Home Breaking Entertainment News Kannada 20 ವರ್ಷಕ್ಕೇ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿಯ ಮರಣೋತ್ತರ ಪರೀಕ್ಷೆ ಬಹಿರಂಗ!

20 ವರ್ಷಕ್ಕೇ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿಯ ಮರಣೋತ್ತರ ಪರೀಕ್ಷೆ ಬಹಿರಂಗ!

Hindu neighbor gifts plot of land

Hindu neighbour gifts land to Muslim journalist

ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ ಸಾವು ಸದ್ಯ ಸಂಚಲನ ಮೂಡಿಸಿದೆ. ಅವರ ಅಕಾಲಿಕ, ನಿಗೂಢ ಸಾವಿನ ಬೆನ್ನಲ್ಲೇ ರೋಚಕ ಸತ್ಯಗಳು ಬಹಿರಂಗವಾಗುತ್ತಿದೆ. ತುನಿಶಾ ಶರ್ಮಾ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದು, ಈಕೆಯ ಸಾವಿಗೆ ಪ್ರಿಯಕರ ಶಿಜಾನ್ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಜೊತೆಗೆ ಆಕೆ ಗರ್ಭವತಿ ಆಗಿದ್ದರೇ ಎಂಬ ಅನುಮಾನ ಕೂಡ ಭುಗಿಲೆದ್ದಿದೆ.

ತುನಿಶಾ ಚಿಕ್ಕವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ಹಿನ್ನೆಲೆ ಖಿನ್ನತೆಗೆ ಒಳಪಟ್ಟಿದ್ದರು. ಹೀಗಾಗಿ, ಪಾಂಡ್ಯಾ ಸ್ಟೋರ್​ ನಟ ಕನ್ವರ್​ ದಿಲೊನ್ ​ಅವರ ನೆರವು ಪಡೆದಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದ ತುನಿಶಾರನ್ನು ಇವರೇ ಆಕೆಯನ್ನು ತಕ್ಷಣವೇ ಅಸ್ಪತ್ರೆಗೆ ದಾಖಲಿಸಿದ್ದರು.

ಕೆಲ ಮಾಧ್ಯಮ ವರದಿ ಪ್ರಕಾರ, ಟಿವಿ ಸೀರಿಯಲ್ ನ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಯಕ ನಟನ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ. ಇನ್ನು ನಟಿಯ ಈ ನಿರ್ಧಾರ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಕುರಿತಾಗಿ, ದಾಸ್ತಾನ್​ ಇ- ಕಬೂಲ್​ ಶೀಜನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಾಗಿದ್ದು, ಈ ಕುರಿತಾಗಿ ತುನಿಶಾ ತಾಯಿ ಈ ನಟನನಿಂದ ಮಗಳು ಮಾನಸಿಕವಾಗಿ ಒತ್ತಡಕ್ಕೆ ತುತ್ತಾಗಿದ್ದಳು ಎಂದು ಆರೋಪಿಸಿ ದೂರು ದಾಖಲಿಸಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

20 ವರ್ಷದ ನಟಿ ತುನೀಶಾ ಆತ್ಮಹತ್ಯೆ ಹಿನ್ನೆಲೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ತುನಿಶಾ ಗರ್ಭಿಣಿ ಆಗಿರಲಿಲ್ಲ ಎಂಬ ವಿಚಾರ ಬಹಿರಂಗವಾಗಿದ್ದು, ಅವರು ನೇಣಿಗೆ ಶರಣಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ವರದಿ ಹೇಳಿದೆ.ತಮ್ಮ ಸಹ ಕಲಾವಿದ ಬಾಯ್​ಫ್ರೆಂಡ್​ ಶೀಝಾನ್​​​ ಮಹಮ್ಮದ್​ ಖಾನ್​ ಅವರ ಮೇಕಪ್​ ರೂಂನಲ್ಲಿ ಡಿಸೆಂಬರ್​ 24ರಂದು ಆತ್ಮಹತ್ಯೆ ಶರಣಾಗಿದ್ದರು.

ಜೆಜೆ ಆಸ್ಪತ್ರೆಯಲ್ಲಿ ತುನಿಶಾ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಟಿಯ ದೇಹದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ವರದಿ ಪ್ರಕಾರ, ತುನಿಶಾ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.