Turtle Meat: ಆಮೆ ಮಾಂಸ ತಿಂದ 8 ಮಕ್ಕಳು ದಾರುಣ ಸಾವು; 78 ಜನರ ಸ್ಥಿತಿ ಗಂಭೀರ

Turtle Meat: ಜಂಜಿಬಾರ್ ದ್ವೀಪಸಮೂಹದ ಪೆಂಬಾ ದ್ವೀಪದಲ್ಲಿ ಸಮುದ್ರ ಆಮೆ ಮಾಂಸವನ್ನು ಸೇವಿಸಿದ ಎಂಟು ಮಕ್ಕಳು ಮತ್ತು ವಯಸ್ಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಮಾರ್ಚ್ 5 ರಂದು ಈ ಘಟನೆ ನಡೆದಿದ್ದು, ಇನ್ನೂ 78 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಲಾಗಿದೆ.

ಇದನ್ನು ಓದಿ: Mangalore Lok Sabha: ಮಂಗಳೂರು MP ಗೆ ಕಾಂಗ್ರೇಸ್ ಅಭ್ಯರ್ಥಿ ರೇಸಲ್ಲಿ ಉಳಿದವರು ಈ ಇಬ್ಬರೇ !! ವಿನಯ್ ಕುಮಾರ್ ಸೊರಕೆಗೆ ಸೀಟು ಸಿಕ್ರೆ ಗೆಲುವು ಕಷ್ಟ, ಕಾರಣ ಸೌಜನ್ಯ !!!

ಗಮನಾರ್ಹ ವಿಷಯ ಏನೆಂದರೆ ಸಮುದ್ರ ಆಮೆಯ ಮಾಂಸದಲ್ಲಿ ವಿಷದ ಅಪಾಯ ಹೆಚ್ಚಿರುವ ಹೊರತಾಗಿಯೂ, ಸುಪ್ರಸಿದ್ಧ ಆಹಾರ, ಸವಿಯಾದ ಪದಾರ್ಥವೆಂದು ಈ ಪ್ರದೇಶದಲ್ಲಿ ಪರಿಗಣಿಸಲಾಗಿದೆ. ಈ ಆಮೆ ಮಾಂಸ ಸ್ಕ್ವಿಡ್ (ಬೊಂಡಾಸ್‌) ಅಥವಾ ಅಲಿಗೇಟರ್‌ಗೆ ಸರಿಸುಮಾರು ಹೋಲಿಸಬಹುದಾದ ವಿನ್ಯಾಸದೊಂದಿಗೆ ಮಾಂಸವು ಗೋಮಾಂಸದ ರುಚಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ಈ ಸಾವು ಸಂಭವಿಸಿರುವುದು ಸಮುದ್ರ ಆಮೆಯ ಮಾಂಸವನ್ನು ತಿಂದಿರುವುದರಿಂದ ಎಂದು ದೃಢಪಟ್ಟಿದೆ ಎಂದು ಡಾ ಬಕಾರಿ ಹೇಳಿದ್ದಾರೆ. ಅಪರೂಪದ ಸಂದರ್ಭಗಳಲ್ಲಿ, ಚೆಲೋನಿಟಾಕ್ಸಿಸಮ್ ಎಂದು ಕರೆಯಲ್ಪಡುವ ಒಂದು ರೀತಿಯ ಆಹಾರ ವಿಷದ ಕಾರಣದಿಂದಾಗಿ ಆಮೆ ಮಾಂಸವು ವಿಷಕಾರಿಯಾಗಿದೆ. ನಿಖರವಾದ ಕಾರಣ ತಿಳಿದಿಲ್ಲವಾದರೂ, ಟರ್ಟಲ್ ಫೌಂಡೇಶನ್ ಚಾರಿಟಿ ಪ್ರಕಾರ, ಇದು ಆಮೆಗಳು ತಿನ್ನುವ ವಿಷಕಾರಿ ಪಾಚಿಗಳಿಂದಾಗಿ ಈ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ.

Leave A Reply

Your email address will not be published.