Home International ಪುಟಿನ್ ಪರಮಾಣು ಯುದ್ಧದ ಡ್ರಿಲ್ ಗೆ ಆದೇಶ | ಇಡೀ ವಿಶ್ವ ರಾಷ್ಟ್ರಗಳಲ್ಲಿ ತಲ್ಲಣ !

ಪುಟಿನ್ ಪರಮಾಣು ಯುದ್ಧದ ಡ್ರಿಲ್ ಗೆ ಆದೇಶ | ಇಡೀ ವಿಶ್ವ ರಾಷ್ಟ್ರಗಳಲ್ಲಿ ತಲ್ಲಣ !

Hindu neighbor gifts plot of land

Hindu neighbour gifts land to Muslim journalist

ಮಾಸ್ಕೋ: ಜಗತ್ತು ನಡುಗಿದೆ. ಅತ್ತ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಯುದ್ಧದತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಹಲವಾರು ಯುಕೆ ಮಾಧ್ಯಮಗಳು ವರದಿ ಮಾಡಿವೆ.

25 ದಿನಗಳ ಯುದ್ಧದ ನಂತರವೂ ಉಕ್ರೇನ್ ಇನ್ನೂ ಸೆಟೆದು ನಿಂತಿದೆ. ಪುಟ್ಟ ರಾಷ್ಟ್ರ ಶಸ್ತ್ರಾಸ್ತ್ರಗಳನ್ನು ತ್ಯಜಿಸಿಲ್ಲ. ಇದು ಪುಟಿನ್ ಅವರನ್ನು ಕೆರಳಿಸಿದೆ. ಪುಟ್ಟ ದೇಶವೊಂದು ತನಗೆ ಸವಾಲೊಡ್ಡುತ್ತಿದೆ ಎಂದು ಪುಟಿನ್ ಈ ವಿಧ್ವಂಸಕ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆಯಿದೆ. ಅಲ್ಲದೆ ಪರಮಾಣು ಯುದ್ಧದ ಅಭ್ಯಾಸಕ್ಕಾಗಿ ಪುಟಿನ್ ತನ್ನ ಸೈನ್ಯವನ್ನು ಅಭ್ಯಾಸ ಮಾಡಲು ಆದೇಶಿಸಿದ ಕಾರಣ ವಿಶ್ವದ ರಾಷ್ಟ್ರಗಳಲ್ಲಿ ಈ ಸಂಚಲನ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ತನ್ನ ಕುಟುಂಬವನ್ನು ಸುರಕ್ಷತೆಗಾಗಿ ಸೈಬೀರಿಯಾಕ್ಕೆ ಕಳುಹಿಸಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ.
ಸೈಬೀರಿಯಾದಲ್ಲಿರುವ ಅಲ್ಟಾಯ್ ಪರ್ವತಗಳಲ್ಲಿ ಸಂಪೂರ್ಣ ಹೈಟೆಕ್ ಆಗಿರುವ ಭೂಗರ್ಭಿತ ಬಂಕರ್ ನಲ್ಲಿ ತಮ್ಮ ಕುಟುಂಬವನ್ನು ಅವರು ಇರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಶ್ಯಾ ಪ್ರಧಾನಿ ಪುಟಿನ್ ಅವರು ಅತ್ಯಂತ ಅಪಾಯಕಾರಿ ಪ್ಲಾನ್ ರೆಡಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಪರಮಾಣು ಸಂಘರ್ಷಕ್ಕಾಗಿ ರಷ್ಯಾ ಡೂಮ್ಸ್ ಡೇ ವಿಮಾನಗಳನ್ನು ಹೊಂದಿದೆ. ಇದನ್ನು ಪುಟಿನ್ ಮತ್ತು ಅವರ ನಿಕಟವರ್ತಿಗಳು ಪರಮಾಣು ಯುದ್ಧದಲ್ಲಿ ಬಳಸುತ್ತಾರೆ. ಸ್ಕೈ ಬಂಕರ್ ಕೂಡಾ ಡೂಮ್ಸ್ ಡೇ ಯೋಜನೆಯಡಿಯಲ್ಲಿತ್ತು, ಆದರೆ, ಅದು ಇನ್ನೂ ಸಿದ್ದವಾಗಿಲ್ಲ ಎಂದು ಹೇಳಲಾಗುತ್ತಿದೆ.
ತಮ್ಮ ಬೇಡಿಕೆಗೆ ಬಗ್ಗದ ಉಕ್ರೇನ್ ಮೇಲೆ ಕೊನೆಗೂ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾ ?! ದ್ವಿಮುಖ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ ಯುದ್ಧ ಪಂಡಿತರು.