Home latest ಬೆಳ್ತಂಗಡಿ: ವಿದ್ಯಾರ್ಥಿನಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

ಬೆಳ್ತಂಗಡಿ: ವಿದ್ಯಾರ್ಥಿನಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ.

ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಡಿಗೆರೆ ನಿವಾಸಿ ಕಿಟ್ಟ ಎನ್ ರವರ ಪುತ್ರಿ ಸಿಂಧು(17.ವ)ಎಂಬವರು ನಾಪತ್ತೆಯಾದವರಾಗಿದ್ದಾರೆ.

ನ.24 ರಂದು ಬೆಳಿಗ್ಗೆ ಎಂದಿನಂತೆ ಹಾಸ್ಟೆಲ್ ನ ಇತರ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿಗೆಂದು ತೆರಳಿದ್ದರು. ಆದರೆ ಸಂಜೆ 5.00 ಗಂಟೆಯವರೆಗೂ ಈಕೆ ಮರಳಿ ಬಾರದೇ ಇದ್ದು, ಅತ್ತ ಕಾಲೇಜಿಗೂ ಹೋಗದೆ ಇತ್ತ ಹಾಸ್ಟೆಲ್ ಗಾಗಲೀ, ಹೆತ್ತವರ ಮನೆಗೂ ಹೋಗದೆ
ನಾಪತ್ತೆಯಾಗಿರುತ್ತಾರೆ ಎಂಬುವುದಾಗಿ ಹಾಸ್ಟೆಲ್ ವಾರ್ಡನ್ ಶುಭಾ ನಾಯಕ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ನ.17 ರಂದು ಬೆಳ್ತಂಗಡಿ ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯಕ್ಕೆ ಸೇರ್ಪಡೆಗೊಂಡಿದ್ದ ಇವರು,ಇದೀಗ ನಾಪತ್ತೆಯಾಗಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ವಿದ್ಯಾರ್ಥಿನಿಯ ಪತ್ತೆಗಾಗಿ ತನಿಖೆ ಕಾರ್ಯ ಮುಂದುವರೆದಿದೆ.

2020-21 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ಹೊಸ ಮಾರ್ಗಸೂಚಿ ಪ್ರಕಟ