Home daily horoscope Clock Direction: ಮನೆಯ ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!!

Clock Direction: ಮನೆಯ ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!!

Hindu neighbor gifts plot of land

Hindu neighbour gifts land to Muslim journalist

Vastu Tips For Clock: ವಾಸ್ತು ಶಾಸ್ತ್ರ ಪ್ರಕಾರ, ಗಡಿಯಾರವನ್ನು(Vastu Tips for Clock)ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ (Vastu Shastra)ಅನುಸಾರ, ಮನೆಯಲ್ಲಿರುವ ಗಡಿಯಾರ(Clock Vastu)ಕೂಡ ನಮ್ಮ ಅದೃಷ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಹೀಗಾಗಿ, ನಾವು ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಕೆಲ ವಿಚಾರಗಳನ್ನು ತಿಳಿದಿರುವುದು ಅವಶ್ಯಕ.

 

ಧಾರ್ಮಿಕ ನಂಬಿಕೆಗಳನುಸಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು(Clock)ಹಾಕಲೇಬಾರದು ಎಂದು ಹೇಳಲಾಗುತ್ತದೆ. ಹೀಗಾಗಿ, ಮನೆಯ ಇಲ್ಲವೇ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡಲೇಬಾರದು. ಒಂದು ವೇಳೆ ಹಾಕಿದರೆ, ಇದು ವ್ಯಕ್ತಿಯ ಪ್ರಗತಿಯನ್ನು ಕುಂಠಿತ ಮಾಡುತ್ತದೆ. ವ್ಯಾಪಾರಸ್ಥರು ಅಂಗಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ನೇತು ಹಾಕುವುದರಿಂದ ವ್ಯವಹಾರದಲ್ಲಿ ಭಾರೀ ನಷ್ಟ ಎದುರಿಸಬೇಕಾಗುತ್ತದೆ.

 

ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನ ಕೊಟ್ಟಂತೆ ಆಗಲಿದೆ. ಇದರಿಂದ ಮನೆಯಲ್ಲಿ ನಾನಾ ಬಗೆಯ ಕಲಹ, ಗಲಾಟೆ ಉಂಟಾಗಬಹುದು. ಅವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಯೂ ಹೆಚ್ಚಾಗಬಹುದುಮನೆಯಲ್ಲಿ ಉಪಯೋಗಕ್ಕೆ ಬಾರದ ಗಡಿಯಾರಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ವ್ಯಕ್ತಿಯ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ.

 

ದಕ್ಷಿಣ ದಿಕ್ಕನ್ನು ಬಿಟ್ಟು ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿಯೂ ಗಡಿಯಾರವನ್ನು ಹಾಕಬಾರದು ಎನ್ನಲಾಗುತ್ತದೆ. ವಾಸ್ತು ಪ್ರಕಾರ, ಗಡಿಯಾರವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿದರೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು ಎಂದು ನಂಬಲಾಗುತ್ತದೆ. ಅಷ್ಟೆ ಅಲ್ಲದೇ, ಆ ದ್ವಾರದ ಮುಖಾಂತರ ಹಾದುಹೋಗುವವರ ಜೀವನದ್ಲಲಿ ಒತ್ತಡ ಹೆಚ್ಚಾಗುತ್ತದೆ.

 

 ಇದನ್ನೂ ಓದಿ : Zontes India: ಐಷಾರಾಮಿ ಬೈಕ್ ಖರೀದಿಗೆ ಸುವರ್ಣ ಅವಕಾಶ!! ಭಾರೀ ರಿಯಾಯಿತಿ;ಈ ರೀತಿ ಆಫರ್ ಮತ್ತೆ ಸಿಗೋಲ್ಲ!!