Home daily horoscope ಕಾಲೇಜಿಗೆ ಹೋಗುವಾಗ ಜಡೆಯೆಳೆದು, ಬಟ್ಟೆಯನ್ನೂ ಎಳೆದಾಡಿದ ಪುಂಡರು | ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕಾಲೇಜಿಗೆ ಹೋಗುವಾಗ ಜಡೆಯೆಳೆದು, ಬಟ್ಟೆಯನ್ನೂ ಎಳೆದಾಡಿದ ಪುಂಡರು | ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Hindu neighbor gifts plot of land

Hindu neighbour gifts land to Muslim journalist

ಪುಂಡರ ಕಿರುಕುಳದಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ರಾಧಿಕಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆ ಗ್ರಾಮದ ಮನೆಯಲ್ಲಿ ರಾಧಿಕಾ ನೇಣಿಗೆ ಕೊರಳೊಡಿದ್ದಾಳೆ.

ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದರು. ಜಡೆ ಹಿಡಿದು ಎಳೆಯುವುದಲ್ಲದೆ, ಬಟ್ಟೆ ಕೂಡ ಎಳೆದಾಡಿದ್ದಾರೆ. ಅದಲ್ಲದೆ ಅಶ್ಲೀಲವಾಗಿ ಮಾತಾಡಿ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪೋಷಕರ ಬಳಿ ರಾಧಿಕಾ ಹೇಳಿಕೊಂಡಿದ್ದಳು. ಮೃತ ಬಾಲಕಿಯ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.