Home latest 35 ಕ್ಕೆ ಮೂರು ಮದುವೆಯಾಗಿದ್ದ ಮಂತ್ರವಾದಿ, ಇದೀಗ ನಾಲ್ಕನೇ ಪತ್ನಿಯೊಂದಿಗೆ ಪರಾರಿ !!

35 ಕ್ಕೆ ಮೂರು ಮದುವೆಯಾಗಿದ್ದ ಮಂತ್ರವಾದಿ, ಇದೀಗ ನಾಲ್ಕನೇ ಪತ್ನಿಯೊಂದಿಗೆ ಪರಾರಿ !!

Hindu neighbor gifts plot of land

Hindu neighbour gifts land to Muslim journalist

ಅನೈತಿಕ ಸಂಬಂಧವನ್ನು ಇಟ್ಟುಕೊಂಡು ಪತಿ ಅಥವಾ ಪತ್ನಿಗೆ ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಇಲ್ಲೊಬ್ಬ ಮಂತ್ರವಾದಿ ನಾಲ್ಕು ಮಹಿಳೆಯರನ್ನು ಪುಸಲಾಯಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಯೂಸಫ್ ಹೈದರ್ ಎಂಬಾತ ಮಂತ್ರವಾದಿಯ ಕೆಲಸ ಮಾಡಿಕೊಂಡಿದ್ದು, ಇದರ ಜೊತೆಗೆ ಇಂತಹ ಮೋಸ ಕೃತ್ಯ ಮಾಡುವುದರಲ್ಲಿಯೂ ಎತ್ತಿದ ಕೈ ಆಗಿದ್ದಾನೆ.

ಈತ ಹುಡುಗಿಯರನ್ನು ತನ್ನ ಜಾಲಕ್ಕೆ ಬೀಳಿಸುವುದರಲ್ಲಿಯೂ ಈತನ ಮಂತ್ರಾಕ್ಷತೆ ಸಹಾಯ ಮಾಡಿದೆ ಎನ್ನಬಹುದು. ಈತ ಒಂದು ಮದುವೆ ಆಗಿ, ಆರು ತಿಂಗಳು ಅಥವಾ 1 ವರ್ಷ ಸಂಸಾರ ಮಾಡುತ್ತಿದ್ದನಂತೆ. ನಂತರ ಒಂದು ಮಗು ಆಗುತ್ತಿದ್ದಂತೆ ಮತ್ತೊಬ್ಬಳನ್ನು ಮದುವೆಯಾಗೋದು ಈತನ ಚಾಳಿ ಆಗಿತ್ತು.

ಮೊದಲನೆಯವಳಿಗೆ ಎರಡು ಮಕ್ಕಳು. ನಂತರ ಇನ್ನೊಬ್ಬಳು ಹೀಗೆ ಅವಳ್ ಬಿಟ್ ಇವ್ಳು, ಇವಳ್ ಬಿಟ್ ಅವ್ಳು ಅಂತ ಮಹಿಳೆಯರು, ಯುವತಿಯರ ಬಾಳಲ್ಲಿ ಜಂಪಿಂಗ್ ಸ್ಟಾರ್ ಆಗಿ 35ರ ಆಸುಪಾಸಿಗೆ ಮೂರು ಮದುವೆಯಾಗಿದ್ದನಂತೆ.

ಬಳಿಕ ಈತನ ವಿಷಯ ಹೊರ ಜಗತ್ತಿಗೆ ತಿಳಿಯುತ್ತಿದ್ದಂತೆ ನಾಪತ್ತೆಯಾದ ಈತ ಅಂದೂ ಒಬ್ಬನೇ ಹೋಗದೆ ನಾಲ್ಕನೇಯವಳನ್ನೂ ಜೊತೆಗೆ ಕರೆದುಕೊಂಡು ಹೋಗಿರೋ ಘಟನೆ ಕಳಸ ಪಟ್ಟಣದಲ್ಲಿ ನಡೆದಿದೆ.

ಇದೇ ತರಹ ಆರು ತಿಂಗಳು ಅಥವಾ ಒಂದು ಮಗು ಆಗುವವರೆಗೂ ಸಂಸಾರ ನಡೆಸುತ್ತಿದ್ದ ಈತ, ವರದಕ್ಷಿಣೆಗಾಗಿ ಮದುವೆಯಾಗುತ್ತಿದ್ದ. ಆರು ತಿಂಗಳು, ವರ್ಷ ಲವ್ ಮಾಡಿ ನಂತರ ಜಗಳವಾಡಿ ಬೇರೆ ಆಗುತ್ತಿದ್ದ. ಹೀಗೆ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಇವನ ಬುದ್ಧಿ
ಮೂರು ಪತ್ನಿಯರಿಗೂ ತಿಳಿಯುತ್ತಿದ್ದಂತೆಯೇ ನಾಪತ್ತೆಯಾಗುವಾಗಲೂ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು, ಆಕೆಯ ಮಗುವಿನ ಸಮೇತವೇ ಕರೆದುಕೊಂಡು ನಾಪತ್ತೆ ಆಗಿದ್ದಾನೆ.

ಇದೀಗ, ಈತನಿಂದ ಮೋಸ ಹೋದ ಪತ್ನಿಯರು ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ. ಮೊದಲು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳುಪೇಟೆ ಮಹಿಳೆ ಜೊತೆ ಮದುವೆಯಾಗಿದ್ದ. ಆಕೆಗೆ ಎರಡು ಮಕ್ಕಳಾಗುತ್ತಿದ್ದಂತೆಯೇ ಆಕೆಯನ್ನ ಬಿಟ್ಟಿದ್ದ.

ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದ ಮಹಿಳೆಯನ್ನು ಎರಡನೇ ಮದುವೆಯಾದ. ವರ್ಷದ ಬಳಿಕ ಆಕೆಗೂ ಗೇಟ್ ಪಾಸ್ ಕೊಟ್ಟಿದ್ದಾನೆ.

ಎರಡು ಮದುವೆಯನ್ನೂ ಮುಚ್ಚಿಟ್ಟು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಯುವತಿ ಜೊತೆ ಮೂರನೇ ಮದುವೆಯಾದ. ಆಕೆಗೆ ಈಗ ಒಂದು ಹೆಣ್ಣು ಮಗುವಿದೆ. ಮಗುವಾದ ಕೂಡಲೇ ಆಕೆಗೆ ಹಿಂಸೆ ನೀಡಿ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾನೆ. ಅತ್ತ ತಂದೆ ಇಲ್ಲ. ಇತ್ತ ಗಂಡನೂ ಇಲ್ಲ. ಒಂದೂವರೆ ವರ್ಷದ ಹೆಣ್ಣು ಮಗು ಇಟ್ಕೊಂಡು ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಿದ್ದಾಳೆ.

ಮಂತ್ರವಾದಿಯ ಕೆಲಸವನ್ನೂ ಮಾಡುತ್ತಿದ್ದು, ನಿಮ್ಮ ಕಷ್ಟ ಬಗೆಹರಿಸುತ್ತೇನೆ ದೇಹದಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳಿ ಹತ್ತಿರವಾಗುತ್ತಿದ್ದ. ಆರೋಗ್ಯ ಸಮಸ್ಯೆಯನ್ನೂ ಬಗೆಹರಿಸುತ್ತೇನೆಂದು ಆಯುರ್ವೇದಿಕ್ ಔಷಧಿ ನೀಡಿ ಆಮೇಲೆ ಅವರಿಗೆ ಗಂಟು ಹಾಕಿಕೊಳ್ಳುತ್ತಿದ್ದ. ಆಮೇಲೆ ನಡುನೀರಲ್ಲಿ ಕೈಬೀಡುವುದು ಇವನ ಖಯಾಲಿ ಅಂತ ಆತನಿಂದ ಮೋಸ ಹೋದ ಮೂರನೇ ಪತ್ನಿ ಆರೋಪಿಸಿದ್ದಾರೆ.

ಕಟ್ಟಿಕೊಂಡ ತಪ್ಪಿಗೆ ಒಬ್ಬೊಬ್ಬರು ಪತ್ನಿಯರು ಒಂದೊಂದು ಕಡೆ ಮಕ್ಕಳನ್ನು ಇಟ್ಕೊಂಡು ಬದುಕಿನ ದಾರಿ ನೋಡಿಕೊಂಡಿದ್ದಾರೆ. ಈತ ಮಾತ್ರ ಯಾವುದರ ಪರಿವಿಲ್ಲದೆ ತನ್ನ ಕೆಲಸ ಮುಂದುವರೆಸಿದ್ದಾನೆ.

ಈತನಿಗೆ ಒಂದೂವರೆ ಲಕ್ಷ ವರದಕ್ಷಿಣೆ ನೀಡಿ ಮೂರನೇ ಮದ್ವೆಯಾದವಳು ಹೆಣ್ಣು ಮಗು ಇಟ್ಕೊಂಡು ಹೇಗೆ ಬದುಕೋದು ಎಂದು ಕಣ್ಣೀರಿಡುತ್ತಿದ್ದಾಳೆ.

ಇತ್ತ ಮಗಳನ್ನ ಕರೆದುಕೊಂಡು ಜೊತೆಗೆ ಸುಳ್ಳು ಮಂತ್ರವಾದಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಬೂಟ್ ಕಾಲಲ್ಲಿ ಒದ್ದು ಈ ನೀಚನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಾಲ್ಕನೇ ಮದುವೆಯಾಗಲು ರೆಡಿಯಾದ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.