Home Fashion Freddie Mercury: ಅಬ್ಬಬ್ಬಾ, ಬರೋಬ್ಬರಿ 18 ಲಕ್ಷಕ್ಕೆ ಹರಾಜಾಯ್ತು ಈತನ ಚಡ್ಡಿ.! ಏನೀ ಚಡ್ಡಿಯ ಮರ್ಮ...

Freddie Mercury: ಅಬ್ಬಬ್ಬಾ, ಬರೋಬ್ಬರಿ 18 ಲಕ್ಷಕ್ಕೆ ಹರಾಜಾಯ್ತು ಈತನ ಚಡ್ಡಿ.! ಏನೀ ಚಡ್ಡಿಯ ಮರ್ಮ ?

Freddie Mercury
Image source- News 18, Oasis.pe

Hindu neighbor gifts plot of land

Hindu neighbour gifts land to Muslim journalist

Freddie Mercury: ಸಾಮಾನ್ಯವಾಗಿ ಹುಡುಗರು ಧರಿಸೋ ಚಡ್ಡಿ, ಪ್ಯಾಂಟುಗಳು ಹಾಕಿ ಹಾಕಿ ಹಳತಾಯ್ತು, ಇಲ್ಲ ಬೋರ್ ಆಯ್ತು ಅಂದ್ರೆ ಏನು ಮಾಡ್ತಾರೆ ಹೇಳಿ? ಹೊರಗಡೆ ಬಿಸಾಡೋದು, ಅಥವಾ ಮನೆಯಲ್ಲಿ ಯಾರಾದ್ರೂ ಚಿಕ್ಕೋರಿದ್ರೆ ಅವರಿಗೆ ಕೊಡೋದು ಮಾಡುತ್ತೇವೆ. ಇಲ್ಲ ಒಮ್ಮೊಮ್ಮೆ ಅದು ಅಮ್ಮನ ಅಡುಗೆಯ ಮಸಿ ಬಟ್ಟೆ ಕೂಡ ಆಗುತ್ತೆ. ಆದರೆ ಇಲ್ಲೊಂದೆಡೆ ಒಬ್ಬ ಖ್ಯಾತ ಗಾಯಕ ಹಾಕಿದ ಚಡ್ಡಿಯೊಂದು ಬರೋಬ್ಬರಿ 18 ಲಕ್ಷಕ್ಕೆ ಮರಾಟವಾಗಿದೆ!

ಹೌದು, 70-80ರ ದಶಕದ ಖ್ಯಾತ ಬ್ರಿಟೀಷ್ ಗಾಯಕ ಹಾಗೂ ಗೀತೆ ರಚನೆಕಾರ​ ಫ್ರೆಡ್ಡಿ ಮರ್ಕ್ಯುರಿ ಅವರ ಕೆಲವು ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು, ಈ ವೇಳೆ ಅವರ ಹಾಟ್‌ಪ್ಯಾಂಟ್‌ 18 ಲಕ್ಷಕ್ಕೆ ಮಾರಾಟವಾಗಿದೆ. 1980 ರ ಬರ್ಮಿಂಗ್‌ಹ್ಯಾಮ್ ಗಿಗ್‌ನಲ್ಲಿ ಫ್ರೆಡ್ಡಿ ಅವರು ಧರಿಸಿದ್ದ ಚಿಕ್ಕ ಹಾಟ್‌ಪ್ಯಾಂಟ್‌ಗಳು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ಹರಾಜಿನಲ್ಲಿ 18000 ಪೌಂಡ್‌ಗಳಿಗೆ (ರೂ 18,37,658) ಮಾರಾಟವಾಯಿತು ಎಂದು ಬಿಬಿಸಿ ವರದಿ ಮಾಡಿದೆ.

ಅಂದಹಾಗೆ ಫ್ರೆಡ್ಡಿ ಮರ್ಕ್ಯುರಿ ರಾಕ್ (Freddie Mercury) ಬ್ಯಾಂಡ್ ಕ್ವೀನ್‌ನ ಪ್ರಮುಖ ಗಾಯಕರಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ್ದರು. ಹರಾಜಾದ ಫ್ರೆಡ್ಡಿ ಅವರ ಈ ಚಡ್ಡಿಯನ್ನು ಅವರು ಹಲವಾರು ಪ್ರದರ್ಶನಗಳಲ್ಲಿ ಧರಿಸಿದ್ದರು ಮತ್ತು ಕ್ವೀನ್ಸ್ ಫ್ಯಾನ್ ಕ್ಲಬ್ ಕಾರ್ಯದರ್ಶಿ ಜಾಕಿ ಗನ್ ಅವರು 1992 ರ ಜೀವನಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹರಾಜು ಮನೆಯ ಪ್ರಕಾರ, ಡಿಸೆಂಬರ್ 6, 1980 ರಂದು ಬರ್ಮಿಂಗ್‌ಹ್ಯಾಮ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಫ್ರೆಡ್ಡಿ ಮರ್ಕ್ಯುರಿ ತಮ್ಮ ಸಂಗೀತ ಕಚೇರಿಯಲ್ಲಿ ಇದನ್ನು ಧರಿಸಿದ್ದರು. ಕಪ್ಪು ಲೆದರ್​ ಹಾಟ್‌ಪ್ಯಾಂಟ್‌ ಇದಾಗಿದೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ: Baby born with shell: ನವಜಾತ ಶಿಶುವಿನ ಬೆನ್ನಿನ ಮೇಲೆ ವಿಚಿತ್ರ ಕಾಯಿಲೆ…! ಯಾವುದು ಗೊತ್ತಾ?