Home Interesting LIC Simple Pension Scheme: LIC ಸರಳ ಪಿಂಚಣಿ ಯೋಜನೆ : ಈ ಯೋಜನೆಯಲ್ಲಿ ಒಮ್ಮೆ...

LIC Simple Pension Scheme: LIC ಸರಳ ಪಿಂಚಣಿ ಯೋಜನೆ : ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಸಾಕು ಜೀವನ ಪೂರ್ತಿ ಪಿಂಚಣಿಯನ್ನು ಪಡೆಯಬಹುದು!

LIC Simple Pension Scheme
Image source: News Nation

Hindu neighbor gifts plot of land

Hindu neighbour gifts land to Muslim journalist

LIC Simple Pension Scheme: ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಭಾರತೀಯ(LIC Simple Pension Scheme) ಜೀವ ವಿಮಾ ನಿಗಮದಲ್ಲಿದೆ.

ಹೌದು. ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಹೂಡಿಕೆದಾರರು ಎಲ್ ಐಸಿಯನ್ನು ಮೊದಲು ಆಯ್ಕೆ ಮಾಡುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಹೂಡಿಕೆ ಮೂಲಕ ಉತ್ತಮ ರಿಟರ್ನ್ಸ್ ಪಡೆಯಬಹುದು. ಇಂತಹ ಯೋಜನೆಗಳಲ್ಲಿ ಸರಳ ಪಿಂಚಣಿ ಯೋಜನೆ ಕೂಡ ಒಂದು.

ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಜೀವನ ಪೂರ್ತಿ ಪಿಂಚಣಿಯನ್ನು ಪಡೆಯಬಹುದು. ಈ ಯೋಜನೆಯು ಲಿಂಕ್ ಮಾಡದ, ಏಕ ಪ್ರೀಮಿಯಂ, ವೈಯಕ್ತಿಕ ವರ್ಷಾಶನ ಯೋಜನೆಯಾಗಿದೆ. ಈ ಪಾಲಿಸಿಯಲ್ಲಿ ನೀವು ಒಂದು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದರ ನಂತರ ನೀವು ಜೀವನಪರ್ಯಂತ ಪಿಂಚಣಿ ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆಯ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ.

ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಪಾವತಿಸಿದ ನಂತರ ನೀವು ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಧಾರದ ಮೇಲೆ ಪಿಂಚಣಿ ಪಡೆಯಬಹುದು. ಅಲ್ಲದೆ, ಯಾವುದೇ ಕಾರಣದಿಂದ ಪಾಲಿಸಿದಾರನು ಮರಣಹೊಂದಿದರೆ, ಅಂತಹ ಪರಿಸ್ಥಿತಿಯಲ್ಲಿ ಏಕ ಪ್ರೀಮಿಯಂ ಮೊತ್ತವನ್ನು ಪಾಲಿಸಿದಾರನ ನಾಮಿನಿಗೆ ಹಿಂತಿರುಗಿಸಲಾಗುತ್ತದೆ

ಈ ಪಾಲಿಸಿಗೆ ನೀವು ಪಾವತಿಸಬೇಕಾದ ಪ್ರೀಮಿಯಂ ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ವಯಸ್ಸು ಕನಿಷ್ಠ 40 ವರ್ಷಗಳು ಮತ್ತು ಗರಿಷ್ಠ 80 ವರ್ಷಗಳು ಇರಬೇಕು. ಈ ಯೋಜನೆಯ ಪ್ರಕಾರ, ಹೆಚ್ಚು ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ, ಇಡೀ ಜೀವನಕ್ಕೆ ನೀವು ಹೆಚ್ಚು ಹಣವನ್ನು ಪಡೆಯಬಹುದು.

ಈ ಯೋಜನೆಯನ್ನು ನೀವು ಮಾಡಲು ಬಯಸಿದರೆ, www.licindia.in ವೆಬ್‌ಸೈಟ್‌ನಿಂದ ಅಥವಾ ಹತ್ತಿರದ ಆಫ್‌ಲೈನ್ LIC ಕಚೇರಿಯಿಂದ ಆನ್‌ಲೈನ್‌ನಲ್ಲಿ ಈ ಪಾಲಿಸಿಯನ್ನು ಖರೀದಿಸಬಹುದು.

 

ಇದನ್ನು ಓದಿ: 100 rupees coin:ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಲಿದೆ 100 ರೂಪಾಯಿಯ ನಾಣ್ಯ : ಮೋದಿಯವರ ಮನ್ ಕಿ ಬಾತ್ ನ 100 ನೇ ಆವೃತ್ತಿಯ ವಿಶೇಷ ನಾಣ್ಯ!