Home Entertainment ದುಡ್ಡಿನ ಪಂದ್ಯಕ್ಕಾಗಿ ಚರಂಡಿ ನೀರನ್ನೇ ಕುಡಿದ ವೃದ್ಧ|ಬೊಗಸೆ ಬಾಚಿ ಕೊಳಚೆ ನೀರು ಕುಡಿದ ಈತನ ವಿಡಿಯೋ...

ದುಡ್ಡಿನ ಪಂದ್ಯಕ್ಕಾಗಿ ಚರಂಡಿ ನೀರನ್ನೇ ಕುಡಿದ ವೃದ್ಧ|ಬೊಗಸೆ ಬಾಚಿ ಕೊಳಚೆ ನೀರು ಕುಡಿದ ಈತನ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ವಿದಿಶಾ : ದುಡ್ಡಿನ ಪಂದ್ಯ ಒಂದಕ್ಕಾಗಿ ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಘಟನೆಯ ವೀಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ವಿದಿಶಾದ ಜವಾತಿ ಗ್ರಾಮದಲ್ಲಿ ಇದೇ ಜನವರಿ 13 ರಂದು ನಡೆದಿದೆ. ಅಲ್ಲಿನ ನಿವಾಸಿ, 60 ವರ್ಷ ವಯಸ್ಸಿನ ಪನ್ನಲಾಲ್ ಅವರು ಕುಶ್ವಾಹ ಪ್ರದೇಶದ ಕ್ರಾಸಿಂಗ್ ಮೂಲಕ ಹೋಗುತ್ತಿರುವಾಗ ಆವರ ಕೈಲಲ್ಲಿರುವ ವೀಳ್ಯದೆಲೆಯ ತುಂಡು ಚರಂಡಿಗೆ ಬಿದ್ದಿತ್ತು. ಅದನ್ನು ಅವರು  ತೆಗೆದುಕೊಂಡು ಶುದ್ಧ ನೀರಿನಿಂದ ತೊಳೆದುಕೊಂಡು ಪೈಜಾಮ ದ ಜೇಬಿಗೆ ಇಳಿಸಿ ಮುಂದೆ ಸಾಗುತ್ತಿದ್ದರು.
ಈ ವೇಳೆ ಅಲ್ಲೇ ಇದ್ದ ಸರಪಂಚ್ ನ ಪ್ರತಿನಿಧಿ ಉತ್ತಮ್ ಸಿಂಗ್ ಮತ್ತು ಇತರ ಯುವಕರು ಈ ಮುದುಕರನ್ನು ಛೇಡಿಸಿದ್ದಾರೆ. ನೀವು ಚರಂಡಿ ನೀರು ಕುಡಿದರೆ 1000 ರೂ ಕೊಡುವುದಾಗಿ ಹೇಳಿದ್ದಾರೆ. ಬಳಿಕ ಇನ್ನೊಬ್ಬರು 2000 ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಖುಷಿಯಾದ ಪನ್ನಾಲಾಲ್ ಚರಂಡಿ ಬೊಗಸೆ ಬಾಚಿ ಕೊಳಚೆ ನೀರು ಕುಡಿದಿದ್ದಾರೆ.
2000 ರೂಪಾಯಿ ಆಸೆಯಿಂದಲೋ ಅಥವಾ ಪಂದ್ಯದ ವಿಷಯದಲ್ಲಿ ಉದ್ವೇಗಕ್ಕೆ ಬಿದ್ದರೋ ಗೊತ್ತಿಲ್ಲ. ಒಟ್ಟಾರೆ ಈ ರೀತಿ ಮಾಡಿ ಪಂದ್ಯ ಗೆದ್ದು 2000 ರೂಪಾಯಿ ಜೇಬಿಗೆ ಇಳಿಸಿದ್ದಾಗಿ ಪನ್ನಾಲಾಲ್ ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.