Home Interesting ಹಾವುಗಳಿಗೆ ಧನ್ಯವಾದ ಹೇಳಲು ಡ್ರ್ಯಾಗನ್ ನಂತೆ ಬದಲಾದಳು ಈ ಪುಣ್ಯಾತಗಿತ್ತಿ! ಇದಕ್ಕಾಗಿ ಸುರುದ್ಲು 39 ಲಕ್ಷ:...

ಹಾವುಗಳಿಗೆ ಧನ್ಯವಾದ ಹೇಳಲು ಡ್ರ್ಯಾಗನ್ ನಂತೆ ಬದಲಾದಳು ಈ ಪುಣ್ಯಾತಗಿತ್ತಿ! ಇದಕ್ಕಾಗಿ ಸುರುದ್ಲು 39 ಲಕ್ಷ: ಒಂದು ಬಾರಿ ನೋಡಿ ಇವಳನ್ನು ಕೊನೆ ಪಕ್ಷ!!

Hindu neighbor gifts plot of land

Hindu neighbour gifts land to Muslim journalist

ಆಕೆಗೆ ತಾನು ಮನುಷ್ಯಳಂತೆ ಕಾಣುವುದು ಇಷ್ಟವಿಲ್ಲಂತೆ. ಡ್ರ್ಯಾಗನ್ ಎಂದರೆ ಬಲು ಪ್ರೀತಿ ಮಾಡುವ ಇವಳು ಅದರಂತೆ ತಾನೂ ಬದಲಾಗಬೇಕೆಂದು ಸಾಕಷ್ಟು ವರ್ಷಗಳಿಂದ ಬಯಸ್ತಿದ್ದಾಳಂತೆ. ಇದೀಗ ಸದ್ಯ ತಕ್ಕ ಮಟ್ಟಿಗೆ ಡ್ರ್ಯಾಗನ್ ಹಾಗೆ ಪರಿವರ್ತನೆಗೊಂಡಿರುವ ಈ ಮಾರಾಯ್ತಿ ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 39 ಲಕ್ಷ! ಈಗಂತೂ ಆಕೆಯ ರೂಪ ಎಂತಹವರನ್ನೂ ಭಯಪಡಿಸುತ್ತೆ! ಯಾರೀಕೆ? ಇವಳಿಗೇಕೆ ಈ ಹುಚ್ಚು ಆಸೆ ಬಂತೆದು ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ದಿನಬೆಳಗಾದರೆ ವಿಚಿತ್ರ ಎನಿಸುವಂತಹ ಅನೇಕ ವ್ಯಕ್ತಿಗಳ ಪರಿಚಯ ಆಗುತ್ತೆ. ಏನೇನೋ ಇಲ್ಲಸಲ್ಲದ ಸಾಹಸಗಳನ್ನು ಮಾಡುತ್ತ, ಸಾಧ್ಯವೇ ಇಲ್ಲವೆನ್ನುವುದನ್ನು ಸಾಧಿಸಲು ಹೊರಟು ಯಾವ್ಯಾವುದೋ ವಿಚಾರಗಳೊಂದಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ಧಿಯಾಗುವವರು ಸಾಕಷ್ಟು ಜನ ಸಿಗುತ್ತಾರೆ. ಈ ಹಿಂದೆ ಅಮೇರಿಕಾದ 45ರ ವ್ಯಕ್ತಿ ಯೋರ್ವ, 18ರ ತರುಣನಂತಾಗಲೂ ಕೋಟಿ ಕೋಟಿ ಖರ್ಚು ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದ. ಸದ್ಯ ಎಲ್ಲೆಡೆ ಸುದ್ದಿಯಲ್ಲಿರುವ, ಶಸ್ತ್ರಚಿಕಿತ್ಸೆ ಮೂಲಕ ಡ್ರ್ಯಾಗನ್ ರೀತಿ ಕಾಣುವ ಇವಾ ಟಿಯಾಮತ್ ಮೆಡುಸಾ ಎನ್ನುವ ಮಹಿಳೆ ಕೂಡ ಇದಕ್ಕೆ ತಾಜಾ ಉದಾಹರಣೆಯಾಗಿದ್ದಾಳೆ.

ಹೌದು, ಅಮೆರಿಕದ ಟೆಕ್ಸಾಸ್​ನ ಬ್ರೂನಿ ಎಂಬಲ್ಲಿ ಜನಿಸಿದ ಮೆಡುಸಾ ತನ್ನ ನಿಜರೂಪವನ್ನು ಬದಲಾಯಿಸಿಕೊಂಡಿದ್ದು, ಇದೀಗ ತನ್ನನ್ನು ನೋಡುವ ಜನರೆಲ್ಲರೂ ಹೆದರುವಂತೆ ಮಾಡಿದ್ದಾರೆ. ತನ್ನ ಅಷ್ಟು ಚಂದದ ರೂಪವನ್ನು ಮರೆಮಾಚಿ ಈಕೆಯು ಪ್ಲಾಸ್ಟಿಕ್ ಸರ್ಜರಿ ಮೂಲಕ ಡ್ರ್ಯಾಗನ್ ಆಗಿ ರೂಪಾಂತರಗೊಂಡಿದ್ದಾರೆ. ಈ ಹೊಸದಾದ ನೋಟವನ್ನು ಪಡೆಯಲು ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದಕ್ಕಾಗಿ ಸುಮಾರು 39ಲಕ್ಷ ಖರ್ಚು ಮಾಡಿದ್ದಾಳೆ ಈ ಡ್ರ್ಯಾಗನ್ ರಾಣಿ.

ಲಕ್ಷಗಟ್ಟಲೆ ಹಣ ಸುರಿದು, ಕೊನೆಗೂ ತನ್ನಿಚ್ಟೆಯಂತೆ ಡ್ರ್ಯಾಗನ್ ರೂಪ ಪಡೆದ ಈ ಪುಣ್ಯಾತಗಿತ್ತಿ, ಅದಕ್ಕಾಗಿ ತನ್ನ ಕಿವಿಯನ್ನು ಸಂಪೂರ್ಣವಾಗಿ ಕತ್ತರಿಸಿದ್ದು, ಮೂಗನ್ನೂ ಅರ್ಧ ಕತ್ತರಿಸಿಕೊಂಡಿದ್ದಾಳೆ. ಇದಲ್ಲದೇ ತಲೆ ಮೇಲೆ ಎಂಟು ಕೊಂಬುಗಳನ್ನು ಮಾಡಿಕೊಂಡಿದ್ದು, ತನ್ನ ನಾಲಿಗೆಯನ್ನು ಹಾವಿನಂತೆ ಎರಡಾಗಿ ಕತ್ತರಿಸಿ ಬುಸ್, ಬುಸ್ ಎಂದು ಆಗಾಗ ಹೊರ ಚಾಚುತ್ತಿದ್ದಾಳೆ. ತನ್ನ ದೇಹದ ಮೇಲೆ ಹಲವು ರೀತಿಯ ಹಚ್ಚೆಗಳನ್ನು ಸಹ ಹಾಕಿಸಿಕೊಂಡಿರುವ ಈಕೆ ತನ್ನ ಕಣ್ಣುಗಳ ಬಿಳಿ ಬಣ್ಣವನ್ನು ಹಸಿರು ಬಣ್ಣಕ್ಕೆ ಮಾರ್ಪಡಿಸಿಕೊಂಡಿದ್ದಾಳೆ.

ಅಲ್ಲದೆ ವರದಿಗಳ ಪ್ರಕಾರ, ಮೆಡುಸಾ ಮಗುವಾಗಿದ್ದಾಗಲೇ ಆಕೆಯ ಪೋಷಕರು ಅವಳನ್ನು ಮನೆಯಿಂದ ಹೊರಹಾಕಿದ್ದರು. ಅಂದಿನಿಂದ ಅವಳು ಹಾವುಗಳೊಂದಿಗೆ ವಾಸಿಸಲು ಆರಂಭಿಸಿದ್ದಳು. ಇದರ ಕುರಿತು ಪ್ರತಿಕ್ರಿಯಿಸಿದ ಅವಳು ನನ್ನನ್ನು ಚಿಕ್ಕಂದಿನಿಂದಲೂ ಈ ಹಾವುಗಳೇ ಪೋಷಿಸಿಕೊಂಡು ಬಂದಿವೆ. ಹಾಗಾಗಿ ಈ ಸರೀಸೃಪ ಜಾತಿಗೆ ಧನ್ಯವಾದ ಹೇಳಲು ತನ್ನನ್ನು ಈ ರೀತಿ ಬದಲಾಯಿಸಿಕೊಂಡಿದ್ದೇನೆ ಎಂದಿದ್ದಾಳೆ. ಅದೇನೇ ಇರಲಿ ಈ ಎಲ್ಲಾ ವಿಚಿತ್ರ ಬದಲಾವಣೆಗಳಿಂದ ಇವಳ ಈಗಿನ ರೂಪ, ನೋಡಿದ ಎಲ್ಲರೂ ಭಯ ಹುಟ್ಟಿಸೋದು ಮಾತ್ರ ಗ್ಯಾರಂಟಿ!