Zontes India: ಐಷಾರಾಮಿ ಬೈಕ್ ಖರೀದಿಗೆ ಸುವರ್ಣ ಅವಕಾಶ!! ಭಾರೀ ರಿಯಾಯಿತಿ;ಈ ರೀತಿ ಆಫರ್ ಮತ್ತೆ ಸಿಗೋಲ್ಲ!!

Zontes India: ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಜೋಂಟೆಸ್ ಇಂಡಿಯಾ (Zontes India)ಈ ವರ್ಷದಂದು ಬೈಕ್ ಪ್ರಿಯರಿಗೆ ಬಂಪರ್ ಖುಷಿ ಸುದ್ದಿಯನ್ನು ನೀಡಿದೆ. 2024ಕ್ಕೆ ನಾಲ್ಕು ಬೈಕ್‌ಗಳ ಬೆಲೆಯನ್ನು ಕಡಿಮೆ (Huge Discount on Zontes Bike)ಮಾಡಲಾಗಿದೆ.

Zontes India

2024ಕ್ಕೆ ನಾಲ್ಕು ಬೈಕ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿರುವ ಬೈಕ್ಗಳ ಪಟ್ಟಿ ಇಲ್ಲಿದೆ ನೋಡಿ. ಮಾದರಿಗಳು Zontes 350R, Zontes 350X, Zontes 350T, Zontes 350T ADV. ಇವುಗಳು ಈಗ ರೂ. 2.79 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ದೊರೆಯಲಿದೆ. ಕೆಫೆ ರೇಸರ್ GK 350 ಬೈಕ್ ಬೆಲೆ ಹಾಗೆಯಿದೆ. ಪ್ರಸ್ತುತ ಬೆಲೆ 3.47 ಲಕ್ಷ ರೂ (ಎಕ್ಸ್ ಶೋ ರೂಂ). ದೊರೆಯಲಿದೆ

Zontes India

Zontes India

* ಟೂರಿಂಗ್ ಬೈಕ್

ಇದು ದೊಡ್ಡ ವಿಂಡ್ ಶೀಲ್ಡ್, ದೊಡ್ಡ ಸೀಟ್, ಲಗೇಜ್ ರ್ಯಾಕ್ ಹೊಂದಿದೆ. ಇದು ಕೀಲೆಸ್ ಇಗ್ನಿಷನ್, ಯುಎಸ್‌ಬಿ ಚಾರ್ಜರ್, ಬ್ಲೂಟೂತ್ ಸಂಪರ್ಕ ವ್ಯವಸ್ಥೆಯನ್ನು ಒಳಗೊಂಡಿದೆ. 350X ಒಂದು ಆರಾಮದಾಯಕ ಪ್ರವಾಸಿ ಬೈಕ್ ಆಗಿದ್ದು, ಇದರ ಬೆಲೆ ರೂ. 3.45 ಲಕ್ಷ (ಎಕ್ಸ್ ಶೋ ರೂಂ) ನಿಂದ ರೂ. 2.99 ಲಕ್ಷ (ಎಕ್ಸ್ ಶೋ ರೂಂ) ಇಳಿಕೆಯಾಗಿದೆ.

* ಸ್ಟ್ರೀಟ್ ಬೈಕ್

ಡ್ಯುಯಲ್ ಎಕ್ಸಾಸ್ಟ್ ಸಿಸ್ಟಮ್, ಟಿಎಫ್ಟಿ ಡಿಸ್ಪ್ಲೇ ಸ್ಮಾರ್ಟ್ ಕೀ ಒಳಗೊಂಡಿದ್ದು, 350T ,ಆಧುನಿಕ ನೋಟವನ್ನು ಹೊಂದಿರುವ ಸ್ಟ್ರೀಟ್ ಬೈಕ್ ಆಗಿದೆ. ಇದು ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರ ಬೆಲೆ 3.47 ಲಕ್ಷದಿಂದ (ಎಕ್ಸ್ ಶೋ ರೂಂ) ರೂ. 2.99 ಲಕ್ಷ (ಎಕ್ಸ್ ಶೋ ರೂಂ) ಕಡಿಮೆಯಾಗಿದೆ.

* ಸಾಹಸ ಬೈಕ್

350T ADV ಘನ, ಬಹುಮುಖ ವಿನ್ಯಾಸ ಹೊಂದಿರುವ ಸಾಹಸ ಬೈಕ್ ಆಗಿದ್ದು, ಇದು ನ್ಯಾವಿಗೇಷನ್ ಸಿಸ್ಟಮ್, ಟೈರ್ ಪ್ರೆಶರ್ ಮಾನಿಟರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮೊದಲಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ದುಬಾರಿ ಮಾದರಿಯಾಗಿದ್ದು, ಈಗ ರೂ 3.25 ಲಕ್ಷ (ಎಕ್ಸ್ ಶೋ ರೂಂ) ರೂ 3.67 ಲಕ್ಷದಿಂದ (ಎಕ್ಸ್ ಶೋ ರೂಂ) ಇದೆ.

* ಸ್ಪೋರ್ಟ್ಸ್ ಬೈಕ್

350R ಒಂದು ನೇಕ್ಡ್ ಸ್ಪೋರ್ಟ್ಸ್ ಬೈಕ್ ಆಗಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಲೈಟ್‌ಗಳು, ಸ್ಲಿಪ್ಪರ್ ಕ್ಲಚ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಜೋಂಟೆಸ್ ಇಂಡಿಯಾ ಲೈನ್-ಅಪ್‌ನಲ್ಲಿ ಅತ್ಯಂತ ಅಗ್ಗದ ಮಾದರಿಯಾಗಿದೆ. ಹಿಂದಿನ ರೂ 3.25 ಲಕ್ಷ (ಎಕ್ಸ್-ಶೋ ರೂಂ)ಆಗಿದ್ದು, ಈಗ ಇದರ ಬೆಲೆ ರೂ 2.79 ಲಕ್ಷ (ಎಕ್ಸ್-ಶೋರೂಂ) ಆಗಿದ್ದು, ಗಮನಾರ್ಹ ಇಳಿಕೆ ಕಂಡಿದೆ.

ಇದನ್ನೂ ಓದಿ: Ayodhya Rama Mandir: ರಾಮ ಮಂದಿರದ ಅಡಿಯಲ್ಲಿ ಹೂಳಲಾಗುತ್ತೆ ಟೈಮ್‌ ಕ್ಯಾಪ್ಸುಲ್! ಏನಿದರ ವಿಶೇಷತೆ? ವಿನಾಶದ ನಂತರವೂ ಅದು ಅಯೋಧ್ಯೆಯ ಹೇಗೆ ತಿಳಿಯುತ್ತೆ?

Leave A Reply

Your email address will not be published.