Home International ನಾಳೆ ಈ ವರ್ಷದ ಕೊನೆಯ ಸೂರ್ಯಗ್ರಹಣ |ಭಾರತದಲ್ಲೂ ಗ್ರಹಣದ ಎಫೆಕ್ಟ್ ಇರುತ್ತಾ??|ಭೂಮಿ ಮೇಲೆ ಈ ಗ್ರಹಣದ...

ನಾಳೆ ಈ ವರ್ಷದ ಕೊನೆಯ ಸೂರ್ಯಗ್ರಹಣ |
ಭಾರತದಲ್ಲೂ ಗ್ರಹಣದ ಎಫೆಕ್ಟ್ ಇರುತ್ತಾ??|ಭೂಮಿ ಮೇಲೆ ಈ ಗ್ರಹಣದ ಪರಿಣಾಮ ಹೇಗಿರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್‌ 4ರ ಶನಿವಾರ ಸಂಭವಿಸಲಿದೆ. ಈ ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು,ಇದಕ್ಕೆ ಒಂದು ಕಾರಣ, ಇದು ಮಾರ್ಗಶೀರ್ಷ ಮಾಸದ ಶನಿ ಅಮಾವಾಸ್ಯೆಯ ದಿನದಂದು ನಡೆಯುತ್ತದೆ. ಇದಲ್ಲದೇ ಈ ಗ್ರಹಣದ ವೇಳೆ ರಾಹುವಿನ ನೆರಳು ಕೂಡ ಇರುತ್ತದೆ.ಜ್ಯೋತಿಷಿಗಳ ಪ್ರಕಾರ ಶನಿವಾರ ಸೂರ್ಯಗ್ರಹಣದ ವೇಳೆ ಅಶುಭ ಯೋಗ ಉಂಟಾಗುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ, ರಾಹು ಮತ್ತು ಕೇತುಗಳಿಂದ ಸೂರ್ಯ ಪೀಡಿತನಾಗುತ್ತಾನೆ ಎಂದು ನಂಬಲಾಗಿದೆ.

ಆ ಸೂರ್ಯಗ್ರಹಣ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡುವುದೇ ಒಂದು ಸೊಗಸು.ಇನ್ನು ಖಗೋಳ ತಜ್ಞರಿಗಂತೂ ಗ್ರಹಣದ ಬಗೆಗೆ ಇನ್ನಷ್ಟು ಸಂಶೋಧನೆ, ಮಾಹಿತಿ ಕಲೆಹಾಕುವ ಕೌತುಕ.ಹಗಲಲ್ಲಿ ಒಮ್ಮೆಗೆ ಸೂರ್ಯನ ಬೆಳಕು ಮಸುಕಾದಾಗ, ವಾತಾವರಣ ತಂಪಾದಾಗ, ಸಂಜೆಯಾಯಿತೆಂದು ಭಾವಿಸಿ ಗೂಡು ಸೇರುವ ಪಕ್ಷಿಗಳು, ಗ್ರಹಣದ ಕೊನೆಗೆ ತೋರುವ ವಜ್ರದುಂಗುರ, ಭೂಮಿಯ ಮೇಲೆ ಸರ್ಪಗಳಂತೆ ಓಡುತ್ತಿರುವ ಸೌರ ಪಟ್ಟೆಗಳು ಇವೆಲ್ಲವನ್ನು ನೋಡಿದರೆ ಮಾತ್ರ ಅನುಭವಿಸಲು ಸಾಧ್ಯ. ಟೂರಿಸ್ಟ್‌ ಕಂಪೆನಿಗಳಿಗೆ ಇದೊಂದು ಸುಸಂದರ್ಭ. ಈಗಿನ ಗ್ರಹಣ ಹಡಗುಗಳಲ್ಲಿ ನೋಡಲು ಅನುಕೂಲ.

ಏನಿದು ಸೂರ್ಯಗ್ರಹಣ :

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುವುದು. ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯ ಕಿರಣಗಳನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ತಡೆಯುತ್ತದೆ. ಈ ವಿದ್ಯಮಾನ ಅಮಾವಾಸ್ಯೆಯ ದಿನ ಸಂಭವಿಸುತ್ತದೆ. ಸೂರ್ಯ ಗ್ರಹಣಗಳಲ್ಲಿ ಮೂರು ವಿಧಗಳಿದ್ದು ಅವೆಂದರೆ ಪೂರ್ಣ, ಕಂಕಣ ಮತ್ತು ಆಂಶಿಕ.

ಚಂದ್ರ ಭೂಮಿಯ ಸುತ್ತ ದೀರ್ಘ‌ ವೃತ್ತಾಕಾರದ ಪಥದಲ್ಲಿ ಚಲಿಸುವಾಗ ಒಮ್ಮೆ ಭೂಮಿಗೆ ಹತ್ತಿರವಾಗಿ, ಒಮ್ಮೆ ದೂರವಾಗುತ್ತದೆ. ಅಮಾವಾಸ್ಯೆಯ ದಿನ ಚಂದ್ರ ಭೂಮಿಗೆ ಹತ್ತಿರದಲ್ಲಿದ್ದರೆ ಚಂದ್ರನ ದಟ್ಟ ನೆರಳು ಭೂಮಿಯ ಯಾವ ಪ್ರದೇಶದಲ್ಲಿ ಬೀಳುತ್ತದೋ ಆ ಪ್ರದೇಶದಲ್ಲಿ ಸೂರ್ಯ ಸಂಪೂರ್ಣವಾಗಿ ಮರೆಯಾಗುತ್ತಾನೆ. ಇದೇ ಪೂರ್ಣ ಸೂರ್ಯ ಗ್ರಹಣ. ಚಂದ್ರನ ನೆರಳು ಬೀಳುತ್ತಿರುವ ಭೂಭಾಗಗಳಲ್ಲಿ ಸೂರ್ಯ ಭಾಗಶಃ ಮರೆಯಾಗುತ್ತಿದ್ದರೆ ಅದು ಆಂಶಿಕ ಸೂರ್ಯ ಗ್ರಹಣ. ಅಮಾವಾಸ್ಯೆಯ ದಿನ ಚಂದ್ರ ಭೂಮಿಗೆ ದೂರದಲ್ಲಿದ್ದು ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡದೆ ಸೂರ್ಯ ಬಿಂಬದ ಅಂಚು ಬಳೆಯಾಕಾರದಲ್ಲಿ ಗೋಚರಿಸುವುದೇ ಕಂಕಣ ಸೂರ್ಯ ಗ್ರಹಣ.

ಗಾತ್ರದಲ್ಲಿ ಸೂರ್ಯ ಚಂದ್ರನಿಗಿಂತ 400ಪಟ್ಟು ದೊಡ್ಡ ದಿದ್ದರೂ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮರೆ ಮಾಡಬಲ್ಲ. ಇದಕ್ಕೆ ಕಾರಣ ಸೂರ್ಯನು ಭೂಮಿ ಮತ್ತು ಚಂದ್ರನ ನಡುವಿನ ಅಂತರದ 400ಪಟ್ಟು ದೂರದಲ್ಲಿ ರುವುದು. ಇದರಿಂದಾಗಿ ಸೂರ್ಯ ಮತ್ತು ಚಂದ್ರ ಬಿಂಬಗಳು ಸಮನಾದ ಗಾತ್ರದಲ್ಲಿರುವಂತೆ ತೋರುತ್ತದೆ.ಭೂಮಿ ಮತ್ತು ಚಂದ್ರನ ಪರಿಭ್ರಮಣ ಸಮತಲಗಳು 5 ಡಿಗ್ರಿ ಓರೆಯಾಗಿವೆ. ಹಾಗಾಗಿ ಪ್ರತೀ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸುವುದಿಲ್ಲ. ಸಾಮಾನ್ಯವಾಗಿ ಸೂರ್ಯ ಗ್ರಹಣವು ಚಂದ್ರ ಗ್ರಹಣದ ಮೊದಲು ಅಥವಾ ಅನಂತರದ ಎರಡು ವಾರಗಳ ಅವಧಿಯಲ್ಲಿ ಸಂಭವಿಸುತ್ತದೆ. ನ. 19ರ ಚಂದ್ರಗ್ರಹಣದ ಅನಂತರ ಈ ಗ್ರಹಣ ಗೋಚರಿಸುತ್ತಿದೆ.

ಭಾರತದಲ್ಲಿ ಗೋಚರಿಸುವುದಿಲ್ಲ ಗ್ರಹಣ :

ಈ ಸೂರ್ಯಗ್ರಹಣವು 4ನೇ ಡಿಸೆಂಬರ್ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 03:07 ರವರೆಗೆ ಇರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ, ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಈ ಖಗ್ರಾಸ ಸೂರ್ಯಗ್ರಹಣವು ದಕ್ಷಿಣ ಗೋಳಾರ್ಧದ ದೇಶಗಳಾದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ದಕ್ಷಿಣ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಗ್ರಹಣದ ಸಮಯದಲ್ಲಿ, ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ನೇರ ವೀಕ್ಷಣೆಗೆ ಅವಕಾಶ:

ನಾಸಾದವರ ಯೂಟ್ಯೂಬ್‌ ಮತ್ತು nasa.gov/live ಈ ತಾಣದಲ್ಲಿ ಹಾಗೂ CosmoSapiens ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೂರ್ಣ ಸೂರ್ಯ ಗ್ರಹಣದ ನೇರ ಪ್ರಸಾರ ಲಭ್ಯವಿದೆ. ಗ್ರಹಣದ ವಿವರಗಳನ್ನು timean3ate ಜಾಲತಾಣದಲ್ಲಿ ನೋಡಬಹುದು.ಭಾರತದಲ್ಲಿ ಈ ಗ್ರಹಣವು ಗೋಚರಿಸದಿರುವುದರಿಂದ ಆಸಕ್ತರು ಯೂಟ್ಯೂಬ್‌ ಚಾನೆಲ್‌ ಮತ್ತು ಜಾಲತಾಣದಲ್ಲಿ ಗ್ರಹಣದ ನೇರ ವೀಕ್ಷಣೆ ಮಾಡಬಹುದಾಗಿದೆ.