ಕೂ ಅಚ್ಚರಿ ಹಾಗೂ ಕುಟುಂಬದ ಮೇಲಿರುವ ಆಕೆಯ ಕಾಳಜಿಯನ್ನು ತೋರಿಸುತ್ತದೆ.

ವೆಬ್ ಡೆವಲಪರ್ ಆಗಿರುವ ಜೆಫ್ ಹಾಕ್ ಈ ಅನುಭವವನ್ನು “ಒಂದು ಸುಂದರ ಕ್ಷಣ” ಎಂದು ಬಣ್ಣಿಸಿದ್ದು ಅಲ್ಲದೆ, ತಮ್ಮ ತಾಯಿ ಮಗುವಿಗೆ ಜನ್ಮ ನೀಡುವುದನ್ನು ಎಷ್ಟು ಜನ ನೋಡಲು ಸಾಧ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ನ್ಯಾನ್ಸಿ ಹಾಕ್, ಒಂಬತ್ತು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲಿದ್ದಾರೆ. ಇದು ಕುಟುಂಬದವರಿಗಾಗಿ ಮಾಡಿದ್ದು , ಜೊತೆಗೆ ಎಂದಿಗೂ ಮರೆಯಲಾಗದ ಮತ್ತು ಸ್ಮರಣೀಯ ಅನುಭವವೆಂದು ಹೇಳಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡುವಾಗ ಹೊಸ ಅನುಭವವಾಗಿದ್ದು, ಆದರೆ ಮಗುವನ್ನು ನನ್ನ ಜೊತೆ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಕೂಡ ಹೇಳಿಕೊಂಡಿದ್ದಾರೆ.


ಜೆಫ್ ಹಾಕ್ ತನ್ನ ತಾಯಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಇಚ್ಛೆಯ ಅನುಸಾರ, ಮಗುವಿಗೆ ಹನ್ನಾ ಎಂದು ನಾಮಕರಣ ಮಾಡಿದ್ದಾರೆ.