Home latest Salary Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ : ಸರ್ಕಾರಿ ನೌಕರರಿಗೆ...

Salary Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

CM Siddaramaiah
Image source: Hindustan Times

Hindu neighbor gifts plot of land

Hindu neighbour gifts land to Muslim journalist

Salary Hike: ಇನ್ನೇನು ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಗಳವಾರ ರಾಜ್ಯ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯನ್ನು (Salary Hike) ಹೆಚ್ಚಿಸಿದ್ದಾರೆ. ಈ ಮೂಲಕ (ಡಿಎ) ಅವರ ಮೂಲ ವೇತನದ ಶೇಕಡಾ 1 ರಿಂದ 42.5 ಕ್ಕೆ ಹೆಚ್ಚಿಸಿದ್ದಾರೆ. ಇದು ಪಿಂಚಣಿದಾರರಿಗೂ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಡೇಟಿಂಗ್‌ ನೆಪದಲ್ಲಿ ಪುರುಷರನ್ನು ಮನೆಗೆ ಕರೆಸಿ ಅವರಿಂದ ತನ್ನ ಸ್ನಾನ ಮಾಡಿಸಿ, ಪಾದ ಪೂಜೆ ಮಾಡಿಸುತ್ತಾಳೆ ಈ ಮಹಿಳೆ

ಈ ಶೇಕಡಾ 3.75 ಪಾಯಿಂಟ್ ಹೆಚ್ಚಳದಿಂದ ವಾರ್ಷಿಕವಾಗಿ 1,792.71 ಕೋಟಿ ರೂ. ವೆಚ್ಚವಾಗಲಿದೆ. ಹೊಸ ಡಿಎ ಹೆಚ್ಚಳವು ಜನವರಿ 1, 2024 ರಿಂದ ಅನ್ವಯಿಸುತ್ತದೆ.

ರಾಜ್ಯ ಸರ್ಕಾರವು ಯು. ಜಿ. ಸಿ./ಎ. ಐ. ಸಿ. ಟಿ. ಇ./ಐ. ಸಿ. ಎ. ಆರ್. ಮತ್ತು ಎನ್. ಜೆ. ಪಿ. ಸಿ. ವೇತನ ಶ್ರೇಣಿಗಳ ವ್ಯಾಪ್ತಿಗೆ ಬರುವ ಸಿಬ್ಬಂದಿಗಳ ತುಟ್ಟಿಭತ್ಯೆಯನ್ನು ಶೇಕಡಾ 46ರಿಂದ ಶೇಕಡಾ 50ಕ್ಕೆ ನಾಲ್ಕು ಪ್ರತಿಶತದಷ್ಟು ಹೆಚ್ಚಿಸಿದೆ. ಕೊನೆಯದಾಗಿ ಡಿಎ ಹೆಚ್ಚಳವನ್ನು ಅಕ್ಟೋಬರ್ 2023 ರಲ್ಲಿ ನೀಡಲಾಗಿತ್ತು, ಅದು ಶೇಕಡಾ 35 ರಿಂದ 38.75 ಗೆ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: ಆಮೆ ಮಾಂಸ ತಿಂದ 8 ಮಕ್ಕಳು ದಾರುಣ ಸಾವು, 78 ಜನರ ಸ್ಥಿತಿ ಗಂಭೀರ