Home Food ಮಗಳ ಸಾವಿನ ಸುದ್ದಿ ನ್ಯೂಸ್ ಚಾನೆಲ್ ನಲ್ಲಿ ನೋಡಿ ಕುಸಿದು ಬಿತ್ತು ಕುಟುಂಬ !!!

ಮಗಳ ಸಾವಿನ ಸುದ್ದಿ ನ್ಯೂಸ್ ಚಾನೆಲ್ ನಲ್ಲಿ ನೋಡಿ ಕುಸಿದು ಬಿತ್ತು ಕುಟುಂಬ !!!

Hindu neighbor gifts plot of land

Hindu neighbour gifts land to Muslim journalist

ಕೇರಳದ ಆಲಪ್ಪುಳ ಮೂಲದ ರಾಷ್ಟ್ರೀಯ ಸೈಕಲ್ ಪೋಲೋ ಆಟಗಾರ್ತಿ ಫಾತಿಮಾ ನಿದಾ ಫುಡ್ ಪಾಯಿಸನ್ ನಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಫಾತಿಮಾ ನಿದಾ ಅವರು ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆಕೆ ಚಿಕಿತ್ಸೆ ಫಲಿಸದ ಹಿನ್ನೆಲೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಫಾತಿಮಾಳ ತಂದೆ ಶಿಹಾಬುದ್ದೀನ್​ ಓರ್ವ ಚಾಲಕರಾಗಿದ್ದು, ಮಗಳ ಸ್ಥಿತಿ ಗಂಭೀರವಾಗಿರುವ ಬಗ್ಗೆ ಕರೆ ಮೂಲಕ ತಿಳಿದು ಶಿಹಾಬುದ್ದೀನ್​, ತಕ್ಷಣವೇ ನಾಗ್ಪುರದಲ್ಲಿರುವ ಮಗಳನ್ನು ನೋಡಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ಇದ್ದಾಗ ನ್ಯೂಸ್​ ಚಾನೆಲ್​ ವೀಕ್ಷಣೆ ಮಾಡುವ ಸಂದರ್ಭ ಮಗಳು ಮೃತಪಟ್ಟಿರುವ ಸುದ್ದಿ ನೋಡಿ ಅಲ್ಲಿಯೆ ಅವರು ಆಘಾತದಿಂದ ಕುಸಿದು ಬಿದ್ದಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಂದೆಯ ಸ್ಥಿತಿ ನೋಡಿದ ಪ್ರಯಾಣಿಕರ ಕಣ್ಣಾಲಿಗಳು ಕೂಡ ತುಂಬಿದ್ದವು.

ಮಗಳ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಅರಿಯದ ತಾಯಿ ಅನ್ಸಿಲಾ ಮತ್ತು ತಮ್ಮ ಮೊಹಮ್ಮದ್​ ನಬೀಲ್​​ಗೆ ಮಗಳ ಸ್ಥಿತಿಯ ಬಗ್ಗೆ ಶಿಹಾಬುದ್ದೀನ್​ ಏನು ಮಾಹಿತಿ ನೀಡಿರಲಿಲ್ಲ. ಆದರೆ, ಸುದ್ದಿ ಮಾಧ್ಯಮಗಳ ಮೂಲಕ ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ರಾಷ್ಟ್ರೀಯ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನ ಆಯೋಜಕರು ಕೇರಳ ತಂಡಕ್ಕೆ ವಸತಿ ವ್ಯವಸ್ಥೆ ಮಾಡುವುದನ್ನು ತಪ್ಪಿಸಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಇಂಡಿಯನ್ ಸೈಕಲ್ ಪೋಲೋ ತಂಡದ ಮಾಜಿ ನಾಯಕ ಪಿ.ಶಿವಕುಮಾರ್ ಆರೋಪಿಸಿದ್ದಾರೆ.

ಸಂಸ್ಥೆಯ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ತಾತ್ಕಾಲಿಕ ಸೌಲಭ್ಯಗಳನ್ನು ಸ್ಥಾಪಿಸಲಾಗಿದ್ದ ಕುರಿತು ಶಿವಕುಮಾರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಂಸದೆ ಪಿ.ಟಿ.ಉಷಾ, ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.