Home Breaking Entertainment News Kannada ರಶ್ಮಿಕಾ ಮಂದಣ್ಣ ವಿಜಯ್‌ ಲೈವ್‌ನಲ್ಲೇ ಸಿಕ್ಕಿಬಿದ್ರು, ಹೊಸ ವರ್ಷದಾರಂಭದಲ್ಲೇ ಸಿಕ್ಕಿಬಿದ್ದ ಜೋಡಿ | ಎಷ್ಟೇ...

ರಶ್ಮಿಕಾ ಮಂದಣ್ಣ ವಿಜಯ್‌ ಲೈವ್‌ನಲ್ಲೇ ಸಿಕ್ಕಿಬಿದ್ರು, ಹೊಸ ವರ್ಷದಾರಂಭದಲ್ಲೇ ಸಿಕ್ಕಿಬಿದ್ದ ಜೋಡಿ | ಎಷ್ಟೇ ಮುಚ್ಚಿಟ್ಟರೂ ಸತ್ಯ ಹೊರಬಿತ್ತು

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ, ಕಿರಿಕ್ ಬೆಡಗಿಯ ವೈಯಕ್ತಿಕ ವಿಚಾರದ ಕುರಿತಾಗಿ ಹೊಸ ಸಂಗತಿ ಹೊರ ಬಿದ್ದಿದೆ. ನ್ಯಾಷನಲ್​ ಕ್ರಶ್​ ವಿಜಯ್​ ದೇವರಕೊಂಡ (Vijay Deverakonda) ಜೊತೆ ಡೇಟಿಂಗ್​ ನಲ್ಲಿ ಬಿಝಿ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ, ಡಿಯರ್ ಕಾಮ್ರೆಡ್​ ಸಿನಿಮಾಗಳಲ್ಲಿ​ ಇಬ್ಬರು ತೆರೆ ಹಂಚಿಕೊಂಡಿದ್ದು, ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇಬ್ಬರಿಗೂ ಕೂಡ ದೊಡ್ಡ ಮಟ್ಟದ ನೇಮ್ ಫೇಮ್ ತಂದು ಕೊಟ್ಟಿದೆ.

ಕಿರಿಕ್ ಚೆಲುವೆ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ಬಗ್ಗೆ ಊಹಾಪೋಹ ನಡೆಯುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ನ್ಯೂ ಇಯರ್​ ಸೆಲೆಬ್ರೇಷನ್​ (New Year Celebration) ಅನ್ನು ಇಬ್ಬರು ಜೊತೆಯಾಗಿ ಸಂಭ್ರಮದಿಂದ ಒಟ್ಟಿಗೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ.

ಹೊಸ ವರ್ಷದ ಸಡಗರದ ನಡುವೆ ರಶ್ಮಿಕಾ ಮಂದಣ್ಣ ರೆಸಾರ್ಟ್​ ನಲ್ಲಿದ್ದುಕೊಂಡು ಇನ್ ಸ್ಟಾ ಗ್ರಾಮ್​ನಲ್ಲಿ ಲೈವ್ ಹೋಸ್ಟ್​ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಿಷನ್ ಮಜ್ನು ಸಿನಿಮಾ ಬಗ್ಗೆ ಕೂಡ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಕಿರಿಕ್ ಚೆಲುವೆ ಮಾತನಾಡುವ ಸಂದರ್ಭ ಹಿಂದಿನಿಂದ ಒಬ್ಬ ಗಂಡಸಿನ ದ್ವನಿ ಕೇಳಿ ಬಂದಿದೆ.ಹೀಗಾಗಿ, ರಶ್ಮಿಕಾ ಮತ್ತು ವಿಜಯ್ ಒಂದೇ ಹೋಟೆಲ್​ನಲ್ಲಿ ತಂಗಿದ್ದರೆ? ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಇಬ್ಬರು ಕೂಡ ಒಂದೇ ಸ್ಥಳದಲ್ಲಿ ತೆಗೆದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದ್ದು, ಈ ನಡುವೆ ರಶ್ಮಿಕಾ ಮಂದಣ್ಣ ಲೈವ್​ ವಿಡಿಯೋ ಮಾಡಲು ಹೋಗಿ ಎಲ್ಲರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.ವಿಜಯ್ ದೇವರಕೊಂಡ ಕೂಡ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

ಫೋಟೋ ಇಬ್ಬರೂ ಒಂದೇ ಪೂಲ್​ನಲ್ಲಿದ್ದರು ಎನ್ನುವ ವಿಷಯವನ್ನು ಬಹಿರಂಗ ಪಡಿಸುತ್ತಿದೆ . ಸೇಮ್ ಪ್ಲೇಸ್, ಸೇಮ್ ಟೈಮಿಂಗ್​ನಲ್ಲಿ ಪರಸ್ಪರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿವೆ.

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಕಿರಿಕ್ ಬೆಡಗಿ, ನಿಮ್ಮ ವಯಸ್ಸು ಎಷ್ಟು ಎಂದು ಫ್ಯಾನ್ ಕೇಳಿದಾಗ ಈಗ ನನಗೆ 26 ವರ್ಷ ಎಂದು ಉತ್ತರ ನೀಡಿದ್ದಾರೆ. ಈ ಲೈವ್​ ವಿಡಿಯೋ ಹಿಂದೆ ಒಬ್ಬ ಗಂಡಸಿನ ಧ್ವನಿ ಕೇಳಿ ಬಂದಿದ್ದು, ಈ ವಾಯ್ಸ್ ಪಕ್ಕಾ ವಿಜಯ್​ ದೇವರಕೊಂಡ ಅವರದ್ದೇ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಕೆಲವರು ಈ ವಾಯ್ಸ್​ ವಿಜಯ್ ದೇವರಕೊಂಡದ್ದೇ ಎಂದು ಟ್ವಿಟ್ಟರ್ ಬಳಕೆದಾರರು ಬರೆದುಕೊಂಡಿದ್ದಾರೆ.

VD ಧ್ವನಿ ಎಂದು ಹೆಚ್ಚಿನವರು ಪೋಸ್ಟ್ ಮಾಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್​ ಸಿನಿಮಾಗಳಲ್ಲಿ (Bollywood Movies) ನಟಿಸುತ್ತಿದ್ದು, ಫುಲ್ ಖುಷ್ ಆಗಿ ಸಿನಿಮಾಗಳಲ್ಲಿ ಬ್ಯುಸಿ ಆಗಿ ಅಭಿಮಾನಿಗಳನ್ನು ರಂಜಿಸಲು ಅಣಿಯಾಗುತ್ತಿದ್ದಾರೆ.