Home Interesting ವಿದೇಶಿಗನ ಜೊತೆ ಮನಸೋ ಇಚ್ಛೆ ಸಖತ್ ಸ್ಟೆಪ್ ಹಾಕಿದ ಇಳಿ ವಯಸ್ಸಿನ ಕಚ್ಚೆಧಾರಿ ಅಜ್ಜ |...

ವಿದೇಶಿಗನ ಜೊತೆ ಮನಸೋ ಇಚ್ಛೆ ಸಖತ್ ಸ್ಟೆಪ್ ಹಾಕಿದ ಇಳಿ ವಯಸ್ಸಿನ ಕಚ್ಚೆಧಾರಿ ಅಜ್ಜ | ಅಜ್ಜನ ಡ್ಯಾನ್ಸ್ ವೀಡಿಯೋ ಇದೀಗ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಕುಣಿಯಲು ಬೇಕಿರುವುದು ಒಳ್ಳೆಯ ಸ್ಟೇಜ್ ಅಲ್ಲ, ಶಾಸ್ತ್ರೀಯವಾಗಿ ಕಲಿತ ಸ್ಟೆಪ್ಸ್ ಅಲ್ಲ , ಬದಲಿಗೆ ಕುಣಿದು ಖುಷಿ ಪಡಲು ಬೇಕಿರೋದು ಜಸ್ಟ್ ಉಲ್ಲಾಸದ ಮನಸ್ಸು. ಇದನ್ನು ಪ್ರೂವ್ ಮಾಡಿದ್ದಾರೆ ಈ ಇಳಿವಯಸ್ಸಿನ ಕಚ್ಚೆಧಾರಿ ಅಜ್ಜ!!

ಹೌದು, ಇಲ್ಲೊಬ್ಬರು ಅಜ್ಜ ಹಾಗೆ ರಸ್ತೆಯಲ್ಲಿ ಮನಸಾರೆ ಕುಣಿದಿದ್ದಾರೆ. ಅವರು ಫಾರಿನರ್ಸ್ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈಗ ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ವಿದೇಶಿಗನೊಬ್ಬನು ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಇದರಿಂದ ಪ್ರೇರಣೆಗೊಂಡ ಅಜ್ಜ ಅವನ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ನೆರೆದಿದ್ದ ಜನಸಮೂಹವು ಇವರ ಡ್ಯಾನ್ಸ್ ನೋಡಿ ಫುಲ್ ಎಂಜಾಯ್ ಮಾಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ವಿದೇಶಿಗ ತನಗೆ ಸ್ಟೆಪ್ ಹೇಳಿಕೊಡುತ್ತಿರುವುದನ್ನು ಲೆಕ್ಕಿಸದೆ, ಅಜ್ಜ ತನಗೆ ತೋಚಿದ ಸ್ಟೆಪ್ ಅನ್ನು ಹಾಕಿ ಕುಣಿದಿದ್ದಾರೆ. ಹಾಗಿದ್ದರೂ ಅಜ್ಜನ ಸ್ಟೆಪ್ಸ್ ಮನಸ್ಸು ಗೆಲ್ಲುತ್ತದೆ.

ಡ್ಯಾನ್ಸ್ ಮಾಡುತ್ತಿರುವಾಗ ಅಜ್ಜನಲ್ಲಿದ್ದ ಮುಗ್ಧತೆ, ಆ ಕ್ಷಣದ  ಸಂತೋಷವನ್ನು ಅನುಭವಿಸುವ ಅವರ ಪರಿ ವೀಡಿಯೋದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಟ್ವಿಟ್ಟರ್ ನಲ್ಲಿ ಸುಧೀರ್ದಂಡೋಟಿಯ ಎಂಬವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಅದಕ್ಕೆ “ಸ್ವದೇಶಿ ಶೈಲಿಯ ಮುಂದೆ ವಿದೇಶಿಯರೂ ಮಂಕಾಗುತ್ತಾರೆ “ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ದಾದಾಜಿ’, ‘ಕೀಪ್ ಇಟ್ ಅಪ್ ದಾದು!’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಯೇ ಹಮಾರೆ ದಾದಾಜಿ ಹೇ ಭಾರತೀಯ ದಾದಾಜಿ(ನಮ್ಮ ಅಜ್ಜ ಭಾರತೀಯ ಅಜ್ಜ) ಎಂದು ಕಮೆಂಟ್ ಮಾಡಿದ್ದಾರೆ.

ವಿದೇಶಿಗ ಮತ್ತು ವೃದ್ಧ ಸಲ್ಮಾನ್ ಖಾನ್ ಮತ್ತು ಕಾಜೋಲ್ ನಟನೆಯ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ‘ಓ ಓ ಜಾನೇ ಜಾನಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಇಬ್ಬರು ಕೈಯನ್ನು ಕುಲುಕುವ ಮೂಲಕ ಉತ್ಸಾಹದಿಂದ ಹೊರಡುತ್ತಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದವರಂತೂ ಅಜ್ಜನ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.