Home International England Trans Couple: ಮಕ್ಕಳನ್ನು ಹೆರಲಾಗದ ಪತ್ನಿ- ವಿಚಾರ ತಿಳಿದು ತಾನೇ ಹೊತ್ತು, ಹೆತ್ತು ಕೊಟ್ಟ...

England Trans Couple: ಮಕ್ಕಳನ್ನು ಹೆರಲಾಗದ ಪತ್ನಿ- ವಿಚಾರ ತಿಳಿದು ತಾನೇ ಹೊತ್ತು, ಹೆತ್ತು ಕೊಟ್ಟ ಪತಿ !! ಅರೇ.. ಇದು ಹೇಗೆ ಸಾಧ್ಯ?

England Trans Couple

Hindu neighbor gifts plot of land

Hindu neighbour gifts land to Muslim journalist

England Trans Couple: ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದಿದ್ದಾಗ ಪತಿಯೇ ಮಗುವಿಗೆ ಜನ್ಮ ಕೊಟ್ಟ ಘಟನೆ ಇಂಗ್ಲೆಂಡ್‌ನಲ್ಲಿ (England Trans Couple) ನಡೆದಿದ್ದು, ಬೆಳಕಿಗೆ ಬಂದಿದೆ. 27 ವರ್ಷದ ತೃತೀಯಲಿಂಗಿ ವ್ಯಕ್ತಿ ಕ್ಯಾಲೆಬ್ ಬೋಲ್ಡೆನ್ ಮತ್ತು ಅವರ ಪತ್ನಿ ನಿಯಾಮ್ ಬೋಲ್ಡೆನ್ (25) ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ನಿಯಾಮ್ ಮೂರು ಬಾರಿ ಗರ್ಭಪಾತಗಳನ್ನು ಎದುರಿಸಿದ್ದು, ಆ ನಂತರ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಇದರಿಂದಾಗಿ
ಆಕೆಗೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಪತಿ ಕ್ಯಾಲೆಬ್ ಮಗುವಿಗೆ ಜನ್ಮ ನೀಡಿದ್ದಾರೆ. ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದ ಕ್ಯಾಲೆಬ್ ದಂಪತಿ ಆನ್‌ಲೈನ್‌ನಲ್ಲಿ ವೀರ್ಯ ದಾನಿಗಾಗಿ ಹುಡುಕಾಡಿ ನಂತರ ಆರು ತಿಂಗಳೊಳಗೆ, ಪೋಷಕರಾದರು.

ಕ್ಯಾಲೆಬ್‌ನ ಹೊಟ್ಟೆಯಲ್ಲಿ ಮಗು ಬೆಳೆಯಲು ಪ್ರಾರಂಭಿಸಿದಾಗ, ಕುಟುಂಬಸ್ಥರು ಮತ್ತು ಸ್ನೇಹಿತರು ಅಚಲವಾದ ಬೆಂಬಲವನ್ನು ತೋರಿಸಿದರೆ, ಕೆಲವರು ಸಂದೇಹವನ್ನು ವ್ಯಕ್ತಪಡಿಸಿದರು. ಕೆಲವರ ನೋಟ ತೀಕ್ಷ್ಣವಾಗಿತ್ತು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕ್ಯಾಲೆಬ್
ಮೇ 2023 ರಲ್ಲಿ ವೆಸ್ಟ್ ಸಫೊಲ್ಕ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯ ಮಗು ಮತ್ತು ಕ್ಯಾಲೆಬ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೇರಳದ ಕೋಝಿಕ್ಕೋಡ್ನ ಉಮ್ಮಲತ್ತೂರ್ನ ತೃತೀಯಲಿಂಗಿ ದಂಪತಿ (Kerala Trans Couple) ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದರು. ಫೆ.8ರಂದು ಈ ದಂಪತಿ (couple) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ದೇಶದಲ್ಲೇ ಮೊದಲ ಪ್ರಕರಣವಾಗಿದೆ.

ಇದನ್ನೂ ಓದಿ: GruhaLakshmi Scheme: ‘ಗೃಹಲಕ್ಷ್ಮೀ’ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ – ಈ ‘ಯಜಮಾನಿ’ಯರಿಗೆ ಹಣವಿಲ್ಲ ಎಂದ ಸಚಿವ !!