Home Entertainment Roopesh Shetty Bigg Boss Kannada : ಇವರೇ ನೋಡಿ ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ಟ್ರೋಫಿ...

Roopesh Shetty Bigg Boss Kannada : ಇವರೇ ನೋಡಿ ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ ಟ್ರೋಫಿ ಗೆಲ್ಲಲು ಕಾರಣ

Hindu neighbor gifts plot of land

Hindu neighbour gifts land to Muslim journalist

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ವಿಜೇತರ ಪಟ್ಟಿ ಹೊರ ಬಿದ್ದು, ದೊಡ್ದ ಅಭಿಮಾನಿ ಬಳಗ ಹೊಂದಿದ್ದ ರೂಪೇಶ್ ಶೆಟ್ಟಿ ಸೀಸನ್ 9 ರಲ್ಲಿ ವಿನ್ನರ್ ಆಗಿದ್ದು, ಗೊತ್ತಿರುವ ವಿಚಾರವೇ!!! ಇದೀಗ, ರೂಪಿ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ.

ಹೌದು!!!!ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ ತಮ್ಮ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.ಸದ್ಯ, ಕನ್ನಡ ಬಿಗ್​ಬಾಸ್ ಸೀಸನ್ (Bigg Boss) 9 ಮುಗಿದಿದ್ದು, ಟಫ್ ಕಾಂಪಿಟೇಷನ್ ನಡುವೆ ರೂಪೇಶ್ ಶೆಟ್ಟಿ (Roopesh Shetty) ಅವರು ಬಿಗ್​ಬಾಸ್ (Bigg Boss)​ ವಿನ್ನರ್ ಆಗಿ ಹೊರಹೊಮ್ಮಿದ್ದು ಟ್ರೋಫಿ (Trophy) ಗೆದ್ದುಕೊಂಡು ಹೊರಬಂದಿದ್ದಾರೆ. ರೂಪೇಶ್ ಶೆಟ್ಟಿ ಗೆಲುವಿನ ಬಳಿಕ ವೀಡಿಯೋವೊಂದು ವೈರಲ್ ಆಗಿ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ಅಂತಹದ್ದೇನಿದೆ??? ಆ ವಿಡಿಯೋದಲ್ಲಿ ಎಂದು ನೀವು ಕೇಳಬಹುದು!!

ರೂಪೇಶ್ ಶೆಟ್ಟಿ ಅವರು ಯುವತಿಯೊಬ್ಬರ ಜೊತೆ ಕಾಣಿಸಿಕೊಂಡು ವಿಡಿಯೋದಲ್ಲಿ ಒಂದು ಮುಖ್ಯ ಸೀಕ್ರೇಟ್ ರಿವಿಲ್ ಮಾಡಿದ್ದು, ಬಿಗ್ ಬಾಸ್ ಸೀಸನ್ 9 ರಲ್ಲಿ ತಾವು ಕಪ್ ಎತ್ತಲು ಅಸಲಿ ಕಾರಣ ಯಾರು ಎಂಬ ಗುಟ್ಟು ರಟ್ಟು ಮಾಡಿದ್ದಾರೆ. ರೂಪೇಶ್ ಶೆಟ್ಟಿ ನಾನು ಯಾರಿಗೂ ಹೇಳದ ವಿಚಾರ ಒಂದಿದ್ದು, ಅದನ್ನು ಈಗ ಹೇಳುತ್ತಿದ್ದೇನೆ ಎಂದು ಹೇಳಿದ್ದು ರೂಪಿ ಜೊತೆಗೆ ಯುವತಿ ಕೂಡ ಜೊತೆಗಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಸೀಸನ್ 9ರ ಒಟಿಟಿ ಮುಗಿಸಿಕೊಂಡು ಬರುವಾಗ ವರ್ಷಿಣಿ ಅವರು ಇಂಟರ್​​ವ್ಯೂ ತೆಗೆದುಕೊಳ್ಳುತ್ತಿದ್ದರು. ಅಷ್ಟೆ ಅಲ್ಲದೆ, ನಾನು ಇಂಟರ್​ವ್ಯೂ ತೆಗೆದುಕೊಂಡಿದ್ದಕ್ಕೆ ನೀವು ಒಟಿಟಿ ವಿನ್ ಆಗಿದ್ದೀರಿ ಎಂದು ಹೇಳಿದ್ದು, ಈಗ ಸೀಸನ್ 9 ರಲ್ಲಿ ನೀವು ನನಗೆ ಇಂಟರ್​ವ್ಯೂ ಕೊಟ್ಟರೆ ಈ ಬಾರಿ ಸೀಸನ್ 9ರಲ್ಲಿ ಕೂಡ ವಿನ್ ಆಗುತ್ತೀರಿ ಅಂತ ಹೇಳಿದ್ದರು. ನಾನು ಹೇಳದೆ ಕೇಳದೆ ಜಾಸ್ತಿ ಮಾತನಾಡಿಬಿಟ್ಟಿದ್ದಿನಿ. ಥಾಂಕ್ಯೂ ಸೋ ಮಚ್, ಇವರಿಂದಲೇ ನಾನು ವಿನ್ ಆಗಲು ಇವರೇ ಕಾರಣ ಎಂದು ವರ್ಷಿಣಿ ಅವರನ್ನು ರೂಪೇಶ್ ಶೆಟ್ಟಿ ತೋರಿಸಿ ಹಾಸ್ಯದ ಬುಗ್ಗೆಗಳ ಜೊತೆಗೆ ಖುಷಿಯನ್ನು ಹೊರ ಹಾಕಿದ್ದಾರೆ.

https://www.instagram.com/reel/Cm3oz53q-_Z/?igshid=Yzg5MTU1MDY=

ಇವರಿಬ್ಬರ ವಿಡಿಯೋ ತುಣುಕುಗಳು ಹಾಸ್ಯದ ಸಮ್ಮಿಲತ ಗೊಂಡಿದ್ದರು ಕೂಡ ರೂಪಿ ಹಾಗೂ ವರ್ಷಿಣಿ ಅವರ ನಡುವಿನ ಸುಂದರ ಸ್ನೇಹ ಸಂಬಂಧವನ್ನೂ ಕೂಡ ಅನಾವರಣಗೊಳಿಸುತ್ತದೆ. ಈ ವಿಡಿಯೋವನ್ನು ವರ್ಷಿಣಿ ಎನ್ನುವವರು ಶೇರ್ ಮಾಡಿದ್ದು, ಸದ್ಯ ಈ ವಿಡಿಯೋ ಒಂದೂವರೆ ಲಕ್ಷ ಲೈಕ್ಸ್ ಅನ್ನು ಹೊಂದಿದೆ.

ವೀಡಿಯೋ ಶೇರ್ ಮಾಡಿಕೊಂಡಿರುವ ವರ್ಷಿಣಿ ಅವರು, ಕಂಗ್ರಾಜುಲೇಷನ್ಸ್ ರೂಪೇಶ್ ಶೆಟ್ಟಿ , ನೀವು ಕಳೆದ 5 ತಿಂಗಳಿಂದ ಹಂಚಿಕೊಂಡ ಸುಂದರವಾದ ಸ್ನೇಹದ ಫಲಿತಾಂಶ ಇದು ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದ್ದು, ನೀವು ತುಂಬಾ ಸ್ವೀಟ್ ಎಂದು ಹೇಳಿರುವ ಜೊತೆಗೆ ನಾವು ಹೆಚ್ಚಿನ ಜನರು ರಾಕೇಶ್ ಅವರು ಟ್ರೋಫಿ ಎತ್ತಬೇಕೆಂದು ಅಂದುಕೊಂಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ನೀವು ಗೆದ್ದಾಗಲೂ ಕೂಡ ಸಮ ಪ್ರಮಾಣದ ಆಗಿ ಖುಷಿಯಾಗಿದೆ ಎಂದು ಬರೆದು ವೀಡಿಯೋ ಹಂಚಿಕೊಳ್ಳಲಾಗಿದೆ.