Home latest Sullia: ಒಂದೇ ಮನೆಯ ನಾಲ್ಕು ಸಾಕು ಪ್ರಾಣಿಗಳನ್ನು ಕೊಂದ ಚಿರತೆ; ಭಯದಲ್ಲಿ ಸ್ಥಳೀಯರು!

Sullia: ಒಂದೇ ಮನೆಯ ನಾಲ್ಕು ಸಾಕು ಪ್ರಾಣಿಗಳನ್ನು ಕೊಂದ ಚಿರತೆ; ಭಯದಲ್ಲಿ ಸ್ಥಳೀಯರು!

Sullia

Hindu neighbor gifts plot of land

Hindu neighbour gifts land to Muslim journalist

Sullia: ದನ ಕರು ಸಹಿತ ಒಟ್ಟು ನಾಲ್ಕು ಜಾನುವಾರುಗಳನ್ನು ಚಿರತೆ ತಿಂದ ಘಟನೆಯೊಂದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ನಡೆದಿದೆ. ತೋಟಕ್ಕೆ ಮೇಯಲು ಬಿಟ್ಟಿದ ಜಾನುವಾರುಗಳನ್ನು ತಿಂದಿದ್ದು, ಚಿರತೆ ಹಾವಳಿಯಿಂದ ಜನರು ಭಯದಲ್ಲೇ ದಿನ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಅರಂತೋಡು ಗ್ರಾಮದ ಅಡ್ಕಬಳೆಯ ಲೀಲಾವತಿ ಎಂಬುವವರ ಮನೆಯ ಕರುವನ್ನು ಮೇಯಲು ಬಿಟ್ಟಿದ್ದು, ವಾಪಸ್‌ ಬಾರದೇ ಹಿನ್ನೆಲೆಯಲ್ಲಿ ಮನೆಯವರು ತೋಟಕ್ಕೆ ಹೋಗಿ ನೋಡಿದ ಸಂದರ್ಭದಲ್ಲಿ ಕರುವಿನ ಮೃತದೇಹ ಅರ್ಧ ತಿಂದ ರೀತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Kateel Mela: ಕಟೀಲಿನ ಯಕ್ಷಗಾನ ಮೇಳಗಳ ಕಾಲಮಿತಿ ತೆರವು!! ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ!

ಎರಡು ದಿನಗಳ ಹಿಂದೆ ಇದೇ ಮನೆಯಲ್ಲಿ ಮೂರು ಆಡುಗಳನ್ನು ರಾತ್ರಿ ಸಮಯ ಚಿರತೆ ಕೊಂದು ಹಾಕಿತ್ತು. ಸ್ಥಳೀಯ ಅರಣ್ಯ ಇಲಾಖೆಯವರು ಭೇಟಿ ನೀಡಿರುವುದಾಗಿ ವರದಿಯಾಗಿದೆ.