Home Education ಪಿಎಸ್‌ಐ ಹುದ್ದೆಗಳ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ನೀಡಿದ ಕರ್ನಾಟಕ ಡಿಜಿಪಿ

ಪಿಎಸ್‌ಐ ಹುದ್ದೆಗಳ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ನೀಡಿದ ಕರ್ನಾಟಕ ಡಿಜಿಪಿ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಡಿಜಿಪಿಯವರು ಇದೀಗ 402, 545 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಕೆಎಸ್‌ಆರ್‌ಪಿ/ ಐಆರ್‌ಬಿ ಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ.

402, 545 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಡಿಜಿಪಿ ಯವರು ಇದೀಗ ಮುಖ್ಯ ಮಾಹಿತಿಯೊಂದನ್ನು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಈವರೆಗೆ ಪೊಲೀಸ್ ಇಲಾಖೆ ಅಧಿಸೂಚಿಸಿದ ಹುದ್ದೆಗಳ ಪೈಕಿ ಯಾವೆಲ್ಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಕರ್ನಾಟಕ ಡಿಜಿಪಿಯವರು ಸಿಎಆರ್ / ಡಿಎಆರ್, ಕೆಎಸ್‌ಐಎಸ್‌ಎಫ್‌ ಮತ್ತು ಕೆಎಸ್‌ಆರ್‌ಪಿ ರಿಸರ್ವ್‌ ಎಸ್‌ಐ ಮತ್ತು ಪಿಎಸ್‌ಐ (402) ಹುದ್ದೆಗಳಿಗೆ ಶೀಘ್ರದಲ್ಲಿ ಲಿಖಿತ ಪರೀಕ್ಷೆ ದಿನಾಂಕಗಳು ಬಿಡುಗಡೆ ಆಗಲಿವೆ ಎಂಬ ಮಾಹಿತಿಯನ್ನು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆ ಅಧಿಸೂಚಿಸಿರುವ ಹುದ್ದೆಗಳ ಪೈಕಿ ಯಾವುದೆಲ್ಲ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ / ಲಿಖಿತ ಪರೀಕ್ಷೆ ಬಾಕಿ ಉಳಿದಿರುವ ಪರೀಕ್ಷೆಗಳ ಬಗ್ಗೆ ಮಾಹಿತಿ ಹೀಗಿದೆ:

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ – 402 ಹುದ್ದೆಗಳು
ಆರ್‌ಎಸ್‌ಐ (ಸಿಎಆರ್ / ಡಿಎಆರ್)- 71 ಹುದ್ದೆಗಳು
ಪಿಎಸ್‌ಐ (ಕೆಎಸ್‌ಐಎಸ್‌ಎಫ್‌) – 63 ಹುದ್ದೆಗಳು
ಪಿಸಿ (ಸಿವಿಲ್) – 1591 ಹುದ್ದೆಗಳು
ಪಿಸಿ (ಸಿಎಆರ್ / ಡಿಎಆರ್) – 3484 ಹುದ್ದೆಗಳು

ಸಿಎಆರ್‌ / ಡಿಎಆರ್‌ ಎಸ್‌ಐ ಹುದ್ದೆಗಳಿಗೆ ಜನವರಿ 08, 2023 ರಂದು ಪರೀಕ್ಷೆ ನಡೆಯಲಿದೆ. ಈ ಬಳಿಕ, ಕೆಎಸ್‌ಐಎಸ್‌ಎಫ್‌ ಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದ್ದು, 545 ಪಿಎಸ್‌ಐ ಹುದ್ದೆಗಳ ಪರೀಕ್ಷೆ ನಡೆಸಲು ಹೈಕೋರ್ಟ್‌ನ ಅಂತಿಮ ಆದೇಶ ಬಂದ ಬಳಿಕ ಮರು ಪರೀಕ್ಷೆ ನಡೆಸಲಾಗುತ್ತದೆ. ಇದಲ್ಲದೆ, 402 ಹುದ್ದೆಗಳಿಗೆ ಸಹ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶವನ್ನು ಪಾಲಿಸಲಾಗುವ ಕುರಿತು ಕರ್ನಾಟಕ ಡಿಜಿಪಿ ಯವರು ಟ್ವೀಟ್ ಮಾಡಿದ್ದಾರೆ.