Home Entertainment ಗ್ರಾಹಕರೇ ಗಮನಿಸಿ : ಹೊಸ ವರ್ಷದಂದು ಬದಲಾಗಲಿದೆ ಈ ಎಲ್ಲಾ ನಿಯಮಗಳು!

ಗ್ರಾಹಕರೇ ಗಮನಿಸಿ : ಹೊಸ ವರ್ಷದಂದು ಬದಲಾಗಲಿದೆ ಈ ಎಲ್ಲಾ ನಿಯಮಗಳು!

Hindu neighbor gifts plot of land

Hindu neighbour gifts land to Muslim journalist

ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆಯ ತಿಂಗಳು ಮುಗಿಯಲಿದ್ದು, ಹೊಸ ವರ್ಷದ 2023 ರ ಹೊಸ್ತಿಲಿನ ಸಮೀಪದಲ್ಲಿದ್ದೇವೆ. ಈ ವೇಳೆ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಟೋಲ್ ತೆರಿಗೆ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ಕೆಲವು ಪ್ರಮುಖ ಬ್ಯಾಂಕ್ ನಿಯಮಗಳು ಬದಲಾಗಲಿದೆ.

2023 ಜನವರಿ 1 ರಿಂದ ಬದಲಾಗಲಿರುವ ನಿಯಮಗಳು :

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿ ಮಾಡಲಾಗುತ್ತದೆ. ಕಳೆದ ತಿಂಗಳು, ಸರ್ಕಾರವು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬಾರಿ ಸರ್ಕಾರವು ಬೆಲೆಯನ್ನು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಕೊಳ್ಳುವುದು ಉತ್ತಮ. ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ನಂಬರ್ ನೊಂದಿಗೆ ರ್ನೊಂದಿಗೆ ಲಿಂಕ್ ಮಾಡದಿದ್ದರೆ, ಈ ಕೆಲಸವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವುದು ಉತ್ತಮ. ಆದಾಯ ತೆರಿಗೆ ಇಲಾಖೆ ತನ್ನ ಮಿತಿಯನ್ನು ಏಪ್ರಿಲ್ 2023 ರವರೆಗೆ ವಿಸ್ತರಣೆ ಮಾಡಿದ್ದರು ಕೂಡ , ಈ ವಿಳಂಬವು ನಿಮ್ಮ ಬ್ಯಾಂಕಿಂಗ್ ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಟೋಲ್ ತೆರಿಗೆ ದುಬಾರಿಯಾಗಲಿದೆ. ಡಿಸೆಂಬರ್ 31 ರ ನಂತರ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ತೆರಿಗೆ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಯುಪಿಡಿಎ ಟೋಲ್ ದರದ ಪ್ರಕಾರ, ಕಾರುಗಳು, ವ್ಯಾನ್ಗಳು ಅಥವಾ ಲಘು ವಾಹನಗಳಿಗೆ 610 ರೂ., ಲಘು ವಾಣಿಜ್ಯ ವಾಹನಗಳು ಅಥವಾ ಮಿನಿ ಬಸ್ಗಳಿಗೆ 965 ರೂ.ಗಳ ಟೋಲ್ ತೆರಿಗೆಯನ್ನು ವಿಧಿಸಲಾಗುತ್ತದೆ.


ಬಸ್ ಮತ್ತು ಟ್ರಕ್ ಗೆ 1935 ರೂ. ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಸುಮಾರು 300 ಕಿ.ಮೀ ಉದ್ದವಿದೆ. ಈ ಎಕ್ಸ್ಪ್ರೆಸ್ವೇ ಚಿತ್ರಕೂಟ, ಬಂದಾ, ಔರೈಯಾ, ಹಮೀರ್ಪುರ್, ಜಲೌನ್ ಮತ್ತು ಇಟಾವಾ ಮೂಲಕ ಹಾದುಹೋಗುತ್ತದೆ. ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇಗೆ ಸಂಪರ್ಕ ಕಲ್ಪಿಸುತ್ತದೆ.ಇದು ದೆಹಲಿ ಎನ್ಸಿಆರ್ವರೆಗೆ ಹೋಗುತ್ತದೆ. ಯಮುನಾ ಎಕ್ಸ್ ಪ್ರೆಸ್ ವೇ ಮೇಲಿನ ಟೋಲ್ ತೆರಿಗೆಯನ್ನು ಈಗಾಗಲೇ ಏರಿಕೆ ಮಾಡಲಾಗಿದೆ.

ಸಣ್ಣ ಉದ್ಯಮಗಳಿಗೆ ಇ-ಬಿಲ್ ಕಡ್ಡಾಯವಾಗಿದೆ. ನೀವು ಸಣ್ಣ ವ್ಯವಹಾರ ಮಾಡುವವರಾದರೆ, ಇ-ಬಿಲ್ ನ ನಿಯಮಗಳು ಬದಲಾವಣೆಯ ಕುರಿತು ಗಮನ ಹರಿಸಿದರೆ ಒಳ್ಳೆಯದು. ಸಿಬಿಐಸಿ ಪ್ರಕಾರ, ಜನವರಿ 1, 2023 ರಿಂದ, 5 ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ನಡೆಸುವವರು ಇ-ಇನ್ವಾಯ್ಸಿಂಗ್ , ಎಲೆಕ್ಟ್ರಾನಿಕ್ ಬಿಲ್ಗಳನ್ನು ರಚಿಸುವುದು ಕಡ್ಡಾಯವಾಗಿದ್ದು, ಈ ಮೊದಲು ಈ ಮಿತಿ 20 ಕೋಟಿ ರೂ. ಆಗಿತ್ತು.

ಹೇಳಿ ಕೇಳಿ ಇದು ಡಿಜಿಟಲ್ ಯುಗ..ಕ್ರೆಡಿಟ್ ಕಾರ್ಡ್ ಅನ್ನು ಬಳಸುವವರ ಸಂಖ್ಯೆ ಕೂಡ ಹೆಚ್ಚಿದೆ. ಡಿಸೆಂಬರ್ 31 ರೊಳಗೆ ನಿಮ್ಮ ಎಲ್ಲಾ ರಿವಾರ್ಡ್ ಪಾಯಿಂಟ್ ಗಳನ್ನು ಪಡೆದು ಕೊಳ್ಳಬಹುದು. ಇಲ್ಲದಿದ್ದರೆ ಅವು ಕಳೆದುಹೋಗಬಹುದು. ಎಚ್ಡಿಎಫ್ಸಿ ಎಸ್ಬಿಐ ಸೇರಿದಂತೆ ಹೆಚ್ಚಿನ ಬ್ಯಾಂಕುಗಳ ರಿವಾರ್ಡ್ ಪಾಯಿಂಟ್ಗಳಿಗೆ ಸಂಬಂಧಿಸಿದ ನಿಯಮಗಳು ಜನವರಿ 1 ರಿಂದ ಬದಲಾವಣೆ ಮಾಡಲಿವೆ ಎನ್ನಲಾಗಿದೆ .

ವಿಮಾ ಪ್ರೀಮಿಯಂಗಳು ಹೊಸ ವರ್ಷದಿಂದ ಹೆಚ್ಚು ದುಬಾರಿಯಾಗುವ ಸಾದ್ಯತೆ ಇದೆ. ಐಆರ್ಡಿಎಐ ವಾಹನಗಳ ಬಳಕೆ ಮತ್ತು ನಿರ್ವಹಣೆಯ ಆಧಾರದ ಮೇಲೆ ವಿಮಾ ಪ್ರೀಮಿಯಂಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಪರಿಗಣನೆ ಮಾಡಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಚಾಲಕರು ಹೊಸ ವರ್ಷದಲ್ಲಿ ದುಬಾರಿ ವಿಮಾ ಪ್ರೀಮಿಯಂಗಳ ಸಮಸ್ಯೆ ಕೂಡಾ ತಲೆದೋರಬಹುದು. ಮೇಲೆ ತಿಳಿಸಿದ ವಿಚಾರಗಳ ಮೇಲೆ ಗಮನ ಹರಿಸಿ ಕ್ರಮ ಕೈಗೊಳ್ಳುವುದು ಶ್ರೇಯಸ್ಕರ.