Home Interesting Tirumala Tirupati: ತಿರುಪತಿ ತಿಮ್ಮಪ್ಪನ ಬಜೆಟ್‌ ಭರ್ಜರಿ ಏರಿಕೆ; ವಧು-ವರರಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ!

Tirumala Tirupati: ತಿರುಪತಿ ತಿಮ್ಮಪ್ಪನ ಬಜೆಟ್‌ ಭರ್ಜರಿ ಏರಿಕೆ; ವಧು-ವರರಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ!

Tirumala Tirupati

Hindu neighbor gifts plot of land

Hindu neighbour gifts land to Muslim journalist

Tirumala Tirupati: ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ ಈ ವರ್ಷದ 2024-25 ರ ಸಾಲಿಗೆ 5142 ಕೋಟಿ ರೂಪಾಯಿ ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದೆ. ಹಿಂದಿನ ವರ್ಷ ಈ ಪ್ರಮಾಣ 5123 ಕೋಟಿಯಷ್ಟಿತ್ತು. ಆದರೆ ಈ ಬಾರಿ ಹೆಚ್ಚಾಗಿದೆ. ತಿಮ್ಮಪ್ಪನ ಹುಂಡಿಯಿದ 1611 ಕೋಟಿ, ಠೇವಣಿ ಮೇಲಿನ ಬಡ್ಡಿಯಿಂದ 1667 ಕೋಟಿ ರೂಪಾಯಿಯನ್ನು ಇದರ ಜೊತೆಗೆ ಪ್ರಸಾದವನ್ನು ನೀಡುವುದರಿಂದ 600 ಕೋಟಿ ಆದಾಯವನ್ನು ಟ್ರಸ್ಟ್ ನಿರೀಕ್ಷೆ ಮಾಡಿದೆ. ತಿರುಪತಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು 1993ರಲ್ಲಿ ಟಿಟಿಡಿ ಯನ್ನು ಸ್ಥಾಪನೆ ಮಾಡಲಾಯಿತು.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್‌ನಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಸಾಧ್ಯತೆ!!!

ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಟಿಟಿಡಿ ವಿಶ್ವಸ್ಥ ಮಂಡಳಿ ಸಭೆಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಮುಂದಿನ ವರ್ಷಗಳಲ್ಲಿ ಆದಾಯ ಮತ್ತಷ್ಟು ಹೆಚ್ಚಾಗಲಿದೆ. ಟಿಟಿಡಿ ಯು ರಸೀದಿಗಳು ಮತ್ತು ಅರ್ಜಿ ಸೇವೆಯಿಂದ 448 ಕೋಟಿ ಆದಾಯವನ್ನು ಗಳಿಸಲಿದೆ. ವಸತಿ ಮತ್ತು ಕಲ್ಯಾಣ ಮಂಟಪಗಳಿಂದ 147 ಕೋಟಿ ಆದಾಯವನ್ನು ನಿರೀಕ್ಷಿಸುತ್ತಿದೆ.

ಟಿಟಿಡಿಯು ಸನಾತನ ಹಿಂದೂ ಧರ್ಮದ ಸಂಪ್ರದಾಯವನ್ನು ಮುನ್ನಡೆಸಲು 5 ಗ್ರಾಂ ಮತ್ತು 10 ಗ್ರಾಂ ನ ಮಂಗಳಸೂತ್ರ ವನ್ನು ನಿರ್ಮಿಸಿ ದೇವರ ಆಶೀರ್ವಾದ ಪಡೆದ ನಂತರ ಭಕ್ತಾದಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಕರುಣಾಕರ ರೆಡ್ಡಿ ಹೇಳಿದ್ದಾರೆ. ಮಂಗಳಸೂತ್ರವನ್ನು ಖರ್ಚುವೆಚ್ಚದ ಆಧಾರದ ಮೇಲೆ ನಾಲ್ಕೈದು ವಿನ್ಯಾಸವನ್ನು ರೂಪಿಸಲಾಗುವುದು ಎಂದರು. 132.05 ಎಕರೆ ಭೂಮಿಯಲ್ಲಿ ಜಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಹಾಗೂ ಲಡ್ಡು ನಿರ್ಮಿಸುವ ಕೌಶಲ್ಯ ಹಾಗೂ ಕೌಶಲ್ಯ ರಹಿತ ಕೆಲಸಗಾರರಿಗೆ ವೇತನವನ್ನು ಹೆಚ್ಚಿಸಲು ತೀರ್ಮಾನ ಮಾಡಿದೆ.

ಇದರೊಟ್ಟಿಗೆ ಟಿಟಿಡಿಯ ಇತರ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನವನ್ನು ಹೆಚ್ಚಿಸಲು ಯೋಚಿಸಿದೆ. ಟಿಟಿಡಿಯ ಆರು ವೇದ ಶಾಲೆಗಳು ಹಾಗೂ ಸನಾತನ ಧರ್ಮದ ಪ್ರಚಾರಕ್ಕೆ ವೇದವನ್ನು ಕಲಿಸುತ್ತೇವೆ. ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 51 ಮಂದಿ ಶಿಕ್ಷಕರ ವೇತನವನ್ನು 35,000 ದಿಂದ 54,000 ಹೆಚ್ಚಿಸಲು ಮಂಡಳಿಯು ಗ್ರೀನ್ ಸಿಗ್ನಲ್ ಕೊಟ್ಟಿದೆ.