Home Interesting ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಲಂಡನ್‌ನ...

ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಲಂಡನ್‌ನ ವಿಂಡ್ಸನ್ ಅರಮನೆಯಲ್ಲಿ ನಡೆಯಿತೊಂದು ಆಘಾತಕಾರಿ ಘಟನೆ

Hindu neighbor gifts plot of land

Hindu neighbour gifts land to Muslim journalist

ಕ್ರಿಸ್‌ಮಸ್ ಸಡಗರದಲ್ಲಿದ್ದ ಲಂಡನ್‌ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳ ಬಂದಿದ್ದಾನೆ. ಅಕ್ರಮವಾಗಿ ಆತ ಪ್ರವೇಶ ಮಾಡಿದ್ದರಿಂದ ಆತನನ್ನು ಬಂಧಿಸಲಾಗಿದೆ. ತಾನು ರಾಣಿ ಎರಡನೇ ಎಲಿಜಬೆತ್ ಹತ್ಯೆ ಮಾಡಲು ಬಂದಿರುವುದಾಗಿ ಖುದ್ದು ಆ ಯುವಕನೇ ಹೇಳಿಕೊಂಡಿದ್ದಾನೆ. ಆತ ಹೇಳಿರುವ ವೀಡಿಯೋ ವೊಂದು ಬಹಿರಂಗವಾಗಿದೆ.

ಆ ವೀಡಿಯೋದಲ್ಲಿ ತನ್ನ ಹೆಸರನ್ನು ಜಸ್ವಂತ್ ಸಿಂಗ್ ಚೈಲ್ ಎಂದು ಹೇಳಿರುವ ಯುವಕ, ‘ನಾನು ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದು 1919ರಲ್ಲಿ ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರಿಗೆ ಪ್ರತಿಕಾರ, ನಾನು ಏನು ಮಾಡಿದ್ದೇನೆ ಹಾಗೂ ಏನು ಮಾಡುತ್ತೇನೆ ಎಂಬುದರ ಬಗ್ಗೆ ಕ್ಷಮೆ ಇರಲಿ’ ಎಂದಿದ್ದಾನೆ.

‘ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ನಮ್ಮ ಜನಾಂಗದ ಕಾರಣದಿಂದ ಕೊಲ್ಲಲ್ಪಟ್ಟ, ಅವಮಾನಿತ ಹಾಗೂ ತಾರತಮ್ಯಕ್ಕೆ ಒಳಗಾದವರಿಗೆ ಇದು ಪ್ರತಿಕಾರವಾಗಿದೆ’ ಎಂದು ವೀಡಿಯೋದಲ್ಲಿ ಯುವಕ ಹೇಳಿಕೊಂಡಿದ್ದು, ಅದರಲ್ಲಿ ಮುಖವನ್ನು ಪರದೆಯಿಂದ ಮುಚ್ಚಿಕೊಂಡಿದ್ದಾನೆ. ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.