Home Interesting Shocking news: 4 ವರ್ಷಗಳಿಂದಲೂ ಗಂಡನ ಶವದೊಂದಿಗೆ ಮಲಗುತ್ತಿದ್ದಾಳೆ ಈ ಮಹಿಳೆ – ಯಾಕೆಂದು...

Shocking news: 4 ವರ್ಷಗಳಿಂದಲೂ ಗಂಡನ ಶವದೊಂದಿಗೆ ಮಲಗುತ್ತಿದ್ದಾಳೆ ಈ ಮಹಿಳೆ – ಯಾಕೆಂದು ಕೇಳಿದ್ರೆ ನೀವೂ ಭಯ ಬೀಳ್ತೀರಾ !!

Shocking News

Hindu neighbor gifts plot of land

Hindu neighbour gifts land to Muslim journalist

Shocking news: ಬದುಕೆಂದರೆ ಹಾಗೆ, ಒಬ್ಬರನ್ನು ಹಚ್ಚಿಕೊಂಡಮೇಲೆ ಅವರನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಹೆಚ್ಚಿನವರು ಹಾಗೆಯೇ. ಸತ್ತರೂ ಒಟ್ಟಿಗೆ ಸಾಯೋಣ ಎನ್ನುವವರೂ ಇದ್ದಾರೆ. ಅಂತೆಯೇ ಇಲ್ಲೊಂದು ಮಹಿಳೆ ಸೇಮ್ ಇದೇ ರೀತಿಯ ಮನಸ್ಥಿತಿ ಹೊಂದಿದ್ದು, ತನ್ನ ಗಂಡ ಸತ್ತು 4 ವರ್ಷ ಕಳೆದರೂ ಆತನ ಶವದೊಂದಿದಗೇ ಮಲಗುತ್ತಾ ಜೀವನ ನಡೆಸುತ್ತಿದ್ದಾಳೆ.

ಇದನ್ನೂ ಓದಿ: Mumbai: ಲೈವ್ ಮಾಡುವಾಗಲೇ ಶಿವಸೇನಾ ಮುಖಂಡನಿಗೆ ಗುಂಡು ಹಾರಿಸಿ ಹತ್ಯೆ!! ಭಯಾನಕ ವಿಡಿಯೋ ವೈರಲ್

Shocking News

ಶವವನ್ನು ನಾಲ್ಕು ದಿನ ಇಡೋದೇ ಕಷ್ಟ. ಆದರೆ ಇಲ್ಲೊಬ್ಬಳು ಹೆಂಡತಿ ತನ್ನ ಪತಿ ಶವದ ಜೊತೆ ಇಷ್ಟೊಂದು ವರ್ಷ ಜೀವನ ನಡೆಸಿದ್ದಾಳೆ. ಹೌದು, 50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ತನ್ನ ಗಂಡ 49 ವರ್ಷದ ವ್ಲಾಡಿಮಿರ್, ನಾಲ್ಕು ವರ್ಷಗಳ ಹಿಂದೆ ತನ್ನ ಇನ್ನೊಂದು ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಳಿಕ ಆತನ ಮೃತ ದೇಹ (Dead Body) ವನ್ನು ಕಂಬಳಿಯಲ್ಲಿ ಸುತ್ತಿ ತನ್ನ ಹಾಸಿಗೆಯಲ್ಲಿ ಇಟ್ಟುಕೊಂಡಿದ್ದಳು !!

ಇಷ್ಟೇ ಅಲ್ಲದೆ ತಂದೆ ಶವದ ಬಗ್ಗೆ ಹೊರಗೆ ಮಾಹಿತಿ ನೀಡಿದ್ರೆ ನಿಮ್ಮನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರೋದಾಗಿ ಮಕ್ಕಳಿಗೆ ಬೆದರಿಕೆ ಹಾಕಿದ್ದಳು. ಇವಳು ಹೀಗೆ ಮಾಡಲು ನಿಜವಾದ ಕಾರಣವೇನು ಎಂದು ನೋಡಿದ್ರೆ ಆತ ಮತ್ತೆ ಎದ್ದು ಬರ್ತಾನೆ ಎಂಬ ನಂಬಿಕೆ ಆಕೆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪ್ರತಿ ದಿನ ನೋಡ್ಬಹುದು ಎನ್ನುವ ಕಾರಣಕ್ಕೆ ಶವವನ್ನು ಹಾಸಿಗೆ ಮೇಲೆ ಇಟ್ಟುಕೊಂಡಿದ್ದಳಂತೆ!!

ಅಂದಹಾಗೆ ಸೋಷಿಯಲ್ ವರ್ಕರ್ಸ್ ಗಳು ಮನೆಗೆ ಹೋದಾಗ ಈ ವಿಚಾರ ಬಯಲಾಗಿದೆ. ಆರು ಬೆಡ್‌ರೂಮ್‌ಗಳ ಮನೆಯಲ್ಲಿ, ಕೆಲವು ತಂತ್ರಗಳನ್ನು ನಡೆಸಲಾಗಿದೆಯಂತೆ. ಸ್ವೆಟ್ಲಾನಾ ಪತಿ ವ್ಲಾಡಿಮಿರ್ ನಿಧನಕ್ಕಿಂತ ಮೊದಲು ಪತಿ – ಪತ್ನಿ ಮಧ್ಯೆ ಜಗಳ ನಡೆದಿತ್ತಂತೆ. ಈ ಸಮಯದಲ್ಲಿ ಕೋಪಗೊಂಡ ಪತ್ನಿ ಸ್ವೆಟ್ಲಾನಾ, ಸತ್ತೋಗು ಅಂತಾ ಶಾಪ ಹಾಕಿದ್ದಳು. ಆಕೆ ಬಾಯಿಂದ ಈ ವಿಷ್ಯ ಹೊರಗೆ ಬರ್ತಿದ್ದಂತೆ ವ್ಲಾಡಿಮಿರ್ ತಲೆ ಸುತ್ತಿ ಬಿದ್ದಿದ್ದ. ಅಲ್ಲಿಯೇ ಸಾವನ್ನಪ್ಪಿದ್ದ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದಾರೆ.